Viral Video: ಕೆಲವರು ಕಾಡು ಪ್ರಾಣಿಗಳೊಂದಿಗೆ ಸುಖಾಸುಮ್ಮನೆ ಕೀಟಲೆ ಮಾಡಿ ನಾನಾ ಸಮಸ್ಯೆಗಳನ್ನು ತಂದುಕೊಳ್ಳುತ್ತಾರೆ. ಅದರಲ್ಲೂ ಕೆಲವರು ವಿದ್ಯಾವಂತರಾಗಿದ್ದರೂ ಸಹ ಮೋಜು ಮಸ್ತಿ ಮಾಡಲು ಅನಾಗರೀಕರಂತೆ ವರ್ತನೆ ಮಾಡುತ್ತಾರೆ. ಅದೇ ರೀತಿಯ ಘಟನೆಯೊಂದು ನಡೆದಿದೆ. ತನ್ನ ಪಾಡಿಗೆ ಸುಮ್ಮನೇ ಹೋಗುತ್ತಿರುವ ಕಾಡಾನೆಗೆ ಕೀಟಲೆ ಮಾಡಲು ಹೋಗಿ ಪೇಜಿಗೆ ಸಿಲುಕಿದ್ದಾನೆ. ರಸ್ತೆ ದಾಟುತ್ತಿದ್ದ ಆನೆಗೆ ಕೀಟಲೆ ಮಾಡಿದ ಯುವಕನನ್ನು ಆನೆ ಅಟ್ಟಾಡಿಸಿಕೊಂಡು ಹೋಗಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಯುವಕನ ವರ್ತನೆ ಕಂಡು ನೆಟ್ಟಿಗರು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಕೆಲವರು ಪ್ರಾಣಿಗಳಿಗಿಂತ ಕೆಟ್ಟದಾಗಿ ವರ್ತನೆ ಮಾಡುತ್ತಿರುತ್ತಾರೆ. ಮನುಷ್ಯನಿಗೆ ಯೋಚಿಸುವ ಶಕ್ತಿಯಿರುತ್ತದೆ ಆದರೆ ಕೆಲವೊಮ್ಮೆ ಪ್ರಾಣಿಗಳಿಗಿಂತ ಕಡೆಯಾಗಿ ವರ್ತನೆ ಮಾಡುತ್ತಾರೆ. ಅದೇ ರೀತಿ ಯುವಕನೋರ್ವ ಕಾಡಾನೆಗೆ ಕೀಟಲೆ ಮಾಡಿದ್ದಾನೆ. ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಓಡಾಡುವ ಸಮಯದಲ್ಲಿ ಅವುಗಳಿಗೆ ತೊಂದರೆ ಕೊಡಬಾರದು ಎಂಬ ಮಾಹಿತಿಯಿದ್ದರೂ ಸಹ ಈ ಯುವಕ ಕಾಡಾನೆಗೆ ಕೀಟಲೆ ಮಾಡಿದ್ದಾನೆ. ಇದರಿಂದ ಕೆರಳಿದ ಆನೆ ಆತನನ್ನು ಅಟ್ಟಾಡಿಸಿಕೊಂಡು ಹೋಗಿದೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆತನ ವರ್ತನೆಗೆ ಎಲ್ಲರೂ ಆಕ್ರೋಷ ಹೊರಹಾಕುತ್ತಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಈ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಪರ್ವೀನ್ ಕಾಸ್ವಾನ್ ಎಂಬುವವರು ಹಂಚಿಕೊಂಡು ಯುವಕನ ವಿರುದ್ದ ಆಕ್ರೋಷ ಹೊರಹಾಕಿದ್ದಾರೆ. ಇಲ್ಲಿ ಪ್ರಾಣಿ ಯಾರು? ನಿಮ್ಮ ಮೋಜಿಗಾಗಿ ಕಾಡು ಪ್ರಾಣಿಗಳನ್ನು ಕೆರಳಿಸುವ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ. ಈ ವಿಡಿಯೋ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಪ್ರಾಣಿಯನ್ನು ಗುರ್ತಿಸಿ, ಬಹುಶಃ ನೀವು ವಯಸ್ಸಿನಲ್ಲಿ ಚಿಕ್ಕವರಾಗಿರಬಹುದು. ಆನೆಯನ್ನು ಮೀರಿಸುವಂತಹ ಶಕ್ತಿ ನಿಮ್ಮಲ್ಲಿ ಇರಬಹುದು. ಆದರೆ ಕೆರಳಿದ ಈ ಪ್ರಾಣಿಗಳು ಮುಂದಿನ ದಿನಗಳಲ್ಲಿ ಮನುಷ್ಯರನ್ನು ಕಂಡರೇ ಪ್ರಾಣಿಗಳು ಶಾಂತವಾಗಿ ವರ್ತನೆ ಮಾಡೋಲ್ಲ. ಆದ್ದರಿಂದ ಮೋಜು ಮಸ್ತಿಗಾಗಿ ಕಾಡು ಪ್ರಾಣಿಗಳನ್ನು ಕೆರಳಿಸುವಂತಹ ಕೆಲಸ ಮಾಡಬೇಡಿ ಎಂದು ಬರೆದು ವಿಡಿಯೋ ಹಂಚಿಕೊಂಡಿದ್ದಾರೆ.
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆನೆಗಳ ದಂಡು ರಸ್ತೆ ದಾಟುವಾಗ ಯುವಕನೋರ್ವ ಒಂದು ಆನೆಗೆ ಕೀಟಲೆ ಮಾಡುತ್ತಿರುವ ದೃಶ್ಯವನ್ನು ನೋಡಬಹುದಾಗಿದೆ. ಯುವಕ ಕೀಟಲೇಯಿಂದ ಕೆರಳಿದ ಆನೆ ಆತನನ್ನು ಅಟ್ಟಾಡಿಸಿಕೊಂಡು ಹೋಗಿದೆ. ಆದರೂ ಸಹ ಯುವಕ ಪದೇ ಪದೇ ಆನೆಗಳಿಗೆ ಕೀಟಲೆ ಮಾಡುವ ಕೆಲಸ ಮಾಡಿದ್ದಾನೆ. ಕಳೆದ ಜ.12ರಂದು ಶೇರ್ ಮಾಡಿದ ಈ ವಿಡಿಯೋ ಮಿಲಿಯನ್ ಗಟ್ಟಲೇ ವೀಕ್ಷಣೆ ಕಂಡಿದೆ, ಜೊತೆಗೆ ಯುವಕ ವರ್ತನೆಗೆ ಬೇಸತ್ತ ನೆಟ್ಟಿಗರು ಆತನ ವಿರುದ್ದ ಕಾಮೆಂಟ್ ಗಳ ಮೂಲಕ ಆಕ್ರೋಷ ಹೊರಹಾಕಿದ್ದಾರೆ.