Sainik School – ದೇಶದಲ್ಲಿರುವ ಸೈನಿಕ ವಸತಿ ಶಾಲೆಗಳಲ್ಲಿ 6ನೇ ತರಗತಿ ಹಾಗೂ 9ನೇ ತರಗತಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಸೈನಿಕ ವಸತಿ ಶಾಲೆಗಳಲ್ಲಿ ಓದಲು ಆಸಕ್ತಿಯಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 2025-26ನೇ ಸಾಲಿನ ಸೈನಿಕ ಶಾಲಾ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅರ್ಜಿ ಆಹ್ವಾನಿಸಿದ್ದು, ಜ.13ರೊಳಗೆ ಅಧಿಕೃತ ವೆಬ್ ಸೈಟ್ aissee2025.ntaonline.in ಮೂಲಕ ನೊಂದಣಿ ಮಾಡಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಹಾಗೂ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ.

ಸೈನಿಕ ಶಾಲೆಗಳ 2025-26ನೇ ಸಾಲಿನ ಪ್ರವೇಶಕ್ಕೆ ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷಾ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. 6ನೇ ತರಗತಿ ಹಾಗೂ 9ನೇ ತರಗತಿ ವಿದ್ಯಾರ್ಥಿಗಳು ಸೈನಿಕ ಶಾಲೆಯಲ್ಲಿ ಮುಂದಿನ ವಿದ್ಯಾಭ್ಯಾಸ ಮುಂದುವರೆಸಲು ಅರ್ಜಿ ಸಲ್ಲಿಸಬಹುದಾಗಿದೆ. ಈ ಶಾಲೆಗಳಲ್ಲಿ ವಸತಿ ಶಾಲಾ ಮಾದರಿಯಲ್ಲಿ ಶಿಕ್ಷಣ ನೀಡಲಾಗುತ್ತದೆ. ಜನವರಿ 13ರೊಳಗೆ ಅಧಿಕೃತ ವೆಬ್‌ಸೈಟ್ aissee2025.ntaonline.in ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಇನ್ನೂ ಸೈನಿಕ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ 10-12 ವರ್ಷದೊಳಗಿನ ಅಂದರೇ 1-4-2013 ರಿಂದ 31-3-2015 ರ ನಡುವೆ ಜನಿಸಿದ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ. 9ನೇ ತರಗತಿ ಪ್ರವೇಶಕ್ಕೆ 13-15 ವರ್ಷದೊಳಗಿನ ಅಂದರೇ 1-4-2010 ರಿಂದ 31-3-2012 ರ ನಡುವೆ ಜನಿಸಿದ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ. ಪ್ರವೇಶದ ಸಮಯದಲ್ಲಿ 8ನೇ ತರಗತಿ ಮುಗಿಸಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿಭಾಗಕ್ಕೆ 650 ರೂ ಹಾಗೂ ಸಾಮಾನ್ಯ, ಒಬಿಸಿ (ಎನ್‌ಸಿಎಲ್), ರಕ್ಷಣಾ, ಮಾಜಿ ಸೈನಿಕ ವಿಭಾಗಕ್ಕೆ 800 ರೂ ಅರ್ಜಿ ಶುಲ್ಕ ನಿಗಧಿಪಡಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜ.13 ಕೊನೆಯ ದಿನಾಂಕವಾಗಿದೆ.

Apply Online for Sainik School Admission 2025
- Go to the Website : Visit the official site: aissee.nta.nic.in
- Register Yourself: Click on “New Registration” and fill in basic details like your name, date of birth, and contact info.
- Fill Out the Form: Log in to your account and complete the form with all the necessary details. Make sure everything is correct.
- Upload Documents : Scan and upload the required documents. Check the size and format to ensure they’re accepted.
- Pay the Fee : Pay the application fee online using UPI, Debit Card, or Net Banking.
- Submit the Form : Review everything to avoid mistakes, then hit “Submit.” Don’t forget to save or print a copy for future use!