ಸಿಲಿಕಾನ್ ಸಿಟಿಯಲ್ಲಿ ವಲಸಿಗರ ಸಂಖ್ಯೆ ಹೆಚ್ಚಾದಂತೆಲ್ಲಾ ಕ್ರೌರ್ಯದ ಮಿತಿ ಮೀರುತ್ತಿದೆಯೇ ಎಂಬ ಆತಂಕ ಶುರುವಾಗಿದೆ. ಸಣ್ಣ ಜಗಳವೊಂದಕ್ಕೆ ಹಸುಗೂಸನ್ನು ಬಲಿಪಡೆದ ಘೋರ ಘಟನೆಯೊಂದು ಬೆಂಗಳೂರಿನ ವೈಟ್ ಫೀಲ್ಡ್ ವ್ಯಾಪ್ತಿಯಲ್ಲಿ ನಡೆದಿದ್ದು, ಇಡೀ ನಗರವೇ ಬೆಚ್ಚಿಬೀಳುವಂತೆ ಮಾಡಿದೆ. ಪಕ್ಕದ ಮನೆಯವನ ಜೊತೆಗಿನ ಸಣ್ಣ ವೈಮನಸ್ಸು ಒಂದು ಅಮಾಯಕ ಜೀವವನ್ನು ಬಲಿಪಡೆದಿದೆ. ಕಿಡ್ನ್ಯಾಪ್ ಆಗಿದ್ದ 6 ವರ್ಷದ ಬಾಲಕಿ ಕೊನೆಗೆ ಪ್ಲಾಸ್ಟಿಕ್ ಚೀಲದಲ್ಲಿ (Crime) ಹೆಣವಾಗಿ ಪತ್ತೆಯಾಗಿದ್ದಾಳೆ.

Crime – ನಡೆದಿದ್ದೇನು? ಆಟವಾಡುತ್ತಿದ್ದ ಮಗು ದಿಢೀರ್ ನಾಪತ್ತೆ!
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲದ ಸುಪರ್ಣಾ ಬೇಗಂ ಹಾಗೂ ಇಂಜಾಮುಲ್ ಶೇಖ್ ದಂಪತಿ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದು ವೈಟ್‌ಫೀಲ್ಡ್ ಸಮೀಪದ ನಲ್ಲೂರಹಳ್ಳಿಯಲ್ಲಿ ನೆಲೆಸಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಕಳೆದ ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ 6 ವರ್ಷದ ಬಾಲಕಿ ಶಹಬಾಜ್ ಕತೂನ್ ಮನೆ ಮುಂದೆ ಆಟವಾಡುತ್ತಿದ್ದಳು. ತಾಯಿ ಮನೆಯಲ್ಲಿ ಮಲಗಿದ್ದರು. ಎದ್ದು ನೋಡುವಷ್ಟರಲ್ಲಿ ಕಂದಮ್ಮ ನಾಪತ್ತೆಯಾಗಿದ್ದಾಳೆ.
ಎಲ್ಲೆಡೆ ಹುಡುಕಾಡಿದರೂ ಮಗು ಪತ್ತೆಯಾಗದಿದ್ದಾಗ ಪೋಷಕರು ಗಾಬರಿಗೊಂಡರು. ಈ ವೇಳೆ ಅವರಿಗೆ ನೆರೆಮನೆಯವನಾದ ಯುಸುಫ್ ಯಕೂಂ ಎಂಬಾತನ ಮೇಲೆ ಅನುಮಾನ ಮೂಡಿದೆ. ಏಕೆಂದರೆ ಆತ ಆಗಾಗ ಪೋಷಕರ ಜೊತೆ ಜಗಳವಾಡುತ್ತಿದ್ದ, ಮಗು ನಾಪತ್ತೆಯಾದ ಸಮಯದಲ್ಲೇ ಆತ ಕೂಡ (Crime) ನಾಪತ್ತೆಯಾಗಿದ್ದ.
ಸಿಸಿಟಿವಿಯಲ್ಲಿ ಸಿಕ್ಕಿತು ಆಘಾತಕಾರಿ ಸುಳಿವು!
ಮಗು ನಾಪತ್ತೆಯಾದ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಬೆಂಗಳೂರು ಪೊಲೀಸರು (Whitefield Police) ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಲು ಆರಂಭಿಸಿದರು. ಎರಡು ದಿನಗಳ ಕಾಲ ಸತತ ಹುಡುಕಾಟ ನಡೆಸಿದ ನಂತರ, ನಲ್ಲೂರಹಳ್ಳಿ ದೇವಸ್ಥಾನದ ರಸ್ತೆ ಬದಿಯ ಚರಂಡಿಯಲ್ಲಿ (Drain) ಒಂದು ಅನುಮಾನಾಸ್ಪದ ಪ್ಲಾಸ್ಟಿಕ್ ಚೀಲ ಪತ್ತೆಯಾಗಿದೆ. ಪೊಲೀಸರು ಚೀಲವನ್ನು ಬಿಚ್ಚಿ ನೋಡಿದಾಗ ಕಂಡ ದೃಶ್ಯ (Crime) ಎದೆ ಝಲ್ಲೆನ್ನುವಂತಿತ್ತು. ಕಿಡ್ನ್ಯಾಪ್ ಆಗಿದ್ದ ಕಂದಮ್ಮ ಶಹಬಾಜ್ ಕತೂನ್ ಅದೇ ಚೀಲದೊಳಗೆ ಶವವಾಗಿ ಬಿದ್ದಿದ್ದಳು.
ಕೊಲೆಗಡುಕನ ಕ್ರೌರ್ಯ: ಪ್ಲಾಸ್ಟಿಕ್ ದಾರದಿಂದ ಕತ್ತು ಹಿಸುಕಿ ಹತ್ಯೆ
ಆರೋಪಿ ಯುಸುಫ್ ಯಕೂಂ ಮಗುವನ್ನು ಕಿಡ್ನ್ಯಾಪ್ ಮಾಡಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಪ್ಲಾಸ್ಟಿಕ್ ದಾರದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಯಾರಿಗೂ ಅನುಮಾನ ಬಾರದಂತೆ ಶವವನ್ನು ಲಗೇಜ್ ಚೀಲದಲ್ಲಿ ತುಂಬಿ ರಸ್ತೆ ಬದಿಯ ಮೋರಿಯಲ್ಲಿ ಬಿಸಾಡಿ ಪರಾರಿಯಾಗಿದ್ದಾನೆ. “ಮನೆಯ ಬಳಿ (Crime) ಇದ್ದ ನಿರ್ಜನ ಪ್ರದೇಶದಲ್ಲಿ ಹತ್ಯೆ ಮಾಡಿ, ಮೋರಿಗೆ ಹಾಕಿರೋದು ತಿಳಿದು ಬಂದಿದೆ. ಚೀಲದಲ್ಲಿ ಮೊದಲು ನಮಗೆ ಲಗೇಜ್ ಇರಬಹುದು ಎಂದು ಅನ್ನಿಸಿತ್ತು, ಆದರೆ ಓಪನ್ ಮಾಡಿದಾಗ ಮಗುವಿನ ದೇಹ ಇತ್ತು” ಎಂದು ಬಾಲಕಿಯ ದೊಡ್ಡಪ್ಪ ನೋವಿನಿಂದ ಹೇಳಿಕೊಂಡಿದ್ದಾರೆ. Read this also : ತೆಲಂಗಾಣದಲ್ಲಿ ಘೋರ ದುರಂತ: ಹೆಂಡತಿಯ ಮೇಲಿನ ಕೋಪಕ್ಕೆ ಇಬ್ಬರು ಹಸುಗೂಸುಗಳನ್ನೇ ಬಲಿ ಪಡೆದ ತಂದೆ!

ಪೊಲೀಸ್ ಅಧಿಕಾರಿಗಳ ಹೇಳಿಕೆ
ಈ ಭೀಕರ ಘಟನೆಯ ಬಗ್ಗೆ ಮಾಹಿತಿ ನೀಡಿರುವ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್, “ಮೃತ ಬಾಲಕಿಯ ಕುಟುಂಬ ಮತ್ತು ಆರೋಪಿಯ ನಡುವೆ ಹಳೆಯ ಜಗಳವಿತ್ತು. ಬಾಲಕಿಯ ತಾಯಿಯ ಜೊತೆಗೂ ಆರೋಪಿ ಗಲಾಟೆ ಮಾಡಿಕೊಂಡಿದ್ದ ಎನ್ನಲಾಗಿದೆ. ಇದೇ ಸೇಡನ್ನು ತೀರಿಸಿಕೊಳ್ಳಲು ಮಗುವನ್ನು (Crime) ಕೊಲೆ ಮಾಡಿರುವ ಸಾಧ್ಯತೆಯಿದೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರಿದಿದೆ,” ಎಂದು ತಿಳಿಸಿದ್ದಾರೆ.
