ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ತೆರಿಗೆ ಕೊಡುವುದು ಅಬಕಾರಿ ಇಲಾಖೆ ಎಂದೇ ಹೇಳಬಹುದಾಗಿದೆ. ಕಳೆದ ವಿಧಾನಸಭಾ ಅಧಿವೇಶನದ ಸಮಯದಲ್ಲಿ ಕುಡುಕುಕರ ಸಂಘದ ವತಿಯಿಂದ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಸಹ ಇಡಲಾಗಿತ್ತು. ಕೆಲವರು ಸಂಜೆ ಸಮಯದಲ್ಲಿ ಎಣ್ಣೆ ಕುಡಿಯಲು ಶುರು ಮಾಡಿದರೇ, ಮತ್ತೆ ಕೆಲವರೇ ಬೆಳಿಗಿನಿಂದಲೇ ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ತಮ್ಮೆಲ್ಲಾ ನೋವುಗಳನ್ನು ಕುಡಿದು ಮರೆಯುವಂತಹ ಅನೇಕರು ಇರುತ್ತಾರೆ. ಇದೀಗ ಕುಡುಕರಿಗೆ ಶಾಕಿಂಗ್ ಸುದ್ದಿಯೊಂದು ಸಿಕ್ಕಿದ್ದು, 5 ದಿನಗಳ ಕಾಲ ಬಾರ್ ಬಂದ್ ಆಗಲಿದ್ದು, ಐದು ದಿನ ಕುಡುಕರಿಗೆ ಎಣ್ಣೆ ಸಿಗುವುದಿಲ್ಲ, ಏಕೆ ಗೊತ್ತಾ?
ಬೇಸಿಗೆ ಕಾಲಕ್ಕಿಂತ ಮಳೆಗಾಲ ಹಾಗೂ ಚಳಿಗಾಲದಲ್ಲಿ ಎಣ್ಣೆಗೆ ತುಂಬಾನೆ ಬೇಡಿಕೆ ಅಂತಾನೇ ಹೇಳಬಹುದು. ಚಳಿಗೆ ಎಣ್ಣೆ ಇರಲೇ ಬೇಕು ಎಂದು ಅನೇಕ ಮದ್ಯಪ್ರಿಯರು ಹೇಳುತ್ತಿರುತ್ತಾರೆ. ಸದ್ಯ ಲೋಕಸಭಾ ಚುನಾವಣೆ 2024 ನಿಮಿತ್ತ ಮತ ಎಣಿಕೆ ಕಾರ್ಯ ಸಹ ನಡೆಯಲಿದೆ. ಈ ಸಮಯದಲ್ಲಿ 5 ದಿನ ಬಾರ್ ಬಂದ್ ಆಗಲಿದೆ. ಈ ಕುರಿತು ಆದೇಶ ಸಹ ಹೊರಡಿಸಲಾಗಿದೆ. 5 ದಿನ ಬಾರ್ ಬಂದ್ ಹೇಗೆ ಎಂಬ ಅನುಮಾನ ನಿಮಗೂ ಬರಬಹುದು. ಫಲಿತಾಂಶಕ್ಕಾಗಿ ಒಂದು ದಿನ ಬಂದ್ ಮಾಡುವುದು ಗೊತ್ತಿದೆ. ಆದರೆ 5 ದಿನ ಏಕೆ ಬಂದ್ ಮಾಡುವುದು ಪ್ರಶ್ನೆಗೆ ಇಲ್ಲಿದೆ ಉತ್ತರ. ಜೂನ್ 1 ರಿಂದ ಜೂನ್ 6 ರವರೆಗೆ ಬಾರ್ ಹಾಗೂ ಎಂ.ಆರ್.ಪಿ ಬಂದ್ ಮಾಡಲು ಯೋಜಿಸಲಾಗಿದೆ. ಜೂನ್.3 ಕ್ಕೆ ಫದವೀಧರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಕಾರಣದಿಂದ ಜೂನ್ 1ರ ಸಂಜೆ ರಿಂದ ಜೂನ್ 3 ರವರೆಗೆ ಮಧ್ಯ ಮಾರಾಟ ನಿಷೇಧವಾಗಲಿದೆ. ಆದ್ದರಿಂದ ಬೆಂಗಳೂರಿನ ಎಣ್ಣೆ ಅಂಗಡಿಗಳು ಸಂಪೂರ್ಣ ಬಂದ್ ಆಗಲಿದೆ.
ಜೊತೆಗೆ ಜೂನ್ 4 ರಂದು 2024 ರಂದು ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯ ನಡೆಯಲಿದೆ. ಹೀಗಾಗಿ ಇಡೀ ದೇಶದಲ್ಲಿ ಎಣ್ಣೆ ಅಂಗಡಿ ಬಂದ್ ಆಗಲಿದೆ. ಬಾರ್, ವೈನ್ ಶಾಪ್, ಎಂ.ಆರ್.ಪಿ, ಬಾರ್ ಅಂಡ್ ರೆಸ್ಟೋರೆಂಟ್ ಬಂದ್ ಆಗಲಿದೆ. ಜೂನ್.5ಕ್ಕೆ ಬಾರ್ ಗಳು ಬಾಗಿಲು ತೆರೆಯಲಿದೆ. ಆದರೆ ಜೂನ್ 6 ರಂದು ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ಇರುವ ಕಾರಣದ ಅಂದೂ ಸಹ ಮದ್ಯ ಮಾರಾಟ ಅಂಗಡಿಗಳು ಬಂದ್ ಆಗಲಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಜೂನ್ ಮಾಹೆಯಲ್ಲಿ ಒಟ್ಟು ಐದು ದಿನಗಳ ಕಾಲ ಮದ್ಯ ಮಾರಾಟ ಅಂಗಡಿಗಳು ಬಂದ್ ಆಗಲಿದೆ. ಆದರೆ ಬೇರೆ ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಯ ಮತ ಎಣಿಕೆ ದಿನ ಮಾತ್ರ ಬಾರ್ ಗಳು ಬಂದ್ ಆಗಲಿವೆ.