Viral Video – ಸಾಮಾನ್ಯವಾಗಿ ಕಳ್ಳರು ಚಿನ್ನಾಭರಣ, ಹಣ ಸೇರಿದಂತೆ ಹಲವು ಬೆಲೆಬಾಳುವಂತಹ ವಸ್ತುಗಳನ್ನು ಕಳ್ಳತನ ಮಾಡುತ್ತಿರುತ್ತಾರೆ. ಮನೆಯ ಹೊರಗೆ ನಿಲ್ಲಿಸಿದಂತಹ ವಾಹನಗಳನ್ನು ಕದ್ದು ಪರಾರಿಯಾಗುವಂತಹ ಕಿಲಾಡಿ ಕಳ್ಳತನದ ಸುದ್ದಿಗಳನ್ನೂ ಸಹ ಕೇಳಿರುತ್ತೀರಿ. ಆದರೇ ಇಲ್ಲೊಂದು ಘಟನೆ ನಡೆದಿದ್ದು, ಕಿಲಾಡಿ ಯುವತಿಯರಿಬ್ಬರು ಅಂಗಡಿಯ ಹೊರಗಿಟ್ಟಿದ್ದಂತಹ ಗಿಡದ ಪಾಟ್ ಅನ್ನು ಕದ್ದು ಪರಾರಿಯಾಗಿರುವ ಘಟನೆ (Viral Video) ನಡೆದಿದ್ದು, ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಕಿಲಾಡಿ ಯುವತಿಯರಿಬ್ಬರು ರಾತ್ರಿ ವೇಳೆ ಸ್ಕೂಟಿಯಲ್ಲಿ ಬಂದು ಅಂಗಡಿಯ ಹೊರಗೆ ಪಾಟ್ ನಲ್ಲಿದ್ದ ದೊಡ್ಡ ಗಿಡವನ್ನು ಕದ್ದು ಪರಾರಿಯಾಗಿದ್ದಾರೆ. ಅಂದಹಾಗೆ ಈ ಘಟನೆ ಛತ್ತೀಸ್ ಗಢದ ರಾಯಪುರದಲ್ಲಿ ನಡೆದಿದೆ ಎನ್ನಲಾಗಿದೆ. ಸ್ಕೂಟಿಯಲ್ಲಿ ಬಂದ ಇಬ್ಬರು ಯುವತಿಯರು ಹೂವಿನ ಗಿಡ ಕದ್ದಿದ್ದಾರೆ. ಇಬ್ಬರೂ ಯುವತಿಯರು ಖತರ್ನಾಕ್ ಪ್ಲಾನ್ ಮಾಡಿ ರಾತ್ರಿಯ ವೇಳೆ ಸ್ಕೂಟಿಯಲ್ಲಿ ಬಂದು ಅಂಗಡಿಯ ಹೊರಗೆ ಪಾಟ್ ನಲ್ಲಿದ್ದ ದೊಡ್ಡ ಗಿಡ ಕದ್ದು ಪರಾರಿಯಾಗಿದ್ದಾರೆ. ಈ ವಿಡಿಯೋ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋ ಇಲ್ಲಿದೆ ನೋಡಿ: Click Here
ಈ ವಿಡಿಯೋವನ್ನು @aao_chhattisgarh ಎಂಬ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಾತ್ರಿ ಸಮಯದಲ್ಲಿ ಅಂಗಡಿಯೊಂದರ ಬಳಿ ಇಬ್ಬರು ಯುವತಿಯರು ಸ್ಕೂಟಿಯಲ್ಲಿ ಬರುತ್ತಾರೆ. ಬಂದವರು ಅಂಗಡಿಯ ಮುಂಭಾಗದಲ್ಲಿದ್ದ ಗಿಡದ ಪಾಟ್ ಕದಿಯುತ್ತಾರೆ. ಬಳಿಕ ಗಿಡದ ಪಾಟ್ ಕದ್ದು ಗಾಡಿಯಲ್ಲಿಟ್ಟುಕೊಂಡು ಪರಾರಿಯಾಗಲು ಯತ್ನಿಸುತ್ತಾರೆ. ಆದರೆ ಇಲ್ಲೊಂದು ತಮಾಷೆ ಸಹ ನಡೆದಿದೆ. ಗಿಡವನ್ನು ಸ್ಕೂಟಿಯಲ್ಲಿ ಸಾಗಿಸುವ ವೇಳೆ ಇಬ್ಬರೂ ಯುವತಿಯರೂ ಸ್ಕೂಟಿಯಿಂದ ಕೆಳಗೆ ಬಿದಿದ್ದಾರೆ. ಈ ವಿಡಿಯೋ ನೋಡಿದರೇ ಅನೇಕರು ಸ್ಕ್ರಿಪ್ಟೆಡ್ ವಿಡಿಯೋ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಅಕ್ಟೋಬರ್ ಮಾಹೆಯಲ್ಲಿ ಹಂಚಿಕೊಂಡ ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಕಂಡಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.