ಸಾಮಾನ್ಯವಾಗಿ 60 ದಾಟುತ್ತಿದ್ದಂತೆ ಮಂಡಿನೋವು, ಸೊಂಟನೋವು ಅಂತಾ ಮನೆಯಲ್ಲಿ ವಿಶ್ರಾಂತಿ ಪಡೆಯುವವರೇ ಹೆಚ್ಚು. ಆದರೆ ಇಲ್ಲೊಬ್ಬರು ಅಜ್ಜಿ, “ವಯಸ್ಸು ಅನ್ನೋದು ಕೇವಲ ನಂಬರ್ ಅಷ್ಟೇ” ಅಂತಾ ಜಗತ್ತಿಗೆ ಸಾರಿ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಯುವಕರೇ ನಾಚುವಂತೆ ಸ್ಕೇಟ್‌ಬೋರ್ಡಿಂಗ್ (Skateboarding) ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಹೌದು, ಚೀನಾದ 68 ವರ್ಷದ ಅಜ್ಜಿಯೊಬ್ಬರು ತಮ್ಮ ಸ್ಕೇಟಿಂಗ್ ಕೌಶಲ್ಯದ ಮೂಲಕ ಈಗ ಇಂಟರ್ನೆಟ್ ಸ್ಟಾರ್ ಆಗಿದ್ದಾರೆ.

Video – ಯಾರು ಈ ಸೂಪರ್ ಗ್ರಾನಿ?
ಇವರ ಹೆಸರು ಲಿಯು (Grandma Liu). ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಚೆಂಗ್ಡು ನಿವಾಸಿ. ಇವರನ್ನು ಆನ್‌ಲೈನ್‌ನಲ್ಲಿ ಪ್ರೀತಿಯಿಂದ ‘ಗ್ರಾಂಡ್ ಮಾ ಲಿಯು’ ಎಂದೇ ಕರೆಯುತ್ತಾರೆ. ರಸ್ತೆಯಲ್ಲಿ ಸರಸರನೆ ಸ್ಕೇಟ್‌ಬೋರ್ಡ್ ಓಡಿಸುತ್ತಾ, ಸ್ಟಂಟ್‌ಗಳನ್ನು ಮಾಡುವ ಇವರ ವಿಡಿಯೋಗಳು ಈಗ ವೈರಲ್ ಆಗಿವೆ.
Video – ಸ್ಕೇಟಿಂಗ್ ಕಲಿಯಲು ವಯಸ್ಸಿನ ಹಂಗೇಕೆ?
ಸಿಜಿಟಿಎನ್ (CGTN) ವರದಿಗಳ ಪ್ರಕಾರ, ಅಜ್ಜಿ ಲಿಯು ಸ್ಕೇಟ್‌ಬೋರ್ಡಿಂಗ್ ಕಲಿಯಲು ಶುರು ಮಾಡಿದ್ದು ತಮ್ಮ 65ನೇ ವಯಸ್ಸಿನಲ್ಲಿ! ಫೆಬ್ರವರಿ 2022ರಲ್ಲಿ ಮೊಟ್ಟಮೊದಲ ಬಾರಿಗೆ ಸ್ಕೇಟ್‌ಬೋರ್ಡ್ ಹತ್ತಿದ ಇವರು, ತೀರಾ ಶೂನ್ಯದಿಂದ ಕಲಿಕೆ ಆರಂಭಿಸಿದರು. ವಯಸ್ಸಾಗಿದೆ ಎಂದು ಸುಮ್ಮನೆ ಕೂರದೆ, ಹೊಸದನ್ನು ಕಲಿಯುವ ಅವರ ಛಲಕ್ಕೆ ಈಗ ಇಡೀ ವಿಶ್ವವೇ ತಲೆಬಾಗಿದೆ.
Read this also : ಚಳಿಗಾಲದಲ್ಲಿ (Winter) ಮೊಸರು ತಿನ್ನುವ ಅಭ್ಯಾಸ ನಿಮಗಿದೆಯೇ? ಹಾಗಿದ್ರೆ ತಪ್ಪದೇ ಈ ವಿಷಯಗಳನ್ನು ತಿಳಿಯಿರಿ..!
Video – ಮಗಳು ಕೊಟ್ಟ ಐಡಿಯಾ, ಅಮ್ಮನ ಸಾಹಸ!
ಲಿಯು ಅವರಿಗೆ ಚಿಕ್ಕವಯಸ್ಸಿನಿಂದಲೂ ಕ್ರೀಡೆ ಎಂದರೆ ಅತೀವ ಆಸಕ್ತಿ. ಟೇಬಲ್ ಟೆನ್ನಿಸ್, ರನ್ನಿಂಗ್ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಇವರು ಸಕ್ರಿಯರಾಗಿದ್ದರು. ಆದರೆ ಸಂಸಾರ, ಜವಾಬ್ದಾರಿ ಅಂತಾ ಬ್ಯುಸಿಯಾದ ಮೇಲೆ ಇದೆಲ್ಲದಕ್ಕೂ ಬ್ರೇಕ್ ಬಿದ್ದಿತ್ತು. ಹೀಗಿರುವಾಗ, ಒಮ್ಮೆ ಇವರ ಮಗಳು ಸ್ಕೇಟ್‌ಬೋರ್ಡ್ ಒಂದನ್ನು ತಂದುಕೊಟ್ಟು, “ಅಮ್ಮಾ, ಇದನ್ನೊಮ್ಮೆ ಟ್ರೈ ಮಾಡು” ಎಂದರಂತೆ. ಸ್ಕೇಟ್‌ಬೋರ್ಡ್ ನೋಡಿದ ತಕ್ಷಣ ಲಿಯು ಅವರಿಗೆ, “ಇದು ನೋಡಲು ತುಂಬಾ ಮಜವಾಗಿದೆ” ಅನ್ನಿಸಿತಂತೆ. ಮೊದಲ ಪ್ರಯತ್ನದಲ್ಲೇ ಬೀಳದೆ ನಿಂತಾಗ, ಅವರ ಮಗಳು ಕಲಿಯಲು ಮತ್ತಷ್ಟು ಪ್ರೋತ್ಸಾಹ ನೀಡಿದರು. ಅಲ್ಲಿಂದ ಶುರುವಾಯ್ತು ನೋಡಿ ಈ ಅಜ್ಜಿಯ ಸೆಕೆಂಡ್ ಇನ್ನಿಂಗ್ಸ್!

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click here
Video – ಬಿದ್ದರೂ ಬಿಡದ ಛಲಗಾತಿ
ಹಾಗಂತ ಈ ಜರ್ನಿ ಸುಲಭವಾಗಿರಲಿಲ್ಲ. ಆರಂಭದ ದಿನಗಳಲ್ಲಿ ಸಾಕಷ್ಟು ಬಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಆದರೆ ಅಜ್ಜಿ ಮಾತ್ರ ಸೋಲೊಪ್ಪಿಕೊಳ್ಳಲಿಲ್ಲ. ದಿನನಿತ್ಯದ ಅಭ್ಯಾಸ ಮತ್ತು ಛಲದಿಂದ ಇಂದು ಅವರು ಯುವಕರಷ್ಟೇ ಸಲೀಸಾಗಿ ಸ್ಕೇಟಿಂಗ್ ಮಾಡುತ್ತಾರೆ. ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಮತ್ತು ಸೇಫ್ಟಿ ಗೇರ್‌ಗಳನ್ನು ಧರಿಸಿಯೇ ಇವರು ರಸ್ತೆಗಿಳಿಯುತ್ತಾರೆ. “ನನಗೆ ಸುಮ್ಮನೆ ಕೂರಲು ಆಗುವುದಿಲ್ಲ, ನನ್ನ ಬಹುತೇಕ ಸ್ನೇಹಿತರೆಲ್ಲರೂ ಕಿರಿಯರೇ” ಎಂದು ಲಿಯು ನಗುತ್ತಾ ಹೇಳುತ್ತಾರೆ.
