Maha Kumbh 2025 – ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಮಹಾಕುಂಭ ಮೇಳದ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ಇದೀಗ ಖ್ಯಾತ ವಿಜ್ಞಾನಿ ಡಾ.ಅಜಯ್ ಸೋಂಕರ್ ಪುಲ್ ಸ್ಟಾಪ್ ಇಟ್ಟಿದ್ದಾರೆ. ಮಹಾಕುಂಭದಲ್ಲಿ ಕೋಟ್ಯಂತರ ಜನ ಸ್ನಾನ ಮಾಡಿದರೂ ಗಂಗಾ ನದಿ ಸಂಪೂರ್ಣವಾಗಿ ರೋಗಾಣು ಮುಕ್ತವಾಗಿದೆ ಎಂದು ಹೇಳಿದ್ದಾರೆ.

ಕಳೆದ ಜನವರಿ 13 ರಿಂದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಇಲ್ಲಿಯವರೆಗೂ ಸುಮಾರು 60 ಕೋಟಿಗೂ ಹೆಚ್ಚು ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ. ಇದರ ನಡುವೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಗಂಗಾ ನೀರಿನ ಗುಣಮಟ್ಟದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿತ್ತು. ಆದರೆ ಇದೀಗ ಖ್ಯಾತ ವಿಜ್ಞಾನಿ ಡಾ.ಅಜಯ್ ಸೋಂಕರ್ ಅವರು ಗಂಗಾ ನದಿಯು 1,100 ವಿವಿಧ ಬ್ಯಾಕ್ಟಿರಿಯೀಫೇಜ್ ಗಳನ್ನು ಹೊಂದಿರುವಂತಹ ವಿಶ್ವದ ಏಕೈಕ ಸಿಹಿನೀರಿನ ನದಿಯಾಗಿದೆ. ಇದು ಮಾಲಿನ್ಯವನ್ನು ನಿವಾರಿಸುವುದರ ಜೊತೆಗೆ ಹಾನಿಕರಾಕ ಬ್ಯಾಕ್ಟಿರಿಯಾಗಳನ್ನು ಕೊಲ್ಲುತದೆ ಎಂದು ಹೇಳಲಾಗಿದೆ.
ಇನ್ನೂ ಡಾ. ಅಜಯ್ ಕುಮಾರ್ ಸೋಂಕರ್ ಅವರು, ಗಂಗಾ ನದಿಯ ಶುದ್ಧತೆಯ ಬಗ್ಗೆ ಇರುವ ಅನುಮಾನಗಳನ್ನು ವೈಜ್ಞಾನಿಕ ಪುರಾವೆಗಳೊಂದಿಗೆ ನಿವಾರಿಸಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಮಹಾ ಕುಂಭ ನಗರದ ಸಂಗಮ್ ನೋಸ್ ಹಾಗೂ ಅರೈಲ್ ಸೇರಿದಂತೆ ಐದು ಪ್ರಮುಖ ಸ್ನಾನ ಗೃಹಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದು, ಅದನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಯಿತು. ಈ ನೀರಿನಲ್ಲಿ ಕೋಟ್ಯಂತರ ಭಕ್ತರು ಸ್ನಾನ ಮಾಡುತ್ತಿದ್ದರೂ ನೀರಿನ pH ಮಟ್ಟದಲ್ಲಿ ಯಾವುದೇ ಬ್ಯಾಕ್ಟೀರಿಯಾದ ಬೆಳವಣಿಗೆ ಅಥವಾ ಇಳಿಕೆ ಕಂಡುಬಂದಿಲ್ಲ ಎಂದು ಉಲ್ಲೇಖಿಸಲಾಗಿದೆ.

ಉತ್ತರ ಪ್ರದೇಶ ಸರ್ಕಾರದ ಪ್ರಕಟಣೆಯ ಪ್ರಕಾರ, ಡಾ.ಸೋಂಕರ್ ರವರ ಸಂಶೋಧನೆಯು ಗಂಗಾ ನೀರಿನಲ್ಲಿ 1,100 ವಿಧದ ಬ್ಯಾಕ್ಟೀರಿಓಫೇಜ್ ಗಳಿವೆ ಎಂದು ಬಹಿರಂಗಪಡಿಸಿದೆ. ಇದು ಹಾನಿಕಾರಕ ಬ್ಯಾಕ್ಟಿರಿಯಾಗಳನ್ನು ನಿವಾರಿಸುವ ನೈಸರ್ಗಿಕ ವೈರಸ್ ಗಳಾಗಿದೆ. ಗಂಗಾ ನದಿಯಲ್ಲಿ 57 ಕೋಟಿ ಮಂದಿ ಸ್ನಾನ ಮಾಡಿದ ಬಳಿಕವೂ ನದಿ ಕಲುಷಿತವಾಗದಂತೆ ಈ ನೈಸರ್ಗಿಕ ವೈರಸ್ ಗಳು ನೋಡಿಕೊಳ್ಳುತ್ತವೆ. ನದಿಯ pH ಮಟ್ಟವು 8.4 ರಿಂದ 8.6 ರವರೆಗೆ ಇದ್ದು, ಇದು ಸಾಮಾನ್ಯಕ್ಕಿಂತ ಉತ್ತಮವಾಗಿದೆ ಮತ್ತು ಯಾವುದೇ ದುರ್ವಾಸನೆ ಅಥವಾ ಬ್ಯಾಕ್ಟೀರಿಯಾದ ಬೆಳವಣಿಗೆ ಪತ್ತೆಯಾಗಿಲ್ಲ ಎಂದು ಡಾ. ಸೋಂಕರ್ ದೃಢಪಡಿಸಿದ್ದಾರೆ ಎಂದು ತಿಳಿಸಿದೆ.