Crime – ನಮ್ಮ ನಿಜ ಜೀವನದಲ್ಲಿ ನಡೆಯುವಂತಹ ಕೆಲವೊಂದು ಘಟನೆಗಳು ಸಿನೆಮಾ ಸ್ಟೋರಿಗಿಂತಲೂ ವಿಭಿನ್ನವಾಗಿರುತ್ತದೆ. ಇಲ್ಲೊಂದು ಘಟನೆ ಅದಕ್ಕೆ ಉತ್ತಮ ಉದಾಹರಣೆ ಎಂದೇ ಹೇಳಬಹುದಾಗಿದೆ. ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಮಹಾಕುಂಭ ಮೇಳಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಬಳಿಕ ಮಕ್ಕಳ ಬಳಿ ಬಂದು ನಿಮ್ಮ ತಾಯಿ ಕಳೆದುಹೋಗಿದ್ದಾಳೆ ಎಂಬ ಕಥೆ ಕಟ್ಟಿದ್ದಾನೆ. ಆ ವ್ಯಕ್ತಿ ಕಟ್ಟಿ ಕಥೆ ಸಿನೆಮಾ ಸ್ಟೋರಿಗಿಂತಲೂ ಕಡಿಮೆಯಿಲ್ಲ ಎಂದೇ ಹೇಳಬಹುದಾಗಿದೆ.

ಸುಮಾರು 60 ಕೋಟಿಗೂ ಅಧಿಕ ಮಂದಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗಿಯಾಗಿದ್ದಾರೆ. ಈ ಮಹಾಕುಂಭ ಶಿವರಾತ್ರಿ ಹಬ್ಬದಂದು ಕೊನೆಯಾಗಲಿದೆ. ಈ ಮಹಾ ಕುಂಭಮೇಳಕ್ಕೆ ದೆಹಲಿ ಮೂಲಕ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕರೆದುಕೊಂಡು ಹೋಗಿದ್ದ. ಅಶೋಕ್ ಬಾಲ್ಮಿಕಿ ಎಂಬ ವ್ಯಕ್ತಿ ತನ್ನ ಪತ್ನಿಯನ್ನು ಮಹಾಕುಂಭಕ್ಕೆ ಕರೆದುಕೊಂಡು ಹೋಗಿ ತ್ರಿವೇಣಿ ಸಂಗಮದಲ್ಲಿ ಅವರ ಪೊಟೋಗಳು ಹಾಗೂ ವಿಡಿಯೋಗಳನ್ನು ಸಹ ತೆಗೆದುಕೊಂಡು ಸೋಷಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ನಂತರ ರಾತ್ರಿ ವೇಳೆಗೆ ಒಂದು ಲಾಡ್ಜ್ ನಲ್ಲಿ ತಂಗಲು ಹೋಗಿದ್ದಾರೆ. ಮರುದಿನ ನಿನ್ನನ್ನು ಪವಿತ್ರ ಸ್ನಾನಕ್ಕೆ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದ್ದ. ಆದರೆ ನಂತರ ದಿನ ಆಗಿದ್ದೇ ಬೇರೆಯಾಗಿತ್ತು.
ಲಾಡ್ಜ್ ನಲ್ಲಿ ತಂಗಿದ್ದ ಅಶೋಕ್ ಹಾಗೂ ಮೀನಾಕ್ಷಿ ಮರುದಿನ ಬೆಳಿಗ್ಗೆ ಪುಣ್ಯ ಸ್ನಾನ ಹೋಗಲು ತೀರ್ಮಾನ ಮಾಡಲಾಗಿತ್ತು. ಬೆಳಿಗ್ಗೆ ಮೀನಾಕ್ಷಿ ರಕ್ತಸಿಕ್ತ ದೇಹ ಲಾಡ್ಜ್ ಕೋಣೆಯಲ್ಲಿ ಕಂಡುಬಂದಿತ್ತು. ಆದರೆ ಅಶೋಕ್ ಅಲ್ಲಿಂದ ಪರಾರಿಯಾಗಿದ್ದಾನೆ. ಮನೆಗೆ ಬಂದ ಅಶೋಕ್ ತನ್ನ ಮಕ್ಕಳ ಬಳಿ ನಿಮ್ಮ ತಾಯಿ ಕಳೆದುಹೋಗಿದ್ದಾಳೆ ಎಂದು ಹೇಳಿದ್ದಾನೆ. ಈ ದಂಪತಿ ಝಾನ್ಸಿ ಎಂಭ ಪ್ರದೇಶದಲ್ಲಿ ರೂಂ ಬುಕ್ ಮಾಡಿದ್ದರು. ಪೊಲೀಸ್ ಮೂಲಗಳ ಪ್ರಕಾರ ಈ ದಂಪತಿ 500 ರೂಪಾಯಿಗೆ ರೂಂ ಬುಕ್ ಮಾಡಿಕೊಂಡಿದ್ದರು. ಆದರೆ ಅವರ ಗುರುತಿನ ದಾಖಲೆ ಪಡೆದುಕೊಂಡಿರಲಿಲ್ಲವಂತೆ. ರಾತ್ರಿ ಸಮಯದಲ್ಲಿ ಅಶೋಕ್ ತನ್ನ ಪತ್ನಿ ಮೀನಾಕ್ಷಿಯನ್ನು ಹರಿತವಾದ ಆಯುಧದಿಂದ ಕೊಂದು ಪರಾರಿಯಾಗಿದ್ದಾನೆ.
ಇನ್ನೂ ಅಶೋಕ್ ತನ್ನ ಮೀನಾಕ್ಷಿ ಹರಿತವಾದ ಆಯುಧದಿಂದ ಕೊಂದಿದ್ದಾನೆ. ಮಹಾಕುಂಭದಲ್ಲಿ ತನ್ನ ಹೆಂಡತಿ ಕಳೆದುಹೋಗಿದ್ದಾಳೆ ಎಂದು ಹೇಳಲಾಗಿತ್ತು. ಆದರೆ ಮಾರನೆ ದಿನ ಲಾಡ್ಜ್ ನಲ್ಲಿ ಮೀನಾಕ್ಷಿ ಶವ ಪತ್ತೆಯಾಗಿತ್ತು. ಇನ್ನೂ ಲಾಡ್ಜ್ ನಲ್ಲಿ ಗುರುತಿನ ಚೀಟಿ ಇಲ್ಲದ ಕಾರಣ ಅವರ ಚಹರೆಯನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸಮಸ್ಯೆಯಾಗಿತ್ತು. ಆದರೆ ಅವರ ಮಗ ತನ್ನ ತಾಯಿಯನ್ನು ಹುಡುಕುತ್ತಾ ಪ್ರಯಾಗ್ ರಾಜ್ ಗೆ ಹೋದಾಗ ಅನುಮಾನ ಬಂದಿದೆ. ಝಾನ್ಸಿ ಪೊಲೀಸರಿಗೆ ಮೀನಾಕ್ಷಿಯ ಪೊಟೋ ತೋರಿಸಿ ಅವರು ಕಾಣೆಯಾಗಿದ್ದಾರೆ ಎಂದು ಹೇಳಿದ್ದರು.
ಬಳಿಕ ಪೊಲೀಸರು ಮೃತಳ ಮಗನನ್ನು ಪ್ರಯಾಗ್ ರಾಜ್ ನಲ್ಲಿರುವ ಶವಾಗಾರಕ್ಕೆ ಕರೆದುಕೊಂಡು ಹೋದರು. ಅಲ್ಲಿ ಆತ ತನ್ನ ತಾಯಿಯ ಶವವನ್ನು ಗುರ್ತಿಸಿದ್ದಾನೆ. ಬಳಿಕ ಅಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ನಂತರ ನಡೆದ ಘಟನೆ ತಿಳಿದಿದ್ದು, ಅಶೋಕ್ ನನ್ನು ಪತ್ತೆ ಮಾಡಿ ಬಂಧನ ಮಾಡಲಾಗಿದೆ. ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.