Viral Video – ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ವಿಡಿಯೋಗಳು ತುಂಬಾನೆ ಸದ್ದು ಮಾಡುತ್ತಿರುತ್ತದೆ. ಕೆಲವೊಂದು ವಿಡಿಯೋಗಳು ನೆಟ್ಟಿಗರ ಕೆಂಗಣ್ಣಿಗೆ ಸಹ ಗುರಿಯಾಗುತ್ತಿರುತ್ತದೆ. ಅಂತಹುದೇ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದೆ. ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯರು ಹಾಗೂ ನರ್ಸ್‌ಗಳ ಕರ್ತವ್ಯ ಪಾಲನೆಯನ್ನು ಮರೆತು ಆಸ್ಪತ್ರೆಯಲ್ಲಿಯೇ (Viral Video) ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅವರ ವರ್ತನೆಗೆ ನೆಟ್ಟಿಗರು ಆಕ್ರೋಷ ಹೊರಹಾಕುತ್ತಿದ್ದಾರೆ.
ಅಂದಹಾಗೆ ಈ ಘಟನೆ ಉತ್ತರ ಪ್ರದೇಶದ ವಾರಣಾಸಿಯ ದೀನದಯಾಳ್ ಉಪಾಧ್ಯಾಯ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ ಎನ್ನಲಾಗಿದೆ. ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್‌ಗಳು ಜೋಡಿಯಾಗಿ ಆಸ್ಪತ್ರೆಯ ಕೊಠಡಿಯಲ್ಲೇ ಭರ್ಜರಿಯಾ ಕುಣಿದಿದ್ದಾರೆ. ನರ್ಸ್ ಒಬ್ಬರಿಗೆ ಪ್ರಮೋಷನ್ ಸಿಕ್ಕ ಖುಷಿಯಲ್ಲಿ ಈ ಪಾರ್ಟಿಯನ್ನು ಏರ್ಪಡಿಸಲಾಗಿದೆ ಎಂದು ಹೇಳಲಾಗಿದೆ. ಕರ್ತವ್ಯದ ಸಮಯದಲ್ಲಿ ಕೆಲಸ ಬಿಟ್ಟು ವೈದ್ಯರು ಹಾಗೂ ಅಧಿಕಾರಿಗಳು ಮತ್ತು ನರ್ಸ್‌ಗಳು ಜೊತೆಯಾಗಿ ಹಿಂದಿ ಹಾಡುಗಳಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ಕೆಲವೊಂದು ಮೂಲಗಳ ಪ್ರಕಾರ ಆಸ್ಪತ್ರೆಯ ಸ್ಟಾಫ್ ನರ್ಸ್‌ಗಳಿಗೆ ಪ್ರಮೋಷನ್ ಸಿಕ್ಕ ಹಿನ್ನೆಲೆಯಲ್ಲಿ ಖುಷಿಯಿಂದ ಆಸ್ಪತ್ರೆಯಲ್ಲಿ ಪಾರ್ಟಿಯನ್ನು ಆಯೋಜನೆ ಮಾಡಿದ್ದರಂತೆ. ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ಜೋರಾಗಿ ಹಾಡುಗಳನ್ನು ಹಾಕಿ ವೈದ್ಯರು ಹಾಗೂ ನರ್ಸ್‌ಗಳು ಕುಣಿದು ಕುಪ್ಪಳಿಸಿದ್ದಾರೆ. ಆಸ್ಪತ್ರೆಯ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರೂ ಸಹ ಆಕ್ರೋಷ ಹೊರಹಾಕಿದ್ದಾರೆ. ಈ ಕುರಿತು ಆಕ್ರೋಷ ಹೆಚ್ಚಾಗುತ್ತಿದ್ದಂತೆ ವಾರಣಾಸಿಯ ಮುಖ್ಯವೈದ್ಯಾಧಿಕಾರಿ ಈ ಕುರಿತು ತನಿಖೆಗೆ ಆದೇಶ ಮಾಡಿದ್ದಾರೆ ಎನ್ನಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಈ ವಿಡಿಯೋವನ್ನು ಡಾ.ಅಹ್ತೇಶಾಮ್ ಸಿದ್ದಿಕಿ (@AhteshamFIn)ಎಂಬ ಹೆಸರಿನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅಧಿಕಾರಿಗಳು, ವೈದ್ಯರು, ನರ್ಸ್‌ಗಳು ಸೇರಿದಂತೆ ಸಿಬ್ಬಂದಿ ಡ್ಯಾನ್ಸ್ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರೀ ವೀಕ್ಷಣೆ ಕಂಡಿದೆ. ಜೊತೆಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುವುದರ ಮೂಲಕ ಅವರ ನಡೆಗೆ ಆಕ್ರೋಷ ಹೊರಹಾಕುತ್ತಿದ್ದಾರೆ.