ಸರ್ಕಾರಗಳು ಜನರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಕೆಲವೊಂದು ಯೋಜನೆಗಳನ್ನು (Government Scheme) ಜಾರಿ ಮಾಡುತ್ತವೆ. ಅನೇಕರು ಈ ಯೋಜನೆಗಳನ್ನು ಬಳಸಿಕೊಂಡು ಜೀವನ ಸುಧಾರಿಸಿಕೊಳ್ಳುತ್ತಾರೆ. ಆದರೆ ಕೆಲವರು ಇದನ್ನು ದುರ್ಬಳಕೆ ಸಹ ಮಾಡಿಕೊಳ್ಳುತ್ತಾರೆ. ಈ ರೀತಿಯ ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ ಸರ್ಕಾರದ (Government Scheme) ಯೋಜನೆಯ ಹಣವನ್ನು ಪಡೆದುಕೊಂಡು ಪ್ರೇಮಿಗಳ ಜೊತೆಗೆ 11 ಮಹಿಳೆಯರು ಎಸ್ಕೇಪ್ ಆದ ಘಟನೆಯೊಂದು ನಡೆದಿದೆ.
ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತವೆ. ಉಚಿತ ಬಸ್ ಪ್ರಯಾಣ, ಗೃಹ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಮಾದರಿಯಲ್ಲಿ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತವೆ. ಕೆಲವರು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡರೇ, ಮತ್ತೆ ಕೆಲವರು ದುರುಪಯೋಗ ಪಡೆಸಿಕೊಳ್ಳುತ್ತಾರೆ. ಇದೀಗ ಪ್ರಧಾನ ಮಂತ್ರಿ ಆವಾಸ್ ಯೋಜನೆ (Pradhan Mantri Awas Yojana) ಯನ್ನು ದುರ್ಬಳಕೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಮಹಾರಾಜ್ ಗಂಜ್ ಜಿಲ್ಲೆಯ ಗ್ರಾಮವೊಂದರಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಅಷ್ಟಕ್ಕೂ ಘಟನೆ ಏನು ಎಂಬ ವಿಚಾರಕ್ಕೆ ಬಂದರೇ,
ಪ್ರತಿಯೊಬ್ಬರಿಗೂ ಸೂರು ಇರಬೇಕು ಎಂಬ ಉದ್ದೇಶದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯಿಂದ ಅನೇಕರು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ಉತ್ತರ ಪ್ರದೇಶದ ಮಹಾರಾಜ್ ಗಂಜ್ ಜಿಲ್ಲೆಯ ಗ್ರಾಮವೊಂದರಲ್ಲಿ ಆಗಿರೋದೇ ಬೇರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮೊದಲ ಕಂತಿನ ಹಣ ಪಡೆದ 11 ಮಂದಿ ಮಹಿಳೆಯರು ತಮ್ಮ ಪತಿರಾಯರನ್ನು ಬಿಟ್ಟು ತಮ್ಮ ತಮ್ಮ ಪ್ರೇಮಿಗಳ ಜೊತೆ ಊರಿನಿಂದ ಪರಾರಿಯಾಗಿದ್ದಾರಂತೆ. ಖಾತೆಗೆ ಹಣ ಬಂದ ಕೂಡಲೇ ತಮ್ಮ ಗಂಡಂದಿರನ್ನು ಬಿಟ್ಟು ಪ್ರೇಮಿಗಳ ಜೊತೆ ಊರು ಬಿಟ್ಟು ಓಡಿ ಹೋಗಿದ್ದಾರಂತೆ.
ಉತ್ತರ ಪ್ರದೇಶದ ಮಹಾರಾಜ್ ಗಂಜ್‌ನ ನಿಚ್ಲಾಲ್ ಬ್ಲಾಕ್ ಪ್ರದೇಶದ ಒಟ್ಟು 108 ಗ್ರಾಮಗಳಲ್ಲಿ 2023-24ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ 2350 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಈ ಪೈಕಿ ಎರಡು ಸಾವಿರಕ್ಕೂ ಹೆಚ್ಚು ಫಲಾನುಭವಿಗಳ ಮನೆಗಳೂ ಪೂರ್ಣಗೊಂಡಿವೆಯಂತೆ. ಇದರ ಅಡಿಯಲ್ಲಿ 11 ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಮೊದಲ ಕಂತಿನ ಹಣವಾಗಿ 40 ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿತ್ತಂತೆ. ಈ ಹಣವನ್ನು ಪಡೆದ ಮಹಿಳೆಯರು ತಮ್ಮ ಪ್ರೇಮಿಗಳ ಜೊತೆಗೆ ಪರಾರಿಯಾಗಿದ್ದಾರೆ. ಕಂತು ಬಿದ್ದ ಕೂಡಲೇ ಓಡಿ ಮಹಿಳೆಯರ ಗಂಡಂದಿರು ಎರಡನೇ ಕಂತಿನ ಹಣವನ್ನು ತಮ್ಮ ಪತ್ನಿಯರ ಖಾತೆಗೆ ಹಾಕದಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.