ರಾಯಚೂರು ಜಿಲ್ಲೆಯ ಲಿಂಸುಗೂರು ಪಟ್ಟಣದ ಈ ವಿಡಿಯೋ ನೋಡಿದವರು ಒಮ್ಮೆ ಕರಗುವುದು ಖಚಿತ ಎಂದು ಹೇಳಬಹುದು. 4 ನೇ ತರಗತಿ ಓದುವಂತಹ ಬಾಲಕನ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ (Viral Video) ತುಂಬಾನೆ ಸದ್ದು ಮಾಡುತ್ತಿದೆ. ವಿಡಿಯೋ ನೋಡಿದ ಅನೇಕರು ಬಾಲಕನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಸೀಬೆಹಣ್ಣು ಮಾರುತ್ತಾ ಎಲ್ಲರನ್ನು ತನ್ನತ್ತ ಆಕರ್ಷಣೆ ಮಾಡಿದ್ದಾನೆ ಈ ಪುಟ್ಟ ಬಾಲಕ ಆಕಾಶ್.
ರಾಯಚೂರು (Raichur) ಜಿಲ್ಲೆಯ ಲಿಂಸುಗೂರು (Limsuguru) ಪಟ್ಟಣದ ಬಸ್ ನಿಲ್ದಾಣದಲ್ಲಿ ಪುಟ್ಟ ಹುಡುಗ ಆಕಾಶ್ ಎಂಬಾತ ಬಸ್ ನಿಲ್ದಾಣದಲ್ಲಿ ಸೀಬೆಕಾಯಿ ಸೀಬೆಕಾಯಿ ಅಂತಾ ಹಣ್ಣು ಮಾರಾಟ ಮಾಡುತ್ತಿರುತ್ತಾನೆ. ಕೆಲಸ ಮಾಡಲು ಎಲ್ಲಾ ಅವಶ್ಯಕತೆಗಳಿದ್ದರೂ ಸಹ ಕೆಲಸ ಮಾಡಲು ಸೋಂಬೇರಿಗಳಾಗಿರುತ್ತಾರೆ. ಅಂತಹ ಅನೇಕರಿಗೆ ಈ ಬಾಲಕ ಮಾದರಿಯಾಗುತ್ತಾನೆ ಎಂದು ಹೇಳಬಹುದು. ಅನೇಕ ಮಕ್ಕಳು ತುಂಬಾನೆ ಕಷ್ಟಪಟ್ಟು ಜೀವನ ಸಾಗಿಸುತ್ತಿರುತ್ತಾರೆ. ಮನೆಯ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಓದುವ ವಯಸ್ಸಿನಲ್ಲಿ ತಾವು ಸಹ ತಮ್ಮ ಕೈಯಾಲ್ಲಾದ ಕೆಲಸ ಮಾಡುತ್ತಾ ಪೋಷಕರಿಗೆ ಸಹಾಯವಾಗುತ್ತಿರುತ್ತಾರೆ. ಅಂತಹ ಮಕ್ಕಳಲ್ಲಿ ಈ ಆಕಾಶ್ ಸಹ ಒಬ್ಬರಾಗಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ: ಇಲ್ಲಿ ಕ್ಲಿಕ್ ಮಾಡಿ
ಈ ಪುಟ್ಟ ಬಾಲಕ ಶಾಲೆಯಿಂದ ಬರುತ್ತಲೇ ತಂದೆ-ತಾಯಿ ಕೆಲಸದಲ್ಲಿ ತಾನು ಸಹ ಭಾಗಿಯಾಗುತ್ತಾನೆ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಹಣ್ಣು ವ್ಯಾಪಾರ ಮಾಡಿ ಆ ಹಣದಲ್ಲಿ ಮನೆಯ ಬಾಡಿಗೆ ಕಟ್ಟುತ್ತಾನಂತೆ. ಈ ಸಂಬಂಧ ವಿಡಿಯೋ ಒಂದನ್ನು ಕನ್ನಡಿ ದೇವರಾಜ್ (@sgowda79) ಎನ್ನುವ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಜೀವನ ಅಂದ್ರೆ ಹಿಂಗೂ ಇರುತ್ತೆ ಎಂಬ ಟೈಟಲ್ ನಡಿ ಆಕಾಶ್ ಸೀಬೆಹಣ್ಣು ಮಾರುವ ವಿಡಿಯೋ ಹಂಚಿಕೊಂಡಿದ್ದಾರೆ. ಇನ್ನೂ ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋಗೆ ರಿಯಾಕ್ಟ್ ಆಗಿರುವ ಅನೇಕರು ಈ ಹುಡುಗ ಎಲ್ಲಿದ್ದಾನೆ ಹೇಳಿ, ಬಾಲಕನ ಮಾಹಿತಿ ಕೊಡಿ, ಬಾಲಕನ ಓದಿಗೆ ಸಹಾಯ ಮಾಡುತ್ತೇನೆ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಕೆಲಸ ಮಾಡದ ಸೋಂಬೇರಿಗಳಿಗೆ ಈ ಬಾಲಕ ಮಾದರಿಯಾಗಿದ್ದಾನೆ ಎಂತಲೂ ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನೂ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ನಿನ್ನ ಹೆಸರು ಏನು, ಯಾವ ತರಗತಿಯಲ್ಲಿ ಓದುತ್ತಿದ್ದೀಯಾ ಅಂತಾ ಕೇಳ್ತಾರೆ. ಅದಕ್ಕೆ ಬಾಲಕ ಆಕಾಶ್ ನಾನು ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೇನೆ. ಈ ಹಣ್ಣುಗಳು ನಮ್ಮದೇ, ಶಾಲೆ ಮುಗಿಸಿ ಈಗ ಮಾರಲು ಬಂದಿದ್ದೇನೆ. ಮುಂಜಾನೆ ನಮ್ಮ ಅಮ್ಮ ಈ ಹಣ್ಣುಗಳನ್ನು ಖರೀದಿ ಮಾಡುತ್ತಾರೆ ನನ್ನ ಅಮ್ಮ ಸಹ ಇಲ್ಲೇ ಕೆಲಸ ಮಾಡುತ್ತಾರೆ. ಈ ಸೀಬೆಹಣ್ಣುಗಳನ್ನು 10 ರೂಪಾಯಿಗೆ 3, 20 ರೂಪಾಯಿಗೆ 7 ರಂತೆ ಮಾರಾಟ ಮಾಡುತ್ತೇನೆ ಎಂದು ಆಕಾಶ್ ಹೇಳ್ತಾನೆ. ನಾನು ಯಾವುದೇ ಲಾಭ ತೆಗೆದುಕೊಳ್ಳಲ್ಲ. ಎಲ್ಲಾ ನಮ್ಮ ತಾಯಿಗೆ ಕೊಡ್ತೀನಿ. ನನಗೆ ಬುಕ್ ಸೇರಿದಂತೆ ಎಲ್ಲವನ್ನೂ ನಮ್ಮ ಅಮ್ಮ ಕೊಡಸ್ತಾರೆ. ಅದಕ್ಕೆ ನಮ್ಮ ಅಮ್ಮನಿಗೆ ಎಲ್ಲ ಕೊಡುತ್ತೀನಿ ಅಂತಾ ಆಕಾಶ್ ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.