Saturday, August 30, 2025
HomeStateRepublic Day: ಗುಡಿಬಂಡೆಯಲ್ಲಿ ಅದ್ದೂರಿಯಾಗಿ ನಡೆದ 76ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆ

Republic Day: ಗುಡಿಬಂಡೆಯಲ್ಲಿ ಅದ್ದೂರಿಯಾಗಿ ನಡೆದ 76ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆ

Republic Day : ಗುಡಿಬಂಡೆ ತಾಲೂಕಿನ ಅಭಿವೃದ್ದಿಗೆ ಸದಾ ಸಿದ್ದವಾಗಿದ್ದು, ಅದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಮುಂದಿನ ಬಜೆಟ್ ನಲ್ಲಿ ತಾಲೂಕಿನ ಜನರ ಪ್ರಮುಖ ಬೇಡಿಕೆಯಾದ ಬಸ್ ಡಿಪೋ ಮಂಜೂರು ಮಾಡಿಸುತ್ತೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭರವಸೆ ನೀಡಿದರು.ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯತಿ ಹಾಗೂ ಪಟ್ಟಣ ಪಂಚಾಯತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.

Republic Day in Gudibande 3

ಈಗ ನಮ್ಮದೇ ಸರ್ಕಾರ ಇದ್ದು ಒಳ್ಳೆಯ ಯೋಜನೆಗಳನ್ನು ತರುವ ಮೂಲಕ ಅಭಿವೃದ್ಧಿಯಾಗುತ್ತದೆ. ಗುಡಿಬಂಡೆ ಜನರ ಬಹುದಿನಗಳ ಬೇಡಿಕೆಯಾಗಿರುವ ಬಸ್ ಡಿಪೋ ಈ ಬಜೆಟ್ ನಲ್ಲಿ ಗುಡಿಬಂಡೆ ಬಸ್ ಡಿಪೋ ಗೆ ಸ್ಯಾಕ್ಷನ್ ಆಗಲಿದೆ ಅದೇ ರೀತಿ ಕ್ರೀಡಾಂಗಣ, ಮಿನಿ ಕೃಷಿ ಮಾರುಕಟ್ಟೆಗೆಯನ್ನು ಮುಂದಿನ ದಿನಗಳಲ್ಲಿ ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು. ಗುಡಿಬಂಡೆ ಪಟ್ಟಣದ ಮನೆ ಮನೆಗೆ ನೀರು ನೀಡುವ 16 ಕೋಟಿ ಮಂಜೂರಾಗಿದ್ದು ಶೀಘ್ರದಲ್ಲಿ ಚಾಲನೆ ನೀಡಲಾಗುತ್ತದೆ. ಗುಡಿಬಂಡೆ ಕೆರೆಯಿಂದ 37 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಯೋಜನೆ, ಪ್ರವಾಸೋದ್ಯಮದಲ್ಲಿ ಪಿಪಿಟಿ ಅನುದಾನದಲ್ಲಿ ನಾನೇ ಮುಂದೆ ನಿಂತು ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ಮುಂದಾಗಿದ್ದೇನೆ. ರಾಜ್ಯದಲ್ಲಿ ಪ್ರತಿ ಹಳ್ಳಿಗೂ ಶೂದ್ಧ ಕುಡಿಯುವ ನೀರು ನೀಡಿರುವ ಏಕೈಕ ತಾಲ್ಲೂಕು ಗುಡಿಬಂಡೆ ತಾಲ್ಲೂಕು ತಾಲ್ಲೂಕಿನ ಪ್ರತಿ ಹಳ್ಳಿಗೂ ಸಹ ಶುದ್ಧ ಕುಡಿಯುವ ನೀರನ್ನು ನೀಡಿದ್ದೇವೆ. ಇನ್ನು ಹೆಚ್ಚಿನ ಅಭಿವೃದ್ಧಿ ಮಾಡಲು ಎಲ್ಲಾ ಅಧಿಕಾರಿಗಳ ಮತ್ತು ಗುಡಿಬಂಡೆ ಜನತೆಯ ಸಹಕಾರ ಬೇಕಾಗಿದೆ. ನಿಮ್ಮೆಲ್ಲರ ಸಹಕಾರ ಇದ್ದರೆ ಇನಷ್ಟು ಅಭಿವೃದ್ಧಿ ಮಾಡಲು ನಾನು ಸಿದ್ದನಾಗಿದ್ದೇನೆ ಎಂದರು.

Republic Day in Gudibande 2

ದೇಶದಲ್ಲಿ ದೊಡ್ಡಹಬ್ಬವೆಂದರೆ ಎರಡೇ ಒಂದು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ. ಎರಡೂ ಹಬ್ಬಗಳು ಧಾರ್ಮಿಕ ಹಬ್ಬಗಳಿಗೆ ಹೋಲಿಕೆ ಮಾಡಿಕೊಂಡರೆ ಇವೆರಡು ಮಹತ್ವವಾದವು. ನಾವು ಈದಿನ ಸ್ವಾತಂತ್ಯವಾಗಿ ಜೀವನ ನಡೆಸುತ್ತಿದ್ದೇವೆ ಎಂದರೆ ಇದು ನಮ್ಮ ಸಂವಿಧಾನ. ದೇಶದಲ್ಲಿ ಎಲ್ಲಾ ಧರ್ಮಿಯರು ಸೇರಿ ಆಚರಣೆ ಮಾಡುವ ಹಬ್ಬ ಗಣರಾಜ್ಯೋತ್ಸವ ದಿನ. ಡಾ. ಬಿ.ಆರ್. ಅಂಬೇಡ್ಕರ್ ರವರು ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕನ್ನು ಕೊಟ್ಟಂತಹ ಮಹಾತ್ಮರು. ನಮ್ಮ ದೇಶ ಅಭಿವೃದ್ದಿಯಾಗಬೇಕು ಎಂದರು.

Republic Day in Gudibande 1

ಮುಖ್ಯ ಭಾಷಣಕಾರರಾಗಿ ಪತ್ರಕರ್ತರ ಸಂಘದ ಖಜಾಂಚಿ ವಿ.ರಾಜಶೇಖರ್ ಸಂವಿಧಾನದ ರಚನೆ ಹಾಗೂ ಗಣರಾಜ್ಯೋತ್ಸವದ ಬಗ್ಗೆ ಮಾತನಾಡಿ, ಭಾರತಕ್ಕೆ ಸ್ವತಂತ್ರ ಸಿಕ್ಕ ಬಳಿಕ ಆಯಾ ರಾಜ್ಯಗಳಲ್ಲಿದ್ದ ರಾಜರುಗಳ ಆಳ್ವಿಕೆಯೇ ಇತ್ತು. ಭಾರತ ದೇಶ ಒಂದಾದರೂ ಆಯಾ ರಾಜ್ಯಗಳಲ್ಲಿ ಕಾನೂನುಗಳು ಬೇರೆಯಿತ್ತು. ಆದ್ದರಿಂದ ಅಂದು ಸರ್ದಾರ್‍ ವಲ್ಲಭಾಯ್ ಪಟೇಲ್ ರವರು ಸೇರಿದಂತೆ ಹಲವು ಎಲ್ಲಾ ರಾಜ್ಯಗಳನ್ನು ಒಟ್ಟುಗೂಡಿಸಿದರು. ಹೈದರಾಬಾದ್ ನಿಜಾಮ ಭಾರತಕ್ಕೆ ಸೇರಲು ಹಿಂದೇಟು ಹಾಕುತ್ತಿದ್ದಾಗ ಹೈದರಾಬಾದ್ ನಲ್ಲಿ ದಬ್ಬಾಳಿಕೆ ನಡೆಸುತ್ತಿದ್ದ ರಜಾಕರ್‍ ಸೇನೆಯ ಮೇಲೆ ಭಾರತೀಯ ಸೇನೆಯ ಮೂಲಕ ಧಾಳಿ ನಡೆಸಿದರು. ಈ ರೀತಿಯಾಗಿ ಭಾರತದಲ್ಲಿದ್ದ ಎಲ್ಲಾ ರಾಜ್ಯಗಳನ್ನು ಒಟ್ಟುಗೂಡಿಸಿ ಅಖಂಡ ಭಾರತ ಮಾಡಿದ ಹಿನ್ನೆಲೆಯಲ್ಲಿ ಗಣರಾಜ್ಯವನ್ನು ಆಚರಣೆ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣದ ವಿವಿಧ  ಶಾಲಾ ಮಕ್ಕಳಿಂದ ಪಥಸಂಚಲನ, ಕವಾಯತ್, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿಕೊಟ್ಟರು. ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತ ಶಾಲೆಗಳಿಗೆ ಬಹುಮಾನಗಳನ್ನು ನೀಡಿದರು. ತಹಶೀಲ್ದಾರ್ ಸಿಗ್ಬತುಲ್ಲ, ತಾಲ್ಲೂಕು ಪಂಚಾಯತಿ ಇಓ ಎಂ. ನಾಗಮಣಿ, ಶಿಕ್ಷಣಾಧಿಕಾರಿ ಎಂ.ಎಸ್. ಕೃಷ್ಣಪ್ಪ ಮಾತನಾಡಿದರು.

Republic Day in Gudibande 0

ಈ ವೇಳೆ ಪಟ್ಟಣ ಪಂಚಾಯತಿ ಅಧ್ಯಕ್ಷ ಎ ವಿಕಾಸ್, ಉಪಾಧ್ಯಕ್ಷ ಗಂಗರಾಜು, ಸದಸ್ಯರು, ಮುಖ್ಯಾಧಿಕಾರಿ ಸಬಾ ಶಿರೀನ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ. ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಮಂಜುನಾಥ, ಪತ್ರಕರ್ತರ ಸಂಘದ ಅಧ್ಯಕ್ಷ ಆರ್. ಬಾಲಾಜಿ, ಸರ್ಕಲ್ ಇನ್ಸ್ ಪೆಕ್ಟರ್ ನಯಾಜ್ ಬೇಗ್, ಸಬ್ ಇನ್ಸ್ ಪೆಕ್ಟರ್ ಗಣೇಶ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು, ಸೇರಿದಂತೆ ಇತರರು ಭಾಗವಹಿಸಿದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular