ಬೃಹದಾಕಾರದ ಹೆಬ್ಬಾವುಗಳು ಆಗಾಗ ಕೋಳಿಗಳು, ಮೇಕೆಗಳನ್ನು ನುಂಗಿದ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು (Viral Video) ನಡೆದಿದೆ. ಒಡಿಶಾದಲ್ಲಿ ಈ ಘಟನೆ ನಡೆದಿದ್ದು, ಭಾರಿ ಗಾತ್ರದ ಹೆಬ್ಬಾವು ಮೇಕೆಯನ್ನು ನುಂಗಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ. ಒಡಿಶಾದ ಬೆರ್ಹಾಂಪುರದಲ್ಲಿ ಈ ಘಟನೆ ನಡೆದಿದೆ.
IFS ಅಧಿಕಾರಿ ಸುಶಾಂತ ನಂದಾ ಎಂಬುವವರು ಈ ವಿಡಿಯೋ (Viral Video) ವನ್ನು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಡಿಶಾದ ಅರಣ್ಯ ಇಲಾಖೆಯ ಅಧಿಕಾರಿಗಳು ಬೃಹತ್ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ. 12 ಅಡಿ ಉದ್ದದ ಭಾರಿ ಗಾತ್ರ ಹೆಬ್ಬಾವು ಒಡಿಶಾದ ಬೆರ್ಹಾಂಪುರದ ವಿಲ್ಲಾಗೆ ಪ್ರವೇಶಿಸಿದೆ. ಹೆಬ್ಬಾವು ಮೇಕೆಯೊಂದನ್ನು ನುಂಗಿ ಹೊಟ್ಟೆಯಲ್ಲಿ ತುಂಬಿಕೊಂಡಿದೆ ಎಂದು ಸುಶಾಂತ ನಂದಾ ರವರು (Viral Video) ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
https://x.com/susantananda3/status/1815227882743922707
ಇನ್ನೂ ಈ ಪೋಸ್ಟ್ ನಲ್ಲಿ ಎರಡು ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಒಂದರಲ್ಲಿ ಮನೆಯೊಳಗೆ ನುಗ್ಗಿದ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿರುವ (Viral Video) ವಿಡಿಯೋ ಆಗಿದೆ. ಮತ್ತೊಂದು ವಿಡಿಯೋದಲ್ಲಿ ಅರಣ್ಯ ಅಧಿಕಾರಿಗಳು ಹಾವನ್ನು ರಕ್ಷಿಸಿ ಕಲ್ಲಿಕೋಟೆ ವ್ಯಾಪ್ತಿಯ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ. ಇಬ್ಬರು ವ್ಯಕ್ತಿಗಳು ಈ ಹೆಬ್ಬಾವನ್ನು ಹೊತ್ತುಕೊಂಡು ಹೋಗುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಭಾನೆ ವೈರಲ್ (Viral Video) ಆಗಿದೆ.