Viral Video – ಇತ್ತೀಚಿಗೆ ಅಕ್ರಮ ಸಂಬಂಧಗಳು ತುಂಬಾನೆ ಹೆಚ್ಚಾಗುತ್ತಿವೆ ಎಂದೇ ಹೇಳಬಹುದು. ಮದುವೆಯಾಗಿದ್ದರೂ ಸಹ ಪತಿ/ಪತ್ನಿ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುತ್ತಾರೆ. ಈ ಕಾರಣದಿಂದ ಅನೇಕ ಅನಾಹುತಗಳೂ ಸಹ ನಡೆದಿದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ತನ್ನ ಪತಿ ಬೇರೊಬ್ಬ ಯುವತಿಯೊಂದಿಗೆ ಕಾಣಿಸಿಕೊಂಡಿದ್ದು, ನಡುರಸ್ತೆಯಲ್ಲೇ ಆತನನ್ನು ಹಿಡಿದು ಕಪಾಳಮೋಕ್ಷ ಮಾಡಿದ್ದಾಳೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹರಿದಾಡುತ್ತಿದೆ.

ಈ ಘಟನೆ ಉತ್ತರಪ್ರದೇಶದ ಝಾನ್ಸಿಯ ನವಾಬಾದ್ ನಲ್ಲಿ ನಡೆದಿದೆ. ಮಹಿಳೆಯೊಬ್ಬರು ತನ್ನ ಪತಿ ಬುರ್ಖಾ ಧರಿಸಿದ ಪ್ರೇಯಸಿಕೊಂದಿಗೆ ಕಾಣಿಸಿಕೊಂಡಿದ್ದಾನೆ. ಅದನ್ನು ನೋಡಿದ ಪತ್ನಿ ಆಕ್ರೋಷಗೊಂಡಿದ್ದಾಳೆ. ಹೆಂಡತಿ ತನ್ನ ಪತಿಯನ್ನು ಗದರಿಸಿ ನಡುರಸ್ತೆಯಲ್ಲಿಯೇ ಕಪಾಳ ಮೋಕ್ಷ ಮಾಡಿದ್ದಾಳೆ. ನಂತರ ರಸ್ತೆಯ ಮಧ್ಯೆಯೇ ಗಲಾಟೆ ಸೃಷ್ಟಿಸಿದ್ದಾಳೆ. ಹಗಲು ಸಮಯದಲ್ಲೇ ಈ ಘಟನೆ ನಡೆದಿದೆ. ಮಹಿಳೆಯ ಪತಿ ಸುಮಾರು ದಿನಗಳಿಂದ ಮನೆಯಿಂದ ಕಾಣೆಯಾಗಿದ್ದ. ಆಕೆ ಎಲ್ಲೋ ಏನೋ ನಡೆಯುತ್ತಿದೆ ಎಂದು ಅನುಮಾನಿಸಿ ಆತನನ್ನು ಹಿಂಬಾಲಿಸಿದ್ದಾಳೆ. ಬಳಿಕ ಮಹಿಳೆಗೆ ತನ್ನ ಪತಿ ಎಲ್ಲಿದ್ದಾನೆ ಏನು ಮಾಡುತ್ತಿದ್ದಾನೆ ಎಂಬುದು ತಿಳಿದಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ತನ್ನ ಪತಿಯನ್ನು ಹಿಂಬಾಳಿಸಿದ ಪತ್ನಿಗೆ ಬಿಕೆಡಿ ಚೌಕ್ ಎಂಬ ಪ್ರದೇಶದಲ್ಲಿ ಆಕೆ ಬೇರೆ ಮಹಿಳೆಯೊಂದಿಗೆ ಇರೋದು ತಿಳಿದಿದೆ. ಇದನ್ನು ನೋಡಿದ ಪತ್ನಿ ಸಾರ್ವಜನಿಕವಾಗಿಯೇ ಗಂಡನ ಮುಂದೆ ನಿಂತು ತನಗೆ ಆತ ಮೋಸ ಮಾಡುತ್ತಿದ್ದಾನೆ ಎಂದು ಆರೋಪ ಮಾಡಿದ್ದಾಳೆ. ಪತಿ ಬುರ್ಖಾ ಧರಿಸಿ ಮಹಿಳೆಯೊಂದಿಗೆ ಇರೋದನ್ನು ನೋಡಿ ಪತಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಆಕೆಗೆ ಕೋಪ ನಿಯಂತ್ರಣ ಮಾಡಿಕೊಳ್ಳಲು ಆಗದೇ ಇದ್ದರೇ ಪತಿಗೆ ಹಲವು ಬಾರಿ ಕಪಾಳ ಮೋಕ್ಷ ಮಾಡಿದ್ದಾಳೆ. ಈ ಸಮಯದಲ್ಲಿ ಪತಿ ತನ್ನನ್ನು ಸಮರ್ಥಿಸಿಕೊಳ್ಳಲು ಮತ್ತು ವಿವರಣೆ ನೀಡಲು ಸಹ ಮುಂದಾಗಿದ್ದಾನೆ. ಆದರೆ ಹೆಂಡತಿಯ ಕೋಪ ಮಾತ್ರ ಕಡಿಮೆಯಾಗಿಲ್ಲ ಎಂದು ಹೇಳಲಾಗಿದೆ. ಇನ್ನೂ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ ಎನ್ನಲಾಗಿದೆ.