Viral – ಕೆಲಸದ ಸ್ಥಳದಲ್ಲಿ ಅಸೂಯೆ, ಹೊಟ್ಟೆ ಕಿಚ್ಚು ಸಹಜ. ಆದರೆ, ಇದನ್ನು ಪ್ರಾಣ ಹಾನಿಗೆ ತರುತ್ತಾರಾ? ಬ್ರೆಜಿಲ್‌ನ ಅಬೈಡಾ ಡಿ ಗೋಯಾಸ್ ನಗರದಲ್ಲಿ ನಡೆದ ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ತನ್ನ ಸಹೋದ್ಯೋಗಿಗೆ ಬಡ್ತಿ ದೊರಕಿದದ್ದನ್ನು ಸಹಿಸಿಕೊಳ್ಳಲಾರದೆ ಆಕೆಯ ನೀರಿನ ಬಾಟಲಿಗೆ ವಿಷ ಬೆರೆಸಿದ ಮಹಿಳೆ, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ತುಂಬಾನೆ ವೈರಲ್ ಆಗುತ್ತಿದೆ. ಜೊತೆಗೆ ಮಹಿಳೆಯ ವರ್ತನೆಯ ವಿರುದ್ದ ಆಕ್ರೋಷ ವ್ಯಕ್ತವಾಗುತ್ತಿದೆ.

Viral – ಘಟನೆಯ ಹಿನ್ನೆಲೆ
ಫೆಬ್ರವರಿ 14ರಂದು, ಕಂಪನಿಯ ಮ್ಯಾನೇಜರ್ ಒಬ್ಬ ಸಹೋದ್ಯೋಗಿಗೆ ಬಡ್ತಿ ನೀಡಿದ್ದರಿಂದ ಆರೋಪಿ ಮಹಿಳೆ ಕೋಪಗೊಂಡಿದ್ದಳು. ತನಗೆ ಬದಲಾಗಿ ಬೇರೊಬ್ಬರಿಗೆ ಬಡ್ತಿ ಸಿಕ್ಕಿದ್ದು ಅವಳಿಗೆ ಸಹಿಸಲಾಗಲಿಲ್ಲ. ಇದರ ಪರಿಣಾಮವಾಗಿ, ಅವಳು ತನ್ನ ಸಹೋದ್ಯೋಗಿಯನ್ನು ಕೊಲ್ಲಲು ಸಂಚು ರೂಪಿಸಿದಳು. ಸಹೋದ್ಯೋಗಿ ತನ್ನ ಮೇಜಿನಿಂದ ಎದ್ದು ಹೊರಟಾಗ, ಆರೋಪಿ ಮಹಿಳೆ ಅವಳ ಮೇಜಿನ ಬಳಿ ಹೋಗಿ, ನೀರಿನ ಬಾಟಲಿಗೆ ವಿಷ ಬೆರೆಸಿದ್ದಾಳೆ.
(Best Mini Cooler for Room Cooling Mini AC Portable Mini Fan Artic Cooler with 7 Colors LED Light – Buy Now)
Viral – ವಿಷಪ್ರಾಶನದ ಪರಿಣಾಮ
ಆರೋಪಿ ಮಹಿಳೆಯ ಈ ಕೃತ್ಯವನ್ನು ಗಮನಿಸದ ಸಹೋದ್ಯೋಗಿ, ವಿಷ ಬೆರೆಸಿದ ನೀರನ್ನು ಕುಡಿದರು. ತಕ್ಷಣವೇ ಅವರ ಬಾಯಿ ಉರಿಯಲು ಪ್ರಾರಂಭಿಸಿತು ಮತ್ತು ಅಸ್ವಸ್ಥತೆ ಉಂಟಾಯಿತು. ಅದೃಷ್ಟವಶಾತ್, ಸಕಾಲಿಕವಾಗಿ ವೈದ್ಯಕೀಯ ಸಹಾಯ ಪಡೆದು ಅವರ ಜೀವ ಉಳಿಯಿತು.
Viral – ಸಿಸಿಟಿವಿ ಫುಟೇಜ್ ವೈರಲ್
ಈ ಘಟನೆಯ ದೃಶ್ಯಗಳು ಕಂಪನಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಬಿದ್ದು, ಅದನ್ನು Metropoles ಎಂಬ ಎಕ್ಸ್ (Twitter) ಖಾತೆಯಲ್ಲಿ ಹಂಚಲಾಗಿದೆ. ವಿಡಿಯೋದಲ್ಲಿ, ಆರೋಪಿ ಮಹಿಳೆ ಸಹೋದ್ಯೋಗಿಯ ಮೇಜಿನ ಬಳಿ ಹೋಗಿ, ನೀರಿನ ಬಾಟಲಿಗೆ ವಿಷ ಬೆರೆಸುವುದನ್ನು ಸ್ಪಷ್ಟವಾಗಿ ನೋಡಬಹುದು. ಈ ದೃಶ್ಯವನ್ನು ನೋಡಿದ ನಂತರ, ನೆಟಿಜನ್ಸ್ ಬೆಚ್ಚಿಬಿದ್ದಿದ್ದಾರೆ.

ಇನ್ನೂ ಈ ಘಟನೆಯ ಬಗ್ಗೆ ತಿಳಿದ ಪೊಲೀಸರು, ಆರೋಪಿ ಮಹಿಳೆಯನ್ನು ಕೊಲೆ ಯತ್ನದ ಆರೋಪದಡಿ ಬಂಧಿಸಿದ್ದಾರೆ. ಅವಳ ಮೇಲಿನ ಆರೋಪ ಸಾಬೀತಾದರೆ, 6 ರಿಂದ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಬಹುದು. ಪ್ರಸ್ತುತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.
📌 ಈ ಪ್ರಕರಣದ ಸಂಪೂರ್ಣ ಮಾಹಿತಿ ಮತ್ತು ಸಿಸಿಟಿವಿ ದೃಶ್ಯ ನೋಡಲು:
👉 Viral Video Link