ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಕಳೆದ ವಾರ ನಡೆದ ಆ ಭೀಕರ ಘಟನೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಮದುವೆ ಮಂಟಪಕ್ಕೆ ಸಂಭ್ರಮದಿಂದ ಹೊರಟಿದ್ದ ವರನ ಮೇಲೆ ದಾರಿಯಲ್ಲೇ ಮಾರಣಾಂತಿಕ ದಾಳಿಯಾಗಿತ್ತು. ಮೊದಲಿಗೆ ಇದು ಕೇವಲ ವಧುವಿನ ಮಾಜಿ ಪ್ರೇಮಿಯ ಹುಚ್ಚಾಟ ಅಥವಾ ಏಕಪಕ್ಷೀಯ ಪ್ರೇಮದ ವೈಫಲ್ಯ (Wedding Attack) ಎಂದು ಭಾವಿಸಲಾಗಿತ್ತು. ಆದರೆ ಈಗ ಪೊಲೀಸರ ತನಿಖೆಯಲ್ಲಿ ಹೊರಬಂದಿರುವ ಸತ್ಯ ಕೇಳಿದರೆ ಯಾರಿಗಾದರೂ ಮೈ ನಡುಗುವುದು ಗ್ಯಾರಂಟಿ.

Wedding Attack – ಸಿನಿಮೀಯ ಶೈಲಿಯ ಹಲ್ಲೆ ಮತ್ತು ಅನಿರೀಕ್ಷಿತ ತಿರುವು
ಜನವರಿ 29 ರಂದು ರವೀಶ್ ಎಂಬ ಯುವಕ ಮದುವೆ ಸಂಭ್ರಮದಲ್ಲಿದ್ದರು. ಮಂಟಪದತ್ತ ಕಾರಿನಲ್ಲಿ ಸಾಗುತ್ತಿದ್ದಾಗ ವಧು ನಯನಾಳ ಹಳೆ ಪ್ರೇಮಿ ದರ್ಶನ್ ಮತ್ತು ಆತನ ಸ್ನೇಹಿತರು ಅಡ್ಡಗಟ್ಟಿದ್ದರು. ಸಾರ್ವಜನಿಕವಾಗಿಯೇ ರವೀಶ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ರವೀಶ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಈ ಘಟನೆ ನಡೆದಾಗ ಎಲ್ಲರೂ ದರ್ಶನ್ ಒಬ್ಬನೇ ಅಪರಾಧಿ ಎಂದು ನಂಬಿದ್ದರು.
ಆಸ್ಪತ್ರೆಯಲ್ಲಿ ನಡೆದ ಹೈ ಡ್ರಾಮಾ
ವರ ರವೀಶ್ ಆಸ್ಪತ್ರೆಗೆ ದಾಖಲಾದಾಗ ಅಲ್ಲಿ ನಡೆದ ದೃಶ್ಯಗಳು ನಿಜಕ್ಕೂ ಅಚ್ಚರಿ ಮೂಡಿಸುವಂತಿದ್ದವು. ಏನೂ ಅರಿಯದ ನಿಗ್ವಿಯಂತೆ ಬಂದ ವಧು ನಯನಾ ಭರ್ಜರಿ ನಾಟಕವಾಡಿದ್ದಳು. ತನ್ನ ಭಾವಿ ಪತಿಗೆ ಈ ಸ್ಥಿತಿ ಬಂದಿದ್ದಕ್ಕೆ ಕಣ್ಣೀರು ಹಾಕಿ, ತನಗೆ ಈ ಮದುವೆ ಆಗಲೇಬೇಕು ಎಂದು ರವೀಶ್ ಮುಂದೆ ಗೋಗರೆದಿದ್ದಳು. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದ ರವೀಶ್ ಮಾತ್ರ, ಮದುವೆಗೆ ಮುನ್ನವೇ ಇಷ್ಟೆಲ್ಲಾ ಅವಾಂತರವಾದರೆ ಮುಂದೆ ಕಷ್ಟ ಎಂದು ನಿರ್ಧರಿಸಿ (Wedding Attack) ಮದುವೆಯನ್ನು ನಿರಾಕರಿಸಿದ್ದರು. ಆಕೆಯ ಕಣ್ಣೀರಿಗೆ ಕರಗದೆ ರವೀಶ್ ತೆಗೆದುಕೊಂಡ ಆ ನಿರ್ಧಾರವೇ ಇಂದು ಅವರಿಗೆ ಸತ್ಯದ ದರ್ಶನ ಮಾಡಿಸಿದೆ.
ಕಾಲ್ ಹಿಸ್ಟರಿಯಿಂದ ಬಯಲಾದ ನಯನಾಳ ಅಸಲಿ ಮುಖ
ಪೊಲೀಸರು ಈ ಪ್ರಕರಣದ ತನಿಖೆ ಚುರುಕುಗೊಳಿಸಿದಾಗ ನಯನಾಳ ನಡವಳಿಕೆಯಲ್ಲಿ ಅನುಮಾನ ವ್ಯಕ್ತವಾಯಿತು. ಕೂಡಲೇ ಆಕೆಯ ಮೊಬೈಲ್ ಕರೆಗಳು ಮತ್ತು ಸಂದೇಶಗಳನ್ನು ಪರಿಶೀಲಿಸಿದಾಗ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಮದುವೆ ನಿಲ್ಲಿಸಲು ಮತ್ತು ರವೀಶ್‌ನನ್ನು ದಾರಿಯಿಂದ ತಪ್ಪಿಸಲು ಸ್ವತಃ ವಧು ನಯನಾಳೇ ತನ್ನ ಹಳೆಯ (Wedding Attack) ಪ್ರೇಮಿ ದರ್ಶನ್ ಜೊತೆ ಸೇರಿ ಸ್ಕೆಚ್ ಹಾಕಿದ್ದಳು. ಈ ಮದುವೆಯಲ್ಲಿ ಆಕೆಗೆ ಇಷ್ಟವಿರಲಿಲ್ಲ, ಆದರೆ ಮನೆಯವರ ಒತ್ತಾಯಕ್ಕೆ ಒಪ್ಪಿದಂತೆ ನಟಿಸಿ, ಕೊನೆಗೆ ವರನನ್ನೇ ಮುಗಿಸಲು ಸುಪಾರಿ ನೀಡಿದ್ದಳು ಎಂಬುದು ವಿಚಾರಣೆಯಲ್ಲಿ ದೃಢಪಟ್ಟಿದೆ. Read this also : 9 ವರ್ಷ ಪ್ರೀತಿಸಿ ಮದುವೆಯಾದ ಎರಡೇ ತಿಂಗಳಿಗೆ ಪತಿಯನ್ನೇ ಕೊಂದ ಪತ್ನಿ: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ…!

ಆರೋಪಿಗಳ ಬಂಧನ
ಸದ್ಯ ಈ ಪ್ರಕರಣದಲ್ಲಿ (Wedding Attack) ವಧು ನಯನಾ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಚಿನಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮದುವೆಯಾಗಿ ನೂರು ಕಾಲ ಸುಖವಾಗಿರಬೇಕಿದ್ದ ಯುವತಿ ಇಂದು ಜೈಲು ಪಾಲಾಗಿದ್ದು, ಹಳೆಯ ಪ್ರೇಮಕ್ಕಾಗಿ ಹೊಸ ಜೀವನವನ್ನೇ ಬಲಿಕೊಟ್ಟಿದ್ದಾಳೆ.
