ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿ ಸದ್ಯ ಸಿಎಂ ಡಿಸಿಎಂ ಕುರ್ಚಿ ಕದನ ಜೋರಾಗಿ ಸದ್ದು ಮಾಡುತ್ತಿದೆ. ಕೆಲವು ದಿನಗಳಿಂದ ಜಾತಿಗೊಂಡು ಡಿಸಿಎಂ ಸ್ಥಾನದ ಕೂಗು ಕೇಳಿಬರುತ್ತಿತ್ತು. ಕಳೆದೆರಡು ದಿನಗಳಿಂದ ಜಾತಿಗೊಂಡು ಮುಖ್ಯಮಂತ್ರಿ ಸ್ಥಾನದ ಕೂಗು ಜೋರಾಗಿದೆ. ಲಿಂಗಾಯಿತರ ಪರ ಶ್ರೀಶೈಲ ಜಗದ್ಗುರುಗಳು, ಡಿ.ಕೆ. ಶಿವಕುಮಾರ್ ಪರ ಒಕ್ಕಲಿಗ ಸ್ವಾಮೀಜಿ ಬ್ಯಾಟಿಂಗ್ ಬೀಸುತ್ತಿದ್ದಾರೆ. ಈ ನಡುವೆ ಕೆಲ ಸಚಿವರು ಹಾಗೂ ಶಾಸಕರೂ ಸಹ ಈ ಕುರಿತು ಹೇಳಿಕೆಗಳನ್ನು ನೀಡುತ್ತಿದ್ದು, ಅವರಿಗೆ ಡಿಕೆಶಿ ವಾರ್ನ್ ಮಾಡಿದ್ದಾರೆ. ಬಾಯಿಗೆ ಬೀಗ ಹಾಕಿಕೊಂಡು ಇದ್ರೆ ಒಳ್ಳೆದು ಎಂದು ಎಚ್ಚರಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆಯ ಕೂಗೂ ಜೋರಾಗಿದೆ. ಡಿಕೆ ಶಿವಕುಮಾರ್ ರವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಚಂದ್ರಶೇಖರನಾಥ ಸ್ವಾಮೀಜಿ ಕೆಂಪೇಗೌಡ ಜಯಂತಿಯಲ್ಲಿ ಹೇಳಿದ್ದರು. ಈ ಹೇಳಿಕೆಯ ಬಳಿಕ ರಾಜ್ಯದ ಅನೇಕ ಸಚಿವರು ಹಾಗೂ ಶಾಸಕರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ನಡುವೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವರು ಹಾಗೂ ಶಾಸಕರಿಗೆ ಶಿಸ್ತುಕ್ರಮದ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಯಾವ ಡಿಸಿಎಂ ಚರ್ಚೆಯೂ ಇಲ್ಲ, ಸಿಎಂ ಪ್ರಶ್ನೆಯೂ ಇಲ್ಲ. ನನಗೆ ಯಾವ ರೆಕಮೆಂಡೇಟಷನ್ ಸಹ ಬೇಕಾಗಿಲ್ಲ. ನಾನು ಖರ್ಗೆ, ಸಿದ್ದರಾಮಯ್ಯ ರವರು ಪಕ್ಷದ ಹಿತದೃಷ್ಟಿಯಿಂದ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಯಾವ ಶಾಸಕ ಕೂಡ ಮಾತನಾಡುವ ಅವಶ್ಯಕತೆಯಿಲ್ಲ. ಈ ರೀತಿ ಮಾತನಾಡಿದರೇ ವಿಧಿಯಿಲ್ಲದೇ ಎಐಸಿಸಿ ಹಾಗೂ ನಾನು ನೊಟೀಸ್ ನೀಡಬೇಕಾಗುತ್ತದೆ. ಶಿಸ್ತು ಕಾಪಾಡಲು ನೊಟೀಸ್ ನೀಡಬೇಕಾಗುತ್ತದೆ. ಆದ್ದರಿಂದ ಬಾಯಿಗೆ ಬೀಗ ಹಾಕಿಕೊಂಡು ಇದ್ದರೇ ಒಳ್ಳೆಯದು ಎಂದು ವಾರ್ನ್ ಮಾಡಿದ್ದಾರೆ.
ಇನ್ನೂ ಪಕ್ಷ ಕಟ್ಟಲು ತುಂಬಾನೆ ಕಷ್ಟಪಟ್ಟಿದ್ದೇವೆ. ಪಕ್ಷ ಅಧಿಕಾರಕ್ಕೆ ತರಲು ಎಷ್ಟು ಕಷ್ಟಪಟ್ಟಿದ್ದೇವೆ ಎಂಬುದು ನಮಗೆ ಗೊತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ನಿಮ್ಮ ಬಾಯಿಗೆ ಬೀಗ ಹಾಕಿಕೊಂಡು ಇರಬೇಕು. ಯಾವ ಸ್ವಾಮೀಜಿಗಳೂ ಮಾತನಾಡಿಲ್ಲ. ಎಲ್ಲರಿಗೂ ಕೈ ಮುಗಿಯುತ್ತೇನೆ, ನಮ್ಮ ರಾಜಕಾರಣದ ಸುದ್ದಿಗೆ ನೀವು ಬರಬೇಡಿ. ಚಂದ್ರಶೇಖರನಾಥ ಸ್ವಾಮೀಜಿ ಏನೋ ನನ್ನ ಮೇಲಿನ ಅಭಿಮಾನದಿಂದ ಮಾತನಾಡಿದ್ದಾರೆ ಅಷ್ಟೆ ಎಂದರು. ಎಲ್ಲಾ ಎಂಪಿ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇವೆ. ರಾಜಕಾರಣವನ್ನು ಬದಿಗೆ ಇಟ್ಟು ಚರ್ಚೆ ಮಾಡಿದ್ದೇವೆ. ನಿರ್ಮಲಾ ಸೀತಾರಾಮನ್ ರವರು ಸುಮಾರು 2 ಗಂಟೆಗಳ ಕಾಲ ನಮ್ಮೊಂದಿಗೆ ಚರ್ಚೆ ಮಾಡಿದರು. ಕರ್ನಾಟಕದ ಅಭಿವೃದ್ದಿ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ನೀರಾವರಿ, ರೈತರ ಸಮಸ್ಯೆಗಳೂ ಸೇರಿದಂತೆ ಹಲವು ಯೋಜನೆಗಳು, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.