ನಗ್ನವಾಗಿ ಮನೆಯ ಕಳ್ಳತನಕ್ಕೆ ಮುಂದಾದ ಎರಡು ಮಕ್ಕಳ ತಾಯಿ, ಪೊಲೀಸರಿಗೆ ಬೆತ್ತಲೆಯಾಗಿಯೇ ಸಿಕ್ಕಿಬಿದ್ಳು….!

ಕಳ್ಳತನ ಮಾಡುವ ನಿಟ್ಟಿನಲ್ಲಿ ಕಳ್ಳರು ವಿವಿಧ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಾರೆ. ಒಂದು ವೇಳೆ ಸಿಕ್ಕಿಬಿದ್ದರೇ ಸುಲಭವಾಗಿ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ಸಹ ರೂಪಿಸಿಕೊಳ್ಳುತ್ತಾರೆ. ಅದರಲ್ಲೂ ಕೆಲವರು ಯಾರಿಗೂ ಸಿಗದಂತೆ ಮೈಗೆ ಎಣ್ಣೆ ಹಚ್ಚಿಕೊಂಡು ಹೋಗಿರುತ್ತಾರೆ. ಇಂತಹವರ ಬಗ್ಗೆ ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಮಹಿಳೆ ಕಳ್ಳತನ ಮಾಡಲು ಸಂಪೂರ್ಣವಾಗಿ ಬೆತ್ತಲೆಯಾಗಿ ಹೋಗಿದ್ದಾಳೆ. ಜೊತೆಗೆ ಬೆತ್ತಲೆಯಾಗಿಯೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಈ ಘಟನೆ ಅಮೆರಿಕಾದಲ್ಲಿ ನಡೆದಿದೆ ಎನ್ನಲಾಗಿದೆ.

mother of 2 children was caught by the police 0

ಅಮೆರಿಕಾದ ಪ್ಲೋರಿಡಾದಲ್ಲಿ ಮಹಿಳೆಯೊಬ್ಬಳು ಕಳ್ಳತನ ಮಾಡುವ ನಿಟ್ಟಿನಲ್ಲಿ ಬೆತ್ತಲೆಯಾಗಿದ್ದಾಳೆ. ಪಕ್ಕದ ಮನೆಗೆ ಬೆತ್ತಲಾಗಿ ಹೋಗಿ ಕಳ್ಳತನ ಮಾಡಲು ಮುಂದಾಗಿದ್ದಾಳೆ. ಆದರೆ ಆಕೆಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಬಂಧಿತ ಮಹಿಳೆಯನ್ನು 24 ವರ್ಷದ ಹ್ಯಾಲೇ ಬ್ಲಂಟ್ ಎಂದು ಗುರ್ತಿಸಲಾಗಿದೆ. ಆಕೆ ನಾರ್ತ್ ವೆಸ್ಟ್ ಹಂಟ್ಸೋರ್‍ ಪ್ರದೇಶದ ಲೇಕ್ ಸಿಟಿ ಹೋಮ್ ನಲ್ಲಿ ಮೇ.1 ರಾತ್ರಿ ಸುಮಾರು 12 ಗಂಟೆಗೆ ಕಳ್ಳತನ ಮಾಡಲು ಹೋಗಿದ್ದಾಳೆ. ಆಕೆ ಕಳ್ಳತನ ಮಾಡಲು ಬಂದಿದ್ದನ್ನು ಅರಿತ ಮನೆಯ ಮಾಲಿಕ 911 ತುರ್ತು ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.

ಕಳ್ಳತನ ಮಾಡುವ ಉದ್ದೇಶದಿಂದ ಮನೆಯೊಂದಕ್ಕೆ ಹೋದ ಬ್ಯಾಲೆ ಬ್ಲಂಟ್ ಅಲ್ಲಿನ ಸ್ಲೈಡ್ ಗಳ ಗಾಜಿನ ಬಾಗಿಲುಗಳಿಗೆ ಬಡಿದು ನಾಕ್ ಮಾಡಿದ್ದಾಳೆ. ಮನೆಯ ಮಾಲೀಕ ಯಾರು ಎಂದು ಕೇಳಿದರೇ ಉತ್ತರ ಬಂದಿಲ್ಲ. ಬಳಿಕ ಮಾಲಿಕ ಸುಮ್ಮನಾಗಿದ್ದಾನೆ. ನಂತರ ಮಹಿಳೆ ಕಿಟಕಿ ಒಡೆದು ಮನೆಯೊಳಗೆ ನುಗ್ಗಿದ್ದಾಳೆ. ಇತ್ತ ಹೆದರಿಸ ಮನೆ ಮಂದಿ ಮುಂದಿನ ಯಾರ್ಡ್ ಮೂಲಕ ಹೊರಗೆ ಹೋಗಲು ಮುಂದಾಗಿದ್ದಾರೆ. ಈ ವಿಚಾರವನ್ನು ಮನೆಯ ಮಾಲಿಕ ಸಹಾಯವಾಣಿಗೆತಿಳಿಸಿದ್ದಾನೆ. ಈ ಸಮಯದಲ್ಲಿ ಪೊಲೀಸರು ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಮಯದಲ್ಲಿ ಮಹಿಳೆ ಸಂಪೂರ್ಣವಾಗಿ ಬೆತ್ತಲೆಯಾಗಿ ಹಾಗೂ ರಕ್ತ ಸೋರುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕಿಟಕಿ ಗಾಜು ಒಡೆದು ಒಳ ಹೋಗಲು ಪ್ರಯುತ್ನಿಸಿದ್ದರಿಂದ ಮಹಿಳೆ ಗಾಯಗೊಂಡಿರಬಹುದು ಎನ್ನಲಾಗಿದೆ. ಬಳಿಕ ಕಳ್ಳಿಯನ್ನು ಬಂಧಿಸಿದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಕಳ್ಳಿಯನ್ನು ಕೊಲಂಬಿಯಾದ ಕಂಟ್ರಿ ಜೈಲಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಇನ್ನೂ ಮಹಿಳೆಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಸಮಯದಲ್ಲಿ ತನಗೆ ಇಬ್ಬರು ಮಕ್ಕಳಿದ್ದು, ಅವರನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಕಳ್ಳತನಕ್ಕೆ ಬಂದಿದ್ದಾಗಿ ಹೇಳಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಕಳ್ಳಿಯ ಮನೆಗೆ ಹೋಗಿ ನೋಡಿದಾಗ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದಿದೆ. ಸದ್ಯ ಆರೋಪಿಯ ವಿರುದ್ದ ಕಳ್ಳತನ ಹಾಗೂ ಮಕ್ಕಳನ್ನು ನಿರ್ಲಕ್ಷ್ಯ ಮಾಡಿದ ಕೇಸ್ ಸಹ ದಾಖಲಾಗಿದೆ.

Leave a Comment

Your email address will not be published. Required fields are marked *

Scroll to Top