ಸಾಮಾನ್ಯವಾಗಿ ಪೊಲೀಸ್ ದಾಳಿ ಎಂದರೆ ಅಲ್ಲಿ ಗಲಾಟೆ, ಲಾಠಿ ಚಾರ್ಜ್ ಅಥವಾ ಬಂಧನದ ದೃಶ್ಯಗಳೇ ಕಣ್ಣ ಮುಂದೆ ಬರುತ್ತವೆ. ಆದರೆ ಮಧ್ಯಪ್ರದೇಶದ ಧಾಟಿಯಾದಲ್ಲಿ ನಡೆದ ಅಕ್ರಮ ಮದ್ಯ ತಯಾರಿಕಾ ಘಟಕದ ಮೇಲಿನ ದಾಳಿ ಮಾತ್ರ ಇಡೀ ದೇಶದ ಗಮನ ಸೆಳೆದಿದೆ. ಇಲ್ಲಿ ಪೊಲೀಸರು ಅಕ್ರಮ ದಂಧೆಯನ್ನು ಮಟ್ಟಹಾಕುವುದರ ಜೊತೆಗೆ, ಅನಾಥವಾಗಿದ್ದ ಮಗುವಿಗೆ ತಾಯಿಯಾಗಿ (Woman Police) ಮನುಷ್ಯತ್ವ ಮೆರೆದಿದ್ದಾರೆ.

Woman Police – ದಾಳಿಗೆ ಹೆದರಿ ಮಗುವನ್ನೇ ಬಿಟ್ಟು ಓಡಿದ ಪೋಷಕರು!
ಧಾಟಿಯಾದ ಫುಲ್ರಾ ಕಂಜರ್ ಡೇರಾ ಎಂಬ ಪ್ರದೇಶದಲ್ಲಿ ದೊಡ್ಡ ಮಟ್ಟದ ಅಕ್ರಮ ಮದ್ಯ ತಯಾರಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಅಬಕಾರಿ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿತು. ಪೊಲೀಸರ ವಾಹನ ಬರುತ್ತಿದ್ದಂತೆ ಗಾಬರಿಗೊಂಡ ಮನೆಯ ಹಿರಿಯರು ಹಾಗೂ ಮದ್ಯ ತಯಾರಿಕೆಯಲ್ಲಿ ತೊಡಗಿದ್ದವರು ಪೊಲೀಸರಿಗೆ ಹೆದರಿ ಹಿತ್ತಲ ಬಾಗಿಲಿನಿಂದ ಓಡಿ ಹೋಗಿದ್ದಾರೆ.
ಆದರೆ ಈ ಧಾವಂತದಲ್ಲಿ ಅವರು ತಮ್ಮ ಮನೆಯಲ್ಲಿದ್ದ ಪುಟ್ಟ ಮಕ್ಕಳನ್ನು ಮರೆತು ಹೋಗಿದ್ದರು. ಪೊಲೀಸರು ಮನೆ ಒಳಗೆ ಹೋದಾಗ ಅಲ್ಲಿ ಕಂಡ ದೃಶ್ಯ ಅವರ ಕಣ್ಣನ್ನು ಒದ್ದೆ ಮಾಡುವಂತಿತ್ತು. ಮೈ ಮೇಲೆ ಸರಿಯಾದ ಬಟ್ಟೆಯೂ ಇಲ್ಲದೆ, ಅತಿಯಾದ ಚಳಿ ಮತ್ತು ಹಸಿವಿನಿಂದ 3 ತಿಂಗಳ ಹಸುಗೂಸು ಕಿರುಚಾಡುತ್ತಾ ಅಳುತ್ತಿತ್ತು. ಆ ಮಗುವಿನ ಜೊತೆಗೆ ಸುಮಾರು 4-5 ವರ್ಷದ ಇಬ್ಬರು ಮಕ್ಕಳು ಮತ್ತು ಒಬ್ಬ 10 ವರ್ಷದ ಬಾಲಕಿ ಮಾತ್ರ ಇದ್ದರು.
ಲಾಠಿ ಹಿಡಿಯುವ ಕೈಗಳಲ್ಲಿ ಅರಳಿದ ಮಾತೃತ್ವ
ಅಳುತ್ತಿದ್ದ ಮಗುವನ್ನು ಸಮಾಧಾನ ಪಡಿಸಲು 10 ವರ್ಷದ ಬಾಲಕಿ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದನ್ನು ಕಂಡ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDOP) ಆಕಾಂಕ್ಷಾ ಜೈನ್ ಅವರು ತಕ್ಷಣವೇ ಕಾರ್ಯಪ್ರವೃತ್ತರಾದರು. ಕಾನೂನು ಪಾಲನೆ ಮಾಡಬೇಕಿದ್ದ ಅಧಿಕಾರಿ ಆ ಕ್ಷಣದಲ್ಲಿ ಮಗುವಿಗೆ ತಾಯಿಯಾದರು. (Woman Police) ಮಗುವಿಗೆ ಹಸಿವಾಗಿದೆ ಎಂದು ಅರಿತ ಆಕಾಂಕ್ಷಾ ಅವರು ಸ್ವತಃ ಹಾಲಿನ ವ್ಯವಸ್ಥೆ ಮಾಡಿ ಮಗುವಿಗೆ ಉಣಿಸಿದರು. ಅಷ್ಟೇ ಅಲ್ಲದೆ, ಚಳಿಯಿಂದ ನಡುಗುತ್ತಿದ್ದ ಮಗುವಿಗೆ ಬೆಚ್ಚಗಿನ ಬಟ್ಟೆಯನ್ನು ಹೊದಿಸಿ, ಮಗು ಗಾಢ ನಿದ್ರೆಗೆ ಜಾರುವವರೆಗೂ ತಮ್ಮ ತೊಡೆಯ ಮೇಲೆಯೇ ಮಲಗಿಸಿಕೊಂಡಿದ್ದರು. ಈ ಭಾವನಾತ್ಮಕ ದೃಶ್ಯವನ್ನು ಕಂಡು ಅಲ್ಲಿದ್ದ ಇತರ ಸಿಬ್ಬಂದಿ ಕೂಡ ಭಾವುಕರಾದರು. Read this also : ‘ಆಫ್ ಡ್ಯೂಟಿ, ಆನ್ ಡ್ಯೂಟಿ, ಸೂಪರ್‌ಮಾಮ್ ಡ್ಯೂಟಿ’: ಆಂಧ್ರದ ಮಹಿಳಾ ಪೊಲೀಸ್ ಸಾಹಸಕ್ಕೆ ನೆಟ್ಟಿಗರು ಫಿದಾ!
“ಮಕ್ಕಳಿಗೆ ಈ ದಂಧೆಯ ಬಗ್ಗೆ ಏನೂ ತಿಳಿದಿಲ್ಲ. ಪೋಷಕರು ತಮ್ಮ ಸ್ವಾರ್ಥಕ್ಕಾಗಿ ಅನಾಥವಾಗಿ ಬಿಟ್ಟು ಹೋಗಿದ್ದು ನೋಡಿ ಬೇಸರವಾಯಿತು. ಮೊದಲು ಮಗುವನ್ನು ಸಮಾಧಾನಪಡಿಸುವುದು ನನ್ನ ಆದ್ಯತೆಯಾಗಿತ್ತು,” ಎನ್ನುತ್ತಾರೆ ಅಧಿಕಾರಿ ಆಕಾಂಕ್ಷಾ ಜೈನ್.

ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ವಶ
ಒಂದೆಡೆ ಮಗುವಿನ ಆರೈಕೆ ನಡೆಯುತ್ತಿದ್ದರೆ, (Woman Police) ಇನ್ನೊಂದೆಡೆ ಅಬಕಾರಿ ತಂಡ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿತ್ತು. ಈ ದಾಳಿಯಲ್ಲಿ ಪೊಲೀಸರು ಬೃಹತ್ ಪ್ರಮಾಣದ ಅಕ್ರಮ ಮದ್ಯವನ್ನು ಪತ್ತೆಹಚ್ಚಿದ್ದಾರೆ:
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
- ವಶಪಡಿಸಿಕೊಂಡ ಮದ್ಯ: ಸುಮಾರು 5,400 ಲೀಟರ್ ದೇಶೀಯ ಮದ್ಯ.
- ಕಚ್ಚಾ ವಸ್ತುಗಳು: 19,000 ಕೆಜಿ ಬೆಲ್ಲ ಮತ್ತು ಮದ್ಯ ತಯಾರಿಸುವ ಯಂತ್ರಗಳು.
- ಒಟ್ಟು ಮೌಲ್ಯ: ಸುಮಾರು 30.81 ಲಕ್ಷ ರೂಪಾಯಿ.
ಪೊಲೀಸರು ಅಕ್ರಮ ಮದ್ಯವನ್ನು ಸ್ಥಳದಲ್ಲೇ ನಾಶಪಡಿಸಿದ್ದು, ಈ ದಂಧೆ ನಡೆಸುತ್ತಿದ್ದ ಕುಟುಂಬದ ವಿರುದ್ಧ ಮಧ್ಯಪ್ರದೇಶ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾರ್ವಜನಿಕರ ಮೆಚ್ಚುಗೆ
ಮಗು ನಿದ್ರಿಸಿದ ನಂತರ ಅದನ್ನು 10 ವರ್ಷದ ಬಾಲಕಿಗೆ ಒಪ್ಪಿಸಿದ (Woman Police) ಪೊಲೀಸರು, ಯಾವುದೇ ಸಹಾಯ ಬೇಕಿದ್ದರೂ ಸಂಪರ್ಕಿಸುವಂತೆ ಧೈರ್ಯ ತುಂಬಿದ್ದಾರೆ. ಕರ್ತವ್ಯದ ನಡುವೆಯೂ ಶಿಶುವಿನ ಪ್ರಾಣ ಉಳಿಸಿ, ಆರೈಕೆ ಮಾಡಿದ ಆಕಾಂಕ್ಷಾ ಜೈನ್ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. “ಪೊಲೀಸ್ ಎಂದರೆ ಕೇವಲ ಶಿಕ್ಷೆ ನೀಡುವವರಲ್ಲ, ಅವರು ಸಮಾಜದ ರಕ್ಷಕರು” ಎಂಬ ಮಾತಿಗೆ ಈ ಘಟನೆ ಸಾಕ್ಷಿಯಾಗಿದೆ.
