TV Serials – ಮನೆಗಳಲ್ಲಿ ಸೀರಿಯಲ್ ಗಳ ಹುಚ್ಚು ಎಷ್ಟಿದೆ ಅಂದ್ರೆ, ಸೀರಿಯಲ್ ನೋಡುವಾಗ ಕಳ್ಳರು ಬಂದು ಮನೆ ಲೂಟಿ ಮಾಡಿದರೂ, ಪಕ್ಕ ಹಾವು ಬಂದರೂ ಸಹ ಟಿ.ವಿ. ಸೀರಿಯಲ್ ನೋಡುತ್ತಾ ಮಗ್ನರಾಗಿರುತ್ತಾರೆ. ಜೊತೆಗೆ ಈ ಸೀರಿಯಲ್ ಅಥವಾ ಸಿನೆಮಾಗಳಲ್ಲಿನ ಕೆಲವೊಂದು ದೃಶ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಪ್ರಯತ್ನಗಳನ್ನು ಸಹ ಮಾಡುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಸೀರಿಯಲ್ ಗಳ ಪ್ರಭಾವಕ್ಕೆ ಒಳಗಾದ ಯುವಕನೋರ್ವ ಕಿಡ್ನಾಪ್ ನಾಟಕ ಮಾಡಿದ್ದಾನೆ. ಈ ಬಾಲಕ ಕಟ್ಟಿದ ಕಥೆಯನ್ನು ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಅಂದಹಾಗೆ ಈ ಘಟನೆ ನಡೆದಿರೋದು ರಾಜಸ್ಥಾನದ ಸೂರತ್ ಘಡ ಥರ್ಮಲ್ ಕಾಲೋನಿಯಲ್ಲಿ. ಈ ಸುದ್ದಿ ಸ್ಥಳೀಯವಾಗಿ ಭಾರಿ ಸದ್ದು ಮಾಡಿದೆ. 8 ವರ್ಷದ ಬಾಲಕನೋರ್ವ ಸಿನಿಮೀಯ ರೀತಿಯಲ್ಲಿ ತನ್ನ ಮೇಲೆ ತಾನೇ ದಾಳಿ ಮಾಡಿಕೊಂಡು ಕಳ್ಳತನದ ಕಥೆ ಕಟ್ಟಿದ್ದಾನೆ. ಕೇವಲ 2000 ಸಾವಿರ ರೂಪಾಯಿಗಳಿಗಾಗಿ ಬಾಲಕ ಕಿಡ್ನಾಪ್ ಆದ ಕಥೆ ಕಟ್ಟಿದ್ದಾನೆ. ಈ ಕುರಿತು ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದಾಗ ಅಸಲೀ ಸತ್ಯ ಹೊರಬಂದಿದೆ. ಪೊಲೀಸರ ತನಿಖೆಯಲ್ಲಿ ಬಾಲಕ ಸೀರಿಯಲ್ ಗಳ ಪ್ರಭಾವಕ್ಕೆ ಒಳಗಾಗಿರುವುದಾಗಿ ತಿಳಿದುಬಂದಿದೆ.
ಕಳೆದ ಶನಿವಾರ ಥರ್ಮಲ್ ಕಾಲೋನಿಯ ಸಿ.ಐ.ಎಸ್.ಎಫ್ ವಸತಿ ಗೃಹದಲ್ಲಿ ವಾಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತನ್ನ ಮಗ ಕಿಡ್ನಾಪ್ ಆಗಿರುವ ಬಗ್ಗೆ ದೂರು ನೀಡಿದ್ದರು. ದೂರುದಾರ ತನ್ನ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅಪರಿಚಿತ ವ್ಯಕ್ತಿಯೋರ್ವ ಮನೆಗೆ ನುಗ್ಗಿದ್ದಾನೆ. ಮನೆಯಲ್ಲಿದ್ದ ನನ್ನ 8 ವರ್ಷದ ಮಗನ ಕೈ ಕಾಲು ಕಟ್ಟಿ, ಬಾಯಿಗೆ ಸೆಲ್ಲೋ ಟೇಪ್ ಅಂಟಿಸಿ 2000 ಸಾವಿರ ಕದ್ದು ಪರಾರಿಯಾಗಿದ್ದಾನೆ. ಬಳಿಕ ಬಾಲಕ ಹೇಗೋ ಪಕ್ಕದ ಮನೆಗೆ ತಲುಪಿ ಘಟನೆಯ ಬಗ್ಗೆ ತಿಳಿಸಿದ್ದಾನೆ. ಈ ಸಿನಿಮೀಯ ಕಥೆ ಸ್ಥಳೀಯವಾಗಿ ಭಾರಿ ಸಂಚಲನ ಮೂಡಿಸಿತ್ತು.

ಇನ್ನೂ ಪೊಲೀಸರು ತನಿಖೆ ನಡೆಸಿದಾಗ ಅಸಲೀ ಸತ್ಯ ಹೊರಬಂದಿದೆ. ಪೊಲೀಸರು ತನಿಖೆ ನಡೆಸಿದಾಗ ಬಾಲಕನ ಗಾಯಗಳ ಬಗ್ಗೆ ವೈದ್ಯರಿಂದ ವರದಿ ಪಡೆದರು. ಈ ವರದಿಯಲ್ಲಿ ಬಾಲಕನ ಗಾಯಗಳು ಸ್ವಯಂ ರಚಿತ ಎಂದು ತಿಳಿಸಿದ್ದು, ಇದರಿಂದ ಪೊಲೀಸರಿಗೆ ಅನುಮಾನ ಮೂಡಿದೆ. ನಂತರ ಬಾಲಕನನ್ನು ವಿಚಾರಣೆ ನಡೆಸಿದಾಗ ಅಸಲೀ ಸತ್ಯ ಹೊರಬಂದಿದೆ. ಬಾಲಕ ಟೇಪ್ ಸುತ್ತಿಕೊಂಡು, ಸಣ್ಣ ಗೀರುಗಳನ್ನು ಮಾಡಿಕೊಂಡು ತಾನೆ ಹಣ ಕಳ್ಳತನ ಮಾಡಿ ಮನೆಯಲ್ಲಿಯೇ ಅಡಗಿಸಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಇನ್ನೂ ಟಿ.ವಿ. ಸೀರಿಯಲ್ ಗಳಲ್ಲಿ ಬರುವಂತಹ ಅಪರಾಧ ಕಾರ್ಯಕ್ರಮಗಳನ್ನು ನೊಡಿ ಪ್ರಭಾವಿತನಾಗಿ ಈ ರೀತಿಯ ಪ್ಲಾನ್ ಮಾಡಿದ್ದಾನೆ ಎಂದು ತಿಳಿದುಬಂದಿದೆ.