Saturday, August 30, 2025
HomeNationalViral News : ಬಿಹಾರದಲ್ಲಿ ನಡೀತು ಅಮಾನವೀಯ ಘಟನೆ, ಬಡಪಾಯಿ ವ್ಯಕ್ತಿಗೆ ಚಿತ್ರಹಿಂಸೆ ಕೊಟ್ಟು,...

Viral News : ಬಿಹಾರದಲ್ಲಿ ನಡೀತು ಅಮಾನವೀಯ ಘಟನೆ, ಬಡಪಾಯಿ ವ್ಯಕ್ತಿಗೆ ಚಿತ್ರಹಿಂಸೆ ಕೊಟ್ಟು, ಎಂಜಲು ನೆಕ್ಕಿಸಿದ ದುರುಳರು…!

Viral News – ಇಂದಿನ ಸಮಾಜದಲ್ಲಿ ಆಗಾಗ ಕೆಲವೊಂದು ಅಮಾನವೀಯ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಅಂತಹ ಅಮಾನವೀಯ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ಬಿಹಾರದ ಕಾಲೇಜೊಂದರ ಕ್ಯಾಂಪಸ್ ನಲ್ಲಿ ಮೂರು ಮಂದಿ ಪುಂಡರ ಗುಂಪೊಂದು ವ್ಯಕ್ತಿಯೊಬ್ಬನಿಗೆ ಚಿತ್ರಹಿಂಸೆ ನೀಡಿದ್ದಾರೆ. ಪುಂಡರು ವ್ಯಕ್ತಿಗೆ ಕೋಲು (Viral News) ಹಾಗೂ ಬೆಲ್ಟ್ ನಿಂದ ಥಳಿಸಿದ್ದಾರೆ. ಜೊತೆಗೆ ನೆಲದ ಮೇಲೆ ಎಂಜಲು ಉಗುಳಿ ಅದನ್ನು ಬಲವಂತವಾಗಿ ನೆಕ್ಕಿಸಿದ್ದಾರೆ ಎಂದು ಹೇಳಲಾಗಿದ್ದು, ಈ ಸಂಬಂಧ ವಿಡಿಯೋ ಸಹ ವೈರಲ್ ಆಗಿದೆ. ಮೂಲಗಳ ಪ್ರಕಾರ ಈ ವಿಡಿಯೋವನ್ನು ಬಿಹಾರದ ಮುಜಾಫರ್‍ ಪುರದ ಎಂ.ಎಸ್.ಕೆ.ಬಿ ಕಾಲೇಜಿನಲ್ಲಿ ಚಿತ್ರೀಕರಣಗೊಂಡ ವಿಡಿಯೋ ಎಂದು ಹೇಳಲಾಗಿದೆ.

muzaffarpur bad incident video viral 1

ಬಿಹಾರದ ಮುಜಾಫರ್‍ ಪುರದ ಎಂ.ಎಸ್.ಕೆ.ಬಿ ಕಾಲೇಜಿನಲ್ಲಿ ಈ ಘಟನೆ ನಡೆಯುವಾಗ ಅಲ್ಲಿ ಕೆಲ ಪುರುಷರು ಹಾಗೂ ಮಹಿಳೆಯರೂ ಸಹ ಇದ್ದರು. ಆದರೆ ಎಲ್ಲರೂ ಘಟನೆಯನ್ನು ವಿಕ್ಷಣೆ ಮಾಡುತ್ತಾ ಇದ್ದರೇ ಹೊರತು ಯಾರು ಮಧ್ಯಪ್ರವೇಶಿಸಿ ವ್ಯಕ್ತಿಯನ್ನು ಆ ಪುಂಡರಿಂದ ಬಿಡಿಸುವಂತಹ ಪ್ರಯತ್ನ ಮಾಡಲಿಲ್ಲ ಎಂದು ಸಂತ್ರಸ್ತನ ತಾಯಿ ಆರೋಪ ಮಾಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸಂತ್ರಸ್ತ ವ್ಯಕ್ತಿ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಪುಂಡರು ಆತನ ಮೇಲೆ ಮತ್ತಷ್ಟು ಹಲ್ಲೆ ನಡೆಸಿದ್ದಾರೆ.

Viral Video is here : Click Here

ಇನ್ನೂ ಸಂತ್ರಸ್ತನ ತಾಯಿ ಈ ಸಂಬಂಧ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದಷ್ಟು ಶೀಘ್ರವಾಗಿ ಆರೋಪಿಗಳನ್ನು ಬಂಧನ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆದ ಬಳಿಕವೇ ಸಂತ್ರಸ್ತನ ಕುಟುಂಬಕ್ಕೆ ಹಲ್ಲೆಯಾಗಿರುವ ಬಗ್ಗೆ ತಿಳಿದಿದೆ. ಆರೋಪಿಗಳು ಸಂತ್ರಸ್ತ ವ್ಯಕ್ತಿಗೆ ಚಾಕು ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ನಾವು ಏನೂ ಮಾಡೋಕೆ ಆಗದೇ ಸುಮ್ಮನೆ ಇರಬೇಕಾಯಿತು ಎಂದು ಸಂತ್ರಸ್ತನ ತಾಯಿ ಹೇಳಿದ್ದಾರೆ. ನಂತರ ವಿಡಿಯೋ ಕುರಿತು ಕೇಳಿದಾಗ, ಅವನು ನಡೆದ ಘಟನೆಯ ಸತ್ಯಾಂಶವನ್ನು ಹೊರಹಾಕಿದ ಬಳಿಕ ಪೊಲೀಸರಿಗೆ ದೂರು ನೀಡಿದೆವು ಎಂದು ಸಂತ್ರಸ್ತನ ತಾಯಿ ಹೇಳಿದ್ದಾರೆ ಎನ್ನಲಾಗಿದೆ.

ಇನ್ನೂ ಸಂತ್ರಸ್ತನ ತಾಯಿ ಈ ಅಮಾನವೀಯ ಘಟನೆಯ ಕುರಿತು ದೂರಿನಲ್ಲಿ ವಿವರಿಸಿದ್ದಾಳೆ. ತಾಯಿ ಹಾಗೂ ಸಂತ್ರಸ್ತ ಇಬ್ಬರೂ ಮನೆ ಕೆಲಸಕ್ಕಾಗಿ ಬನಾರಸ್ ಬ್ಯಾಂಕ್ ಚೌಕ್ ಗೆ ಹೋಗಿದ್ದಾಗ ಆರೋಪಿಗಳು ಅವನನ್ನು ಹೊಲಕ್ಕೆ ಎಳೆದುಕೊಂಡು ಹೋದರು. ತನ್ನ ಮಗ ಅವರೊಂದಿಗೆ ಮನವಿ ಮಾಡುತ್ತಲೇ ಇದ್ದ, ಆದರೆ ಆರೋಪಿಗಳು ಆತನ ಮೇಲೆ ನಿರಂತರವಾಗಿ ಹಲ್ಲೆ ಮಾಡಿದರು. ಅವರು ಅವನನ್ನು ಹೊಡೆಯುತ್ತಿದ್ದರು. ಜೊತೆಗೆ ಎಂಜಲು ಉಗುಳಿ ನೆಕ್ಕುವಂತೆ ಒತ್ತಾಯಿಸಿದರು. ಬಳಿಕ ಮಗನಿಂದ 2 ಸಾವಿರ ಹಣವನ್ನು ಸಹ ದೋಚಿದ್ದಾರೆ ಎಂದು ಸಂತ್ರಸ್ತನ ತಾಯಿ ದೂರಿನ ಮೂಲಕ ಆರೋಪ ಮಾಡಿದ್ದಾರೆ ಎಂದು ತಿಳಿದುಬಂದಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular