ಚಿಕ್ಕಬಳ್ಳಾಪುರದ (Chikkaballapur) ಪ್ರಸಿದ್ಧ ಶ್ರೀನಿವಾಸಸಾಗರ ಜಲಾಶಯದ (Srinivasasagara Dam) ಬಳಿ ಪ್ರವಾಸಕ್ಕೆ ಬಂದಿದ್ದ ಕೆಲವು ಮಹಿಳೆಯರು ಅತಿರೇಕದ ವರ್ತನೆ ತೋರಿದ್ದು, ಸ್ಥಳೀಯರ ಮತ್ತು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಜಲಾಶಯದ 50 ಅಡಿ ಎತ್ತರದ ಧುಮ್ಮುಕು ಪ್ರದೇಶದ ಸನಿಹದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಂಗಮ್ಮ ದೇವಿಯ ವಿಗ್ರಹದ (Gangamma Devi Statue) ಮೇಲೆ ಯುವತಿಯರು ಕಾಲಿಟ್ಟು ಸ್ನಾನ ಮಾಡಿರುವ ವಿಡಿಯೋ ಮತ್ತು ಛಾಯಾಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ (Social Media) ವ್ಯಾಪಕವಾಗಿ ವೈರಲ್ (Viral Video) ಆಗುತ್ತಿವೆ. ಹುಡುಗಿಯರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Chikkaballapur – ಗಂಗಮ್ಮ ದೇವಿಯ ವಿಗ್ರಹಕ್ಕೆ ಅವಮಾನ
ಪ್ರವಾಸಕ್ಕೆಂದು ಬಂದಿದ್ದ ಮುಸ್ಲಿಂ ಕುಟುಂಬಕ್ಕೆ ಸೇರಿದ ಯುವತಿಯರು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ಜಲಾಶಯದ ನೀರಿನಲ್ಲಿ ಮೋಜು ಮಸ್ತಿ ಮಾಡುವ ಸಂದರ್ಭದಲ್ಲಿ, ಸ್ನಾನ ಮಾಡಲು ವಿಗ್ರಹದ ಆಸರೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ, ತಾವು ನಿಂತಿರುವುದು ಒಂದು ಪೂಜಾ ವಿಗ್ರಹದ ಮೇಲೆ ಎಂಬುದನ್ನು ಅರಿತುಕೊಳ್ಳದ ಅಥವಾ ನಿರ್ಲಕ್ಷಿಸಿದ ಮಹಿಳೆಯರ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಘಟನೆ ನಡೆದು ಮೂರು ದಿನಗಳಾಗಿವೆ ಎಂದು ಹೇಳಲಾಗುತ್ತಿದೆ. Read this also : ನಿಮ್ಮ Google Chrome ಮತ್ತು Firefox ಬ್ರೌಸರ್‌ಗಳಿಗೆ ಕೇಂದ್ರದಿಂದ ದೊಡ್ಡ ಎಚ್ಚರಿಕೆ..!
ಹಿಂದೂಪರ ಸಂಘಟನೆಗಳ ಆಕ್ರೋಶ
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಹಲವು ಹಿಂದೂಪರ ಸಂಘಟನೆಗಳ (Hindu Organizations) ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೃತ್ಯವು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ (Hurt Religious Sentiments) ತಂದಿದೆ ಎಂದು ಆಪಾದಿಸಿದ್ದಾರೆ. ಪ್ರಸಿದ್ಧ ಧಾರ್ಮಿಕ ಸ್ಥಳದಲ್ಲಿ ವಿಗ್ರಹಕ್ಕೆ ಅಪಮಾನ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವಿಡಿಯೋ ಇಲ್ಲಿದೆ ನೊಡಿ : Click Here
ಪೊಲೀಸ್ ಠಾಣಾ ವ್ಯಾಪ್ತಿ ಮತ್ತು ದೂರಿನ ಸ್ಥಿತಿ
ಈ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ನಡೆದಿರುವ ಕುರಿತು ವರದಿಯಾಗಿದೆ. ಈ ವಿಡಿಯೋ ಸಾರ್ವಜನಿಕವಾಗಿ ದೊಡ್ಡ ವಿವಾದಕ್ಕೆ ಕಾರಣವಾಗಿರುವುದರಿಂದ, ಮುಂಬರುವ ದಿನಗಳಲ್ಲಿ ಈ ಪ್ರಕರಣವು ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯದ ಮಾಹಿತಿಯ ಪ್ರಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾನೂನಿನಂತೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

