Youth Congress – ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಕೆಲವೊಂದು ಕ್ಷೇತ್ರಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಕಲಿ ಮತದಾರರನ್ನು ಪಟ್ಟಿಗೆ ಸೇರಿಸಿ ಮೋಸದಿಂದ ಗೆಲುವು ಸಾಧಿಸಿದೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗುಡಿಬಂಡೆಯಲ್ಲಿ ಯೂತ್ ಕಾಂಗ್ರೇಸ್ ವತಿಯಿಂದ ಮತಗಳ್ಳತನದ ವಿರುದ್ದ ಪೋಸ್ಟರ್ ಅಭಿಯಾನವನ್ನು ಆರಂಭಿಸಿದ್ದಾರೆ.
Youth Congress – ರಾಹುಲ್ ಗಾಂಧಿ ಆರೋಪಕ್ಕೆ ಬಲ ನೀಡಿದ ಯುವ ಕಾಂಗ್ರೆಸ್
ಈ ವೇಳೆ ಯುವ ಕಾಂಗ್ರೇಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಪಕ್ಷ ಕೆಲವೊಂದು ಕ್ಷೇತ್ರಗಳಲ್ಲಿ ಮೋಸ ಮಾಡಿ ಗೆಲುವು ಸಾಧಿಸಿದೆ. ತಾವು ಸೋಲುತ್ತೇವೆ ಎಂಬ ಭಯಯಿರುವಂತಹ ಕ್ಷೇತ್ರಗಳಲ್ಲಿ ಕೆಲವೊಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಮತದಾರರ ಪಟ್ಟಿಯಲ್ಲಿ ನಕಲಿ ಮತದಾರರನ್ನು ಸೇರಿಸಿ ಆ ಮತಗಳ ಮೂಲಕ ಗೆಲುವು ಸಾಧಿಸಿದೆ. ಈ ಕುರಿತು ನಮ್ಮ ನಾಯಕ ರಾಹುಲ್ ಗಾಂಧಿಯವರು ಮಾಹಿತಿಯನ್ನು ಕಲೆ ಹಾಕಿ ದೇಶದ ವಾಸಿಗಳಿಗೆ ತಿಳಿಸುವ ಕೆಲಸ ಮಾಡಿದ್ದಾರೆ. ಆದರೆ ಚುನಾವಣಾ ಆಯೋಗ ಈ ಕುರಿತು ತನಿಖೆ ಮಾಡುವುದರ ಬದಲಿಗೆ ರಾಹುಲ್ ಗಾಂಧಿಯವರ ಮೇಲೆ ಕೇಸ್ ಹಾಕುವುದಾಗಿ ಹೇಳುತ್ತಿದೆ. ಈ ನಿಟ್ಟಿನಲ್ಲಿ ಯೂತ್ ಕಾಂಗ್ರೇಸ್ ವತಿಯಿಂದ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮತಗಳ್ಳತನದ ವಿರುದ್ದ ಪೋಸ್ಟರ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು. Read this also : ಗೃಹಲಕ್ಷ್ಮಿ ಹಣ ಬಂದಿಲ್ಲವೇ? ಚಿಂತಿಸಬೇಡಿ, ಈಗಲೇ ಈ ವಿಧಾನದಲ್ಲಿ ಸ್ಟೇಟಸ್ ನೋಡಿ…!
Youth Congress – ಮತದಾರರ ಹಕ್ಕಿನ ರಕ್ಷಣೆಗೆ ಯುವ ಕಾಂಗ್ರೆಸ್ ಸಂಕಲ್ಪ
ಬಳಿಕ ಯುವ ಕಾಂಗ್ರೇಸ್ ನ ಗುಡಿಬಂಡೆ ತಾಲೂಕು ಅಧ್ಯಕ್ಷ ಅಂಬರೀಶ್ ಮಾತನಾಡಿ, ಕಾಂಗ್ರೇಸ್ ಪಕ್ಷದ ರಾಷ್ಟ್ರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯವರ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ರಾಜ್ಯವ್ಯಾಪಿ ಮತಗಳ್ಳತನದ ಕುರಿತು ಹೋರಾಟ ಹಮ್ಮಿಕೊಳ್ಳಲಾಗಿದೆ. ರಾಹುಲ್ ಗಾಂಧಿಯವರು ಮತಗಳ್ಳತನ ಕುರಿತು ನಮ್ಮ ರಾಜ್ಯದಿಂದಲೇ ಅಭಿಯಾನ ಆರಂಭಿಸಿದ್ದಾರೆ. ಒಬ್ಬ ಮತದಾರ ಒಂದು ಬೂತ್ ನಲ್ಲಿ ಮಾತ್ರ ಮತ ಚಲಾಯಿಸಬೇಕು, ಆದರೆ ಮತಗಳ್ಳತನದ ಮೂಲಕ ಒಬ್ಬ ಮತದಾರ ನಾಲ್ಕೈದು ಬೂತ್ ಗಳಲ್ಲಿ ಮತ ಚಲಾಯಿಸುತ್ತಿದ್ದಾರೆ. ಕೆಲವೊಂದು ಕ್ಷೇತ್ರಗಳಲ್ಲಿ ಮತಗಳ್ಳತನದ ಮೂಲಕವೇ ಬಿಜೆಪಿ ಪಕ್ಷ ಜಯಗಳಿಸಿದೆ. ಪ್ರಜಾಪ್ರಭುತ್ವ ವಿರೋಧಿಯಾದ ಈ ಮತಗಳ್ಳತನ ನಿಲ್ಲದೇ ಇದ್ದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
Youth Congress – ಮುಖಂಡರ ಉಪಸ್ಥಿತಿ
ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಹಳೇ ಗುಡಿಬಂಡೆ ಲಕ್ಷ್ಮೀನಾರಾಯಣ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೇಸ್ ಮುಖಂಡ ನವೀನ್ ರಾಜ್, ದಲಿತ ಸಂಘಟನೆಯ ಮುಖಂಡ ಜಿ.ವಿ.ಗಂಗಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ವಿಕಾಸ್, ಪಿ.ಎಲ್. ಡಿ ಬ್ಯಾಂಕ್ ನಿರ್ದೇಶಕರಾದ ರಾಜರೆಡ್ಡಿ, ಮುಖಂಡರಾದ ದಪ್ಪರ್ತಿ ನಂಜುಂಡ, ಚಾಂದು, ಬಡ್ಡು, ರಮೇಶ್, ಯುವ ಕಾಂಗ್ರೆಸ್ ಮುಖಂಡರಾದ ಕೈಫ್, ಮಧು, ಬಾಲಾಜಿ ಸೇರಿದಂತೆ ಹಲವರು ಇದ್ದರು.