Viral Video : ರೀಲ್ಸ್ ಕ್ರೇಜ್‌ಗೆ ಮತ್ತೊಂದು ಬಲಿ: ಬರೇಲಿ ಫ್ಲೈಓವರ್ ಬಳಿ ಸ್ಲ್ಯಾಬ್ ಬಿದ್ದು 22 ವರ್ಷದ ಯುವಕ ಸಾವು!

ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಬೇಕು, ಸಾವಿರಾರು ಲೈಕ್ಸ್ ಬರಬೇಕು ಎಂಬ ಹಪಾಹಪಿ ಇಂದು ಮಿತಿಮೀರಿದೆ. ಆದರೆ ಈ ‘ವೈರಲ್’ ಕ್ರೇಜ್ ಎಷ್ಟೋ ಬಾರಿ ಚಿತೆಯ ಹಾದಿ ತೋರಿಸುತ್ತಿದೆ ಎಂಬುದಕ್ಕೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಈ ಭೀಕರ ಘಟನೆಯೇ ಸಾಕ್ಷಿ. ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಮೇಲೆ ರೀಲ್ಸ್ ಮಾಡಲು (Viral Video) ಹೋದ 22 ವರ್ಷದ ಯುವಕನ ಮೇಲೆ ಬೃಹತ್ ಕಾಂಕ್ರೀಟ್ ಸ್ಲ್ಯಾಬ್ ಬಿದ್ದು, ಆತ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ.

Viral Video shows youth crushed by concrete slab while making reel in Bareilly

Viral Video – ಏನಿದು ಘಟನೆ?

ಬರೇಲಿಯ ನವಾಬ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೌರಿಯಾ ರೈಲ್ವೆ ನಿಲ್ದಾಣದ ಬಳಿ ನಿರ್ಮಾಣ ಹಂತದಲ್ಲಿರುವ ಫ್ಲೈ ಓವರ್ ಬಳಿ ಈ ದುರಂತ ಸಂಭವಿಸಿದೆ. ರಿಚೋಲಾ ಗ್ರಾಮದ ನಿವಾಸಿಯಾದ ಮೊಹಮ್ಮದ್ ಫೈಜಾನ್ (22) ಎಂಬ ವೃತ್ತಿಪರ ಹೇರ್ ಡ್ರೆಸ್ಸರ್‌ ಮೃತಪಟ್ಟ ದುರ್ದೈವಿ. ಶುಕ್ರವಾರ ಸಂಜೆ ತನ್ನ ಸ್ನೇಹಿತ ಅನುಜ್ ಜೊತೆಗೂಡಿ ಫೈಜಾನ್ ಹೊರಗಡೆ ಹೋದಾಗ, ಈ ಅವಘಡ ಸಂಭವಿಸಿದೆ. ರಸ್ತೆ ಬದಿಯಲ್ಲಿ ಜೋಡಿಸಿಟ್ಟಿದ್ದ ಬೃಹತ್ ಕಾಂಕ್ರೀಟ್ ಸ್ಲ್ಯಾಬ್‌ಗಳ ಮೇಲೆ ನಿಂತು ವಿಭಿನ್ನವಾಗಿ ರೀಲ್ಸ್ ಮಾಡಲು ಫೈಜಾನ್ ಪ್ರಯತ್ನಿಸಿದ್ದಾನೆ.

ಸ್ಲ್ಯಾಬ್ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವು

ವೈರಲ್ ವಿಡಿಯೋಗಾಗಿ ಫೈಜಾನ್ ಕಾಂಕ್ರೀಟ್ ಸ್ಲ್ಯಾಬ್‌ಗಳ ಮೇಲೆ ಹತ್ತಿದಾಗ ಸಮತೋಲನ ತಪ್ಪಿ ಕೆಳಗೆ ಬಿದ್ದಿದ್ದಾನೆ. ದುರದೃಷ್ಟವಶಾತ್, ಅವನು ಬೀಳುವಾಗ ಮೇಲಿದ್ದ ಭಾರೀ ತೂಕದ ಸ್ಲ್ಯಾಬ್ ಕೂಡ ಅವನ ಮೇಲೆ ಉರುಳಿ ಬಿದ್ದಿದೆ. ಸ್ಲ್ಯಾಬ್ ನೇರವಾಗಿ ತಲೆಗೆ ಬಡಿದ ಕಾರಣ ತೀವ್ರ ರಕ್ತಸ್ರಾವವಾಗಿ ಫೈಜಾನ್ ಸ್ಥಳದಲ್ಲೇ (Viral Video)  ಪ್ರಾಣ ಬಿಟ್ಟಿದ್ದಾನೆ. ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಕುಟುಂಬಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ. ಮಗನನ್ನು ಕಳೆದುಕೊಂಡ ತಂದೆ ಮೆಹಂದಿ ಹಸನ್ ಮತ್ತು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಸಾಮಾಜಿಕ ಜಾಲತಾಣದ ‘ಕ್ರೇಜ್’ ಜೀವಕ್ಕೆ ಸಂಚಕಾರ!

ಇತ್ತೀಚಿನ ದಿನಗಳಲ್ಲಿ ಯುವಕರು ಅಪಾಯಕಾರಿ ಸ್ಥಳಗಳಲ್ಲಿ ವಿಡಿಯೋ ಚಿತ್ರೀಕರಿಸುವುದು ಫ್ಯಾಷನ್ ಆಗಿಬಿಟ್ಟಿದೆ. ಆದರೆ, ಈ ಕ್ಷಣಿಕ ಜನಪ್ರಿಯತೆಗಾಗಿ ಪ್ರಾಣವನ್ನು ಪಣಕ್ಕಿಡುವುದು (Viral Video)  ಎಷ್ಟು ಸರಿ ಎಂಬ ಪ್ರಶ್ನೆ ಈಗ ಮತ್ತೆ ಎದ್ದಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here 

ಪೊಲೀಸರ ಎಚ್ಚರಿಕೆ: “ಯಾವುದೇ ಒಂದು ವೈರಲ್ (Viral Video) ವಿಡಿಯೋ ನಿಮ್ಮ ಅಮೂಲ್ಯವಾದ ಜೀವಕ್ಕಿಂತ ದೊಡ್ಡದಲ್ಲ. ಸೋಷಿಯಲ್ ಮೀಡಿಯಾ ಪ್ರಸಿದ್ಧಿಗಾಗಿ ಅಪಾಯಕಾರಿ ಸಾಹಸಗಳನ್ನು ಮಾಡಬೇಡಿ” ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Viral Video shows youth crushed by concrete slab while making reel in Bareilly

ನಾವು ಕಲಿಯಬೇಕಾದ ಪಾಠವೇನು?

ಈ ಘಟನೆಯ ವಿಡಿಯೋ ಈಗಾಗಲೇ (Viral Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಭೀತಿ ಮೂಡಿಸಿದೆ. ಯುವಜನತೆ ಇಂತಹ ಹುಚ್ಚು ಸಾಹಸಗಳಿಂದ ದೂರವಿರಬೇಕು. ಪೋಷಕರು ಕೂಡ ತಮ್ಮ ಮಕ್ಕಳು ಯಾವ ರೀತಿಯ ವಿಡಿಯೋಗಳನ್ನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಗಮನ ಹರಿಸುವುದು ಇಂದಿನ ಅಗತ್ಯವಾಗಿದೆ.

Leave a Comment

Your email address will not be published. Required fields are marked *

Scroll to Top