Heart Attack – ಇತ್ತಿಚಿಗೆ ಸಣ್ಣ ವಯಸ್ಸಿನವರಿಂದ ಹಿರಿಯ ವಯಸ್ಸಿನವರೆಗೂ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಯಾವ ಕ್ಷಣದಲ್ಲಿ ಯಾರಿಗೆ ಯಾವಾಗ ಸಾವು ಬರುತ್ತೆ ಎಂಬುದನ್ನು ಹೇಳೋಕೆ ಆಗೋಲ್ಲ. ಇದೀಗ 10ನೇ ತರಗತಿ ಓದುತ್ತಿರುವ ಬಾಲಕಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕಳೆದ ಗುರುವಾರ ಮುಂಜಾನೆ ಶಾಲೆಗೆ ಹೋಗುತ್ತಿರುವಾಗ ಶಾಲಾ ಅಂಗಳದಲ್ಲಿ ಏಕಾಏಕಿ ಕುಸಿದು ಬಿದಿದ್ದಾಳೆ. ಅಲ್ಲಿದ್ದವರು ಓಡಿ ಬಾಲಕಿಗೆ ಏನಾಗಿದೆ ಎಂದು ನೋಡುವಷ್ಟರಲ್ಲಿ ಹೃದಯಾಘಾತವಾಗಿತ್ತು, ಕೂಡಲೇ ಶಾಲಾ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಬಾಲಕಿ ಇಹಲೋಕ ತ್ಯೆಜಿಸಿದ್ದಾಳೆ.

ಈ ಘಟನೆ ತೆಲಂಗಾಣದ ಕಮಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಶ್ರೀನಿಧಿ (16) ಎಂದು ಗುರ್ತಿಸಲಾಗಿದೆ. ಈ ಬಾಲಕಿ ರಮಾರೆಡಡಿ ಮಂಡಲ್ ನ ಸಿಂಗಾರಪಲ್ಲಿ ಎಂಬ ಗ್ರಾಮದ ವಾಸಿಯಾಗಿದ್ದು, ಕಮಾರೆಡ್ಡಿ ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಎಂದಿನಂತೆ ಕಳೆದ ಗುರುವಾರ ಶಾಲೆಗೆ ಹೋಗುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಬಾಲಕಿಗೆ ಹೃದಯಾಘಾತ ಸಂಭವಿಸಿ ಶಾಲಾ ಅಂಗಳದಲ್ಲಿಯೇ ಕುಸಿದುಬಿದ್ದಿದ್ದಾಳೆ. ಅದನ್ನು ನೋಡಿದ ಶಾಲಾ ಶಿಕ್ಷಕರು ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ, ಸಿಪಿಆರ್ ಸಹ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

ಇನ್ನೂ ವಿದ್ಯಾರ್ಥಿನಿಯ ಹಠಾತ್ ನಿಧಕ್ಕೆ ಇಡೀ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಬದುಕಿ ಬಾಳಬೇಕಿದ್ದ ಬಾಲಕಿ ಹೃದಯಾಘಾತಕ್ಕೆ ಬಲಿಯಾಗಿದ್ದನ್ನು ಕಂಡ ಆಕೆಯ ಸ್ನೇಹಿತರು ಅತೀವ ನೋವು ವ್ಯಕ್ತಪಡಿಸಿದ್ದಾರೆ. ಕೊನೆಗೆ ಶ್ರೀನಿಧಿಯ ಮೃತದೇಹವನ್ನು ಬಾಲಕಿಯ ಊರಿಗೆ ಕಳುಹಿಸಿಕೊಡಲಾಗಿದೆ. ಇನ್ನೂ ಬಾಲಕಿಯ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಅಲಿಘರ್ ನ ಸಿರೌಲಿ ಗ್ರಾಮದಲ್ಲಿ 6 ವರ್ಷದ ಮೋಹಿತ್ ಚೌಧರಿ ಎಂಬ ಪುಟ್ಟ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದ. ಅದೇ ರೀತಿ ಸ್ನೇಹಿತೆಯರೊಂದಿಗೆ ಆಟವಾಡುತ್ತಿದ್ದಾಗ ದೀಕ್ಷಾ (18) ಎಂಬ ಬಾಲಕಿ ಸಹ ಹೃದಯಾಘಾತದಿಂದ ಮೃಪಟ್ಟಿದ್ದಳು. ಇನ್ನೂ ಕೆಲವೊಂದು ಮೂಲಗಳ ಪ್ರಕಾರ ಕಳೆದ ಎರಡು ವರ್ಷದಲ್ಲಿ ಶೇ.22 ರಷ್ಟು ಹೃದಯಾಘಾತ ಪ್ರಕರಣಗಳು ಹೆಚ್ಚಾಗಿವೆ ಎನ್ನಲಾಗಿದೆ.