ಮಳೆಗಾಲದ ಸಮಯದಲ್ಲಿ ಹಾವುಗಳು ಹಾಗೂ ವಿಷ ಕೀಟಗಳು ಮನೆಗಳ ಒಳಗೆ ಸೇರಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಜನರಿಗೆ ಒಂದು ಹಾವನ್ನು ನೊಡಿದರೇ ಸಾಕು ಹೃದಯ ಕೈಗೆ ಬಂದಿರುತ್ತದೆ. ಅಂತಹುದರಲ್ಲಿ ಎರೆಹುಳುಗಳಂತೆ ಹಾವುಗಳನ್ನು ಮನೆಯಲ್ಲಿ ಕಂಡರೇ ಅವರ ಪರಿಸ್ಥಿತಿ ಹೇಗಿರಬಹುದು. ಅಂತಹ ಘಟನೆಯೊಂದು ಮುಜಾಫರ್ ಪುರ ಜಿಲ್ಲೆಯಲ್ಲಿ ನಡೆದಿದೆ. ಮನೆಯೊಂದರಲ್ಲಿ 16 ನಾಗರಹಾವುಗಳ ಜೊತೆಗೆ 32 ಮೊಟ್ಟೆಗಳು (Snakes in home) ಕಾಣಿಸಿಕೊಂಡಿದೆ. ಇದನ್ನು ನೋಡಿ ಅರಣ್ಯ ಅಧಿಕಾರಿಗಳೇ ಶಾಕ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಮುಜಾಫರ್ ಪುರ ಜಿಲ್ಲೆಯ ಸರೈಯಾ ಬ್ಲಾಕ್ನ ಖೈರಾ ಗ್ರಾಮದ ಮನೆಯೊಂದರಲ್ಲಿ 16 ನಾಗರ ಹಾವುಗಳು ಪತ್ತೆಯಾಗಿವೆ ಅಷ್ಟೇ ಅಲ್ಲದೆ 32 ಮೊಟ್ಟೆಗಳು ಕೂಡ ಕಾಣಿಸಿಕೊಂಡಿದೆ. ಖೈರಾ ಗ್ರಾಮದ ನಿವಾಸಿ ಸಂಜೀತ್ ಮಹತೋ ಎಂಬುವವರ ಮನೆಯಲ್ಲಿ ಕಳೆದ ಎರಡು ದಿನಗಳಿಂದ ಹಾವುಗಳು ಕಾಣಿಸಿಕೊಳ್ಳುತ್ತಿದ್ದವು. ಮಳೆ ನೀರು ನುಗ್ಗಿದ್ದರಿಂದ ಹಾವುಗಳು ಬಂದಿವೆ ಎಂದು ಅವರು ಭಾವಿಸಿದ್ದರಂತೆ. ಈ ಸಮಯದಲ್ಲಿ 12 ಹಾವಿನ ಮರಿಗಳನ್ನು ಹಿಡಿದು ಜಮೀನಿನಲ್ಲಿ ಬಿಡಲಾಗಿತ್ತು. ಆದರೂ ಸಹ ಮನೆಯಲ್ಲಿ ಮತಷ್ಟು ಹಾವುಗಳು ಕಾಣಿಸಿಕೊಂಡಿತ್ತಂತೆ. ಕೂಡಲೇ ಇತರರಿಗೆ ಮಾಹಿತಿ ನೀಡಿದ್ದಾರೆ. ಆಗ ಮನೆಯಲ್ಲಿ ನೋಡಿದಾಗ ಹತ್ತಾರು ಹಾವುಗಳು ಕಾಣಿಸಿಕೊಂಡಿದೆ. 6 ಹಾವುಗಳನ್ನು ರಕ್ಷಣೆ ಮಾಡಲಾಗಿದೆ ಇದೇ ಜಾಗದಲ್ಲಿ 32 ಹಾವಿನ ಮೊಟ್ಟೆಗಳೂ ಸಹ ಪತ್ತೆಯಾಗಿದೆ.
https://x.com/NBTBihar/status/1814172992575766984
ಇನ್ನೂ ಈ ಮನೆಯಲ್ಲಿ ಪತ್ತೆಯಾದ ಮರಿಗಳಿಂದ ಶೀಘ್ರದಲ್ಲೇ ಹಾವು ಮರಿಗಳೂ ಸಹ ಹೊರಬರಲಿದೆ ಎನ್ನಲಾಗಿದೆ. ಇನ್ನೂ ಹಾವುಗಳನ್ನು ಹಿಡಿದ ಬಳಿಕ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ. ಅರಣ್ಯ ಇಲಾಖೆಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿ ಡಾ.ರಾಜೀವ್ ರಂಜನ್ ಮಾತನಾಡಿ, ಗ್ರಾಮಸ್ಥರೊಬ್ಬರು ತಮ್ಮ ಮನೆಯಲ್ಲಿ ಹಾವುಗಳಿರುವ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ರಕ್ಷಣಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆ ಭಾಗದಲ್ಲಿ ಇಲಿಗಳ ರಂದ್ರಗಳಿರುವುದು ಪತ್ತೆಯಾಗಿದೆ. ಅದರಲ್ಲಿ ಹಾವುಗಳಿದ್ದವು. ನಾಗರಹಾವುಗಳು ರಂದ್ರಗಳನ್ನು ಮಾಡೋದಿಲ್ಲ, ಅವರು ಇಲಿಗಳ ರಂಧ್ರಗಳಲ್ಲಿ ಮಾತ್ರ ಮೊಟ್ಟೆಗಳನ್ನು ಇಡುತ್ತವೆ. ಈ ರಂಧ್ರಗಳನ್ನು ಅಗೆದಾಗ 16 ಹಾವುಗಳು ಪತ್ತೆಯಾಗಿದೆ. ಜೊತೆಗೆ 32 ಮೊಟ್ಟೆಗಳು ಪತ್ತೆಯಾಗಿದೆ. ಈ ನಾಗರಹಾವುಗಳನ್ನು ರಕ್ಷಣೆ ಮಾಡಿ ಸುರಕ್ಷಿತವಾದ ಪ್ರದೇಶಕ್ಕೆ ಬಿಡಲಾಗಿದೆ ಎಂದಿದ್ದಾರೆ.