ಇತ್ತೀಚಿಗೆ ಇಳಿ ವಯಸ್ಸಿನಲ್ಲೂ ಕೆಲವರು ಮದುವೆಯಾಗುತ್ತಿರುತ್ತಾರೆ. ಈ ಹಾದಿಯಲ್ಲೇ ಚಿಂಚೋಳಿ ಯಲ್ಲಿ ವಿಶಿಷ್ಟವಾದ ಮದುವೆಯೊಂದು ನಡೆದಿದೆ. 80 ವರ್ಷದ ವೃದ್ದನೋರ್ವ 65 ವರ್ಷದ ವೃದ್ದೆಯನ್ನು ಮದುವೆಯಾಗಿದ್ದಾರೆ. ಈ ಮದುವೆ ತುಂಬಾ ಅದ್ದೂರಿಯಾಗಿ ನೆರವೇರಿದ್ದು, ವೃದ್ದನ ಮಕ್ಕಳು ಹಾಗೂ ಸಂಬಂಧಿಕರು ಹಾಗೂ ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿ ಅದೂರಿಯಾಗಿ ಮದುವೆ ಮಾಡಿದ್ದಾರೆ. ಇದೀಗ ಮದುವೆಯ ಸುದ್ದಿ ಎಲ್ಲಾ ಕಡೆ ಭಾರಿ ಸದ್ದು ಮಾಡುತ್ತಿದೆ.
ಅಂಜನಗಾಂವ ಸುರ್ಜಿ ತಾಲೂಕಿನ ಚಿಂಚೋಳಿ ರಹಿಮಾಪುರದ 80 ವರ್ಷದ ವಿಠ್ಠಲ ಖಂಡ್ರೆ ರವರ ಪತ್ನಿ ಕಳೆದ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ವಿಠ್ಠಲ ಖಂಡ್ರೆ ರವರದ್ದು ದೊಡ್ಡ ಕುಟುಂಬ, ನಾಲ್ವರು ಪುತ್ರರು, ಸೊಸೆ, ಪುತ್ರಿಯರು, ಅಳಿಯ, ಮೊಮ್ಮಕ್ಕಳು ಇರುವಂತಹ ಒಂದು ದೊಡ್ಡ ಕುಟುಂಬವಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ತನ್ನ ಸಂಗಾತಿಯ ಸಾವಿನಿಂದ ವಿಠ್ಠಲ್ ಒಂಟಿತನವನ್ನು ಅನುಭವಿಸುತ್ತಿದ್ದರು. ತಾನು ಮತ್ತೆ ಮದುವೆಯಾಗುವ ಬಗ್ಗೆ ತಮ್ಮ ಕುಟುಂಬದವರಿಗೆ ತಿಳಿಸಿದ್ದಾನೆ. ಮೊದಲಿಗೆ ತಂದೆಯ ಬಯಕೆಯನ್ನು ಕೇಳಿದ ಮಕ್ಕಳು ಶಾಕ್ ಆಗಿದ್ದರು. ಬಳಿಕ ಒಪ್ಪಿಗೆಯ ಮೇರೆಗೆ ಮದುವೆ ಮಾಡಲು ಸಿದ್ದರಾಗಿದ್ದಾರೆ.
ಬಳಿಕ ಮಕ್ಕಳು ತಂದೆಗೆ ಮದುವೆ ಮಾಡಲು ವಧುವನ್ನು ಹುಡುಕಿದ್ದಾರೆ. ವಧುವನ್ನು ಹುಡುಕುವುದು ಅವರಿಗೆ ದೊಡ್ಡ ಸಾಹಸವಾಗಿತ್ತು. ತುಮಬಾ ಹುಡುಕಾಡಿದ ಬಳಿಕ ವಧು ಸಿಕ್ಕಿದ್ದಾಳೆ. ಅಕೋಲದ ಅಕೋಟ್ ನ 65 ವರ್ಷದ ಮಹಿಳೆಯ ಜೊತೆಗೆ ವಿವಾಹದ ಮಾತುಕತೆ ನಡೆಸಿ ಅವರನ್ನು ಮದುವೆಗೆ ಒಪ್ಪಿಸಿದ್ದಾರೆ. ಮಾ.8 ರಂದು ರಹಿಮಾಪುರ ಗ್ರಾಮದಲ್ಲಿ ವಿಠ್ಠಲ ಖಂಡ್ರೆ ರವರ ವಿವಾಹ ಅದ್ದೂರಿಯಾಗಿ ನಡೆದಿತ್ತು. ಈ ವಿಶೇಷವಾದ ಮದುವೆಗೆ ಚಿಂಚೋಳಿ ರಹಿಮಾಪುರದ ಗ್ರಾಮಸ್ಥರು ಭಾಗಿಯಾಗಿ ವಧು-ವರರ ನ್ನು ಆರ್ಶೀವಾದ ಮಾಡಿದ್ದಾರೆ. ಸದ್ಯ ಈ ಮದುವೆಯ ಬಗ್ಗೆ ಎಲ್ಲಾ ಕಡೆ ಭಾರಿ ಚರ್ಚೆ ನಡೆಯುತ್ತಿದೆ.