ಸಾಮಾನ್ಯವಾಗಿ ಗರ್ಭಿಣಿಯರು ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಬಗ್ಗೆ ಕೇಳಿರುತ್ತೇವೆ. ಇದು ಇತ್ತೀಚಿಗೆ ಅನೆಕ ಕಡೆ ನಡೆಯುತ್ತಿರುತ್ತದೆ. ಕೆಲವೊಂದು ಅಪರೂಪದ ಘಟನೆ ಎಂಬಂತೆ ಕೆಲವೊಂದು ಕಡೆ ತ್ರಿವಳಿ ಮಕ್ಕಳಿಗೂ ಜನ್ಮ ನೀಡಿರುವ ಬಗ್ಗೆ ಸಹ ಸುದ್ದಿ ಕೇಳಿರುತ್ತೇವೆ. ಇದೀಗ ಗರ್ಭಿಣಿಯೊಬ್ಬರು ಅವಳಿ ಅಲ್ಲ, ತ್ರಿವಳಿ ಅಲ್ಲ ಬರೋಬ್ಬರಿ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಂತಹದೊಂದು ಅಚ್ಚರಿಯ ಘಟನೆ ನಡೆದಿದ್ದು, ವೈದ್ಯ ಲೋಕದ ಅಚ್ಚರಿ ಎಂದೇ ಕರೆಲಾಗುತ್ತಿದೆ.
ಬಿಹಾರದ ಕಿಶನ್ ಗಂಜ್ ಜಿಲ್ಲೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ. 20 ವರ್ಷದ ವಿವಾಹಿತ ಗರ್ಭಿಣಿಯೊಬ್ಬರು ಬರೊಬ್ಬರಿ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಐದು ಮಕ್ಕಳು ಹೆಣ್ಣು ಮಕ್ಕಳಾಗಿದ್ದು, 1 ಕೆಜಿಗಿಂದ ಕಡಿಮೆ ತೂಕವಿದೆ. ಇನ್ನೂ ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಈ ಹೆರಿಗೆ ಮಾಡಿಸಿದ ವೈದ್ಯೆ ಡಾ.ಫರ್ಜಾನಾ ಮಾತನಾಡಿ ಈ ಪ್ರಕರಣ ತುಂಬಾ ಸವಾಲಾಗಿತ್ತು. ಇಂತಹ ಪ್ರಕರಣಗಳು ಬರೋದು ತುಂಬಾನೆ ವಿರಳ. ಜನಿಸಿದ ಎಲ್ಲಾ ಮಕ್ಕಳು ಸಾಮಾನ್ಯ ಹೆರಿಗೆಯ ಮೂಲಕವೇ ಜನಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಕಿಶನ್ ಗಂಜ್ ಜಿಲ್ಲೆಯ ಫೋಥಿಯಾ ಬ್ಲಾಕ್ ನಲ್ಲಿ ಈ ಪ್ರಕರಣ ನಡೆದಿದೆ. ಠಾಕೂರ್ ಗಂಜ್ ಕನಕಪುರ ಪಂಚಾಯತ್ ನ ಜಲ್ಮಿಲಿಕ್ ಗ್ರಾಮದ ನಿವಾಸಿ 20 ವರ್ಷದ ತಾಹಿರಾ ಬೇಗಂ ಎಂಬಾಕೆ ಖಾಸಗಿ ನರ್ಸಿಂಗ್ ಹೋಂ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಹಿರಾ 2 ತಿಂಗಳ ಗರ್ಭಿಣಿಯಾಗಿದ್ದಾಗ ಆಕೆಯ ಹೊಟ್ಟೆಯಲ್ಲಿ ನಾಲ್ಕು ಮಕ್ಕಳು ಇರೋದು ಸಹ ಗೊತ್ತಾಗಿತ್ತು. ಆರಂಭದಲ್ಲಿ ತಾಹಿರಾ ಬೇಗಂ ತುಂಬಾ ಹೆದರುತ್ತಿದ್ದಳು. ಆದರೆ ವೈದ್ಯರು ಆಕೆಗೆ ಧೈರ್ಯ ತುಂಬಿ ಆತ್ಮವಿಶ್ವಾಸ ತುಂಬಿದ್ದಾರೆ. ಕಳೆದ ಶನಿವಾರ ಬೆಳಿಗ್ಗೆ ತಾಹಿರಾ ಹೆರಿಗೆ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಈ ಪ್ರಕರಣವು ಸಾಕಷ್ಟು ಸವಾಲಾಗಿದ್ದು, ಆದರೂ ಸಾಮಾನ್ಯ ಹೆರಿಗೆಗೆ ಆದ್ಯತೆ ನೀಡಿದ್ದೇವೆ. ಸಾಮಾನ್ಯ ಹೆರಿಗೆ ಮೂಲಕ 5 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ವೈದ್ಯರು ತಿಳಿಸಿದ್ದಾರೆ. ಇನ್ನೂ ಈಗಾಗಲೇ ತಾಹಿರಾ ಮೂರು ವರ್ಷದ ಮಗ ಇದ್ದಾನೆ. ಇದೀಗ ಐದು ಹೆಣ್ಣು ಮಕ್ಕಳು ಸೇರಿ ಒಟ್ಟು ಆರು ಮಕ್ಕಳ ತಾಯಿಯಾಗಿದ್ದಾರೆ.