Saturday, August 30, 2025
HomeStateCongress Guranntee: 14 ಸಾವಿರ ಕೋಟಿ SCSP-TSP ಹಣ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲು ಮುಂದಾದ ಕಾಂಗ್ರೇಸ್...

Congress Guranntee: 14 ಸಾವಿರ ಕೋಟಿ SCSP-TSP ಹಣ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲು ಮುಂದಾದ ಕಾಂಗ್ರೇಸ್ ಸರ್ಕಾರ…..!

ಕಾಂಗ್ರೇಸ್ ಗ್ಯಾರಂಟಿಗಳಿಗೆ SCSP-TSP ಅನುದಾನ ಬಳಕೆ

  • ಗೃಹ ಲಕ್ಷ್ಮೀ – 7,881 ಕೋಟಿ ರೂ.
  • ಅನ್ನಭಾಗ್ಯ ನಗದು– 2,187 ಕೋಟಿ ರೂ.
  • ಗೃಹ ಜ್ಯೋತಿ- 2,585 ಕೋಟಿ ರೂ.
  • ಶಕ್ತಿ – 1451 ಕೋಟಿ ರೂ.
  • ಯುವನಿಧಿ – 175 ಕೋಟಿ ರೂ

ರಾಜ್ಯ ಕಾಂಗ್ರೇಸ್ ಸರ್ಕಾರ ಐದು ಗ್ಯಾರಂಟಿಗಳನ್ನು (Congress Guranntee) ಜಾರಿ ಮಾಡಿದ್ದು, ಗ್ಯಾರಂಟಿಗಳಿಗೆ ಹಣ ಹೊಂದಿಸಲು ಶ್ರಮ ಪಡುತ್ತಿದೆ ಎನ್ನಲಾಗುತ್ತಿದೆ. ಇದೀಗ ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ಇದೀಗ ಮತ್ತೊಂದು ಮಾರ್ಗ ಹುಡುಕಿಕೊಂಡಿದೆ. ಪರಿಶಿಷ್ಟ ಜಾತಿ ಉಪ ಯೋಜನೆ (SCSP) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗೆಂದು (TSP) ಬಜೆಟ್‌ನಲ್ಲಿ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

SCP TSP fund used for Congress Guranntee 0

ರಾಜ್ಯ ಕಾಂಗ್ರೇಸ್ ಸರ್ಕಾರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಅದರಂತೆ ಅನುದಾನ ಹೊಂದಿಸಲು ಸಹ ತುಂಬಾನೆ ಶ್ರಮಿಸುತ್ತಿದೆ. SCSP-TSP ಯೋಜನೆಗಳಿಗಾಗಿ 14,282 ಕೋಟಿ ಹಣವನ್ನು ಹಣ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. 2024-25ನೇ ಆರ್ಥಿಕ ವರ್ಷದಲ್ಲಿ SCSP-TSP ಮೀಸಲಿಟ್ಟ 39,121,46 ಕೋಟಿ ಹಣವನ್ನು ಖರ್ಚು ಮಾಡುವ ಪ್ರಸ್ತಾಪವುಳ್ಳ ಕ್ರಿಯಾಯೋಜನೆಗೆ SCSP-TSP ರಾಜ್ಯ ಅಭಿವೃದ್ದಿ ಪರಿಷತ್ ಕಳೆದ ಶುಕ್ರವಾರ ಅನುಮೋದನೆ ನೀಡಿದೆ ಎನ್ನಲಾಗಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನುದಾನ ವರ್ಗಾವಣೆಗೆ ತೀರ್ಮಾನ ಕೈಗೊಂಡು ಅನುಮತಿ ನೀಡಲಾಗಿದೆ ಎನ್ನಲಾಗಿದೆ. SCSP-TSP ಕಾಯ್ದೆಯ ಅನುದಾನದಲ್ಲಿ ಅದೇ ವರ್ಗದ ಗ್ಯಾರಂಟಿ ಫಲಾನುಭವಿಗಳಿಗೆ ಮಾತ್ರ ಈ ಹಣವನ್ನು ಬಳಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ಮೂಲಕ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಸರ್ಕಾರ ತಂತ್ರ ಮಾಡಿದೆ. ಇನ್ನೂ ಈ ಹಿಂದೆಯಿಂದಲೂ ಬಿಜೆಪಿ SCSP-TSP ಅನುದಾನ ಗ್ಯಾರಂಟಿಗಳಿಗೆ ಬಳಸಲು ವಿರೋಧ ಮಾಡುತ್ತಿತ್ತು. ಈ ಅನುದಾನವನ್ನು ಆ ಸಮುದಾಯದ ಅಭಿವೃದ್ದಿಗೆ ಮಾತ್ರ ಬಳಕೆ ಮಾಡಬೇಕೆಂದು ನಿಯಮವಿದೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗಳಿಗೆ ಬಳಸುವುದು ಸರಿಯಲ್ಲ ಎಂದು ಬಿಜೆಪಿ ಆಕ್ರೋಷ ಸಹ ಹೊರಹಾಕಿತ್ತು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular