Insurance – ಜೀವನದ ಪ್ರತಿ ಹಂತದಲ್ಲೂ ಇನ್ಷೂರೆನ್ಸ್ ನ ಮಹತ್ವ ಹೆಚ್ಚುತ್ತಿದೆ. ಪ್ರತಿಯೊಬ್ಬರೂ ಜೀವ ವಿಮೆ, ಆರೋಗ್ಯ ವಿಮೆ ಮತ್ತು ಇತರ ಪಾಲಿಸಿಗಳನ್ನು ಮಾಡಿಸುತ್ತಾರೆ. ಆದರೆ, ಪಾಲಿಸಿದಾರ ಮತ್ತು ನಾಮಿನಿ ಇಬ್ಬರೂ ಮರಣ ಹೊಂದಿದಾಗ ಏನು ಮಾಡಬೇಕು ಎಂಬ ಗೊಂದಲ ಅನೇಕರಲ್ಲಿದೆ. ಇಂತಹ ಸಂದರ್ಭದಲ್ಲಿ ಹಣ ಯಾರಿಗೆ ಸಿಗುತ್ತದೆ? ಕ್ಲೇಮ್ ಮಾಡುವುದು ಹೇಗೆ? ಇಲ್ಲಿ ಸಂಕ್ಷಿಪ್ತ ಮಾಹಿತಿ ಇದೆ.

Insurance – ಪಾಲಿಸಿದಾರರ ಮರಣದ ನಂತರ ಏನು ಮಾಡಬೇಕು?
ಪಾಲಿಸಿದಾರರು ಮರಣ ಹೊಂದಿದಾಗ, ಪಾಲಿಸಿಯ ನಿಯಮಗಳ ಪ್ರಕಾರ ನಾಮಿನಿಗಳು ಕ್ಲೇಮ್ ಸಲ್ಲಿಸಿ ಹಣ ಪಡೆಯಬಹುದು. ಆದರೆ, ನಾಮಿನಿ ಕೂಡ ಕ್ಲೇಮ್ ಸಲ್ಲಿಸುವ ಮೊದಲೇ ಮರಣ ಹೊಂದಿದರೆ ಅಥವಾ ಪಾಲಿಸಿದಾರ ಮತ್ತು ನಾಮಿನಿ ಇಬ್ಬರೂ ಏಕಕಾಲದಲ್ಲಿ ಮರಣ ಹೊಂದಿದರೆ ಆಗ ಏನು ಮಾಡಬೇಕು?
ಇನ್ಷೂರೆನ್ಸ್ ಹಣದ ಕುರಿತ ನಿಯಮಗಳು ಏನು ಹೇಳುತ್ತವೆ?
ಕಾನೂನು ಪ್ರಕಾರ, ಇಂತಹ ಪರಿಸ್ಥಿತಿಯಲ್ಲಿ ಇನ್ಷೂರೆನ್ಸ್ ಹಣವು ಪಾಲಿಸಿದಾರರ ಕಾನೂನುಬದ್ಧ ವಾರಸುದಾರರಿಗೆ ಸೇರಬೇಕು.
- ಉಯಿಲು (Will) ಇದ್ದರೆ: ಒಂದು ವೇಳೆ ಪಾಲಿಸಿದಾರರು ತಮ್ಮ ಆಸ್ತಿಯ ಬಗ್ಗೆ ಉಯಿಲು ಬರೆದಿಟ್ಟಿದ್ದರೆ, ಅದರ ಪ್ರಕಾರವೇ ಇನ್ಷೂರೆನ್ಸ್ ಹಣವು ನಿಗದಿತ ವ್ಯಕ್ತಿಗೆ ಸಿಗುತ್ತದೆ. Read this also : ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ, ಆರೋಗ್ಯ, ಜೀವ ವಿಮೆ ಪ್ರೀಮಿಯಂ ಮೇಲಿನ ಜಿ.ಎಸ್.ಟಿ. ಕಡಿತ?
- ಉಯಿಲು ಇಲ್ಲದಿದ್ದರೆ: ಉಯಿಲು ಇಲ್ಲದಿದ್ದರೆ, ಭಾರತೀಯ ಉತ್ತರಾಧಿಕಾರ ಕಾಯ್ದೆ (Indian Succession Act) ಅನ್ವಯ ಹಣದ ಹಂಚಿಕೆಯಾಗುತ್ತದೆ. ಸಾಮಾನ್ಯವಾಗಿ, ಮೃತರ ಕುಟುಂಬದ ಸದಸ್ಯರಾದ ಸಂಗಾತಿ, ಮಕ್ಕಳು ಮತ್ತು ಪೋಷಕರ ನಡುವೆ ಈ ಹಣವು ಸಮಾನವಾಗಿ ಹಂಚಿಕೆಯಾಗುತ್ತದೆ.
Insurance – ಬಹು ನಾಮಿನಿಗಳನ್ನು ಸೇರಿಸಬಹುದೇ?
ಹೌದು, ಇನ್ಷೂರೆನ್ಸ್ ಪಾಲಿಸಿ ಮಾಡುವಾಗ ಒಬ್ಬರಿಗಿಂತ ಹೆಚ್ಚು ನಾಮಿನಿಗಳನ್ನು ಸೇರಿಸುವುದು ಕಡ್ಡಾಯವಾಗಿದೆ. ಒಬ್ಬರೇ ನಾಮಿನಿಯನ್ನು ಸೇರಿಸಬೇಕೆಂಬ ನಿಯಮವಿಲ್ಲ. ನಿಮ್ಮ ಸಂಗಾತಿ, ಮಕ್ಕಳು ಮತ್ತು ಪೋಷಕರು ಸೇರಿದಂತೆ ಅನೇಕರನ್ನು ನೀವು ನಾಮಿನಿಯಾಗಿ ಸೇರಿಸಬಹುದು.

ಉದಾಹರಣೆಗೆ: ನೀವು ಇನ್ಷೂರೆನ್ಸ್ ಹಣದಲ್ಲಿ ಶೇ. 50ರಷ್ಟನ್ನು ನಿಮ್ಮ ಪತ್ನಿಗೂ, ಇಬ್ಬರು ಮಕ್ಕಳಲ್ಲಿ ತಲಾ ಶೇ. 25ರಷ್ಟನ್ನು ಹಂಚಬಹುದು ಎಂದು ಪಾಲಿಸಿ ಮಾಡುವಾಗಲೇ ನಿರ್ಧರಿಸಬಹುದು.
ನಾಮಿನಿಯನ್ನು ಬದಲಾಯಿಸಬಹುದೇ?
ಪಾಲಿಸಿ ಅವಧಿಯಲ್ಲಿ ನಾಮಿನಿಯನ್ನು ಬದಲಾಯಿಸುವ ಅವಕಾಶವಿದೆ. ಒಂದು ವೇಳೆ ನಾಮಿನಿ ಮೃತಪಟ್ಟರೆ ಅಥವಾ ನಿಮಗೆ ನಾಮಿನಿಯನ್ನು ಬದಲಿಸಬೇಕು ಎನಿಸಿದರೆ, ಪಾಲಿಸಿದಾರರು ಜೀವಂತ ಇರುವಾಗಲೇ ಈ ಬದಲಾವಣೆಯನ್ನು ಮಾಡಬಹುದು.
