Viral Video – ಸ್ವತಂತ್ರ ಬಂದು ವರ್ಷಗಳು ಕಳೆದರೂ ಇನ್ನೂ ಮಹಿಳೆಯರು ಸ್ವತಂತ್ರವಾಗಿ ಓಡಾಡಲು ಕಷ್ಟವಾಗಿದೆ ಎನ್ನಬಹುದು. ಅದರಲ್ಲೂ ಸಾರ್ವಜನಿಕ ಪ್ರದೇಶಗಳಲ್ಲೇ ಮಹಿಳೆಯರಿಗೆ ಕಿರುಕುಳ ಕೊಡುವಂತಹವರ ಸಂಖ್ಯೆ ಹೆಚ್ಚಾಗಿದೆ. ಒಂಟಿ ಯುವತಿ, ಮಹಿಳೆ ರಸ್ತೆಯಲ್ಲಿ ಬರುತ್ತಿದ್ದಾಳೆ ಎಂದರೇ ಆಕೆಯನ್ನು ಚುಡಾಯಿಸಲು ಕೆಲವು ಪುಂಡರು ಕಾಯುತ್ತಿರುತ್ತಾರೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಯುವಕನೋರ್ವ ಚುಡಾಯಿಸಿದ್ದು, ಅದನ್ನು ನೋಡಿದ ಜನರು ಯುವಕನನ್ನು ರಸ್ತೆಯಲ್ಲಿಯೇ (Viral Video) ಸರಿಯಾಗಿಯೇ ಥಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಮೀರತ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪುಂಡನೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹುಡುಗಿಗೆ ಚುಡಾಯಿಸಿದ್ದು, ಈ ದೃಶ್ಯವನ್ನು ಕಂಡು ಅಲ್ಲಿದ್ದ ಜನ ನಡುರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಜಾಡಿಸಿ ಆತನಿಗೆ ತಕ್ಕ ಪಾಠ ಕಲಿಸಿದ್ದಾರೆ. ಯುವತಿಯನ್ನು ಚುಡಾಯಿಸುತ್ತಿದ್ದ ಪುಂಡನನ್ನು ಜನರು ಸರಿಯಾಗಿ ಥಳಿಸಿದ್ದಾರೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಈ ರೀತಿಯ ಪುಂಡರಿಗೆ ಇದೇ ಮಾದರಿಯಲ್ಲಿ ಪಾಠ ಕಲಿಸಬೇಕೆಂದು ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಸದ್ಯ ವೈರಲ್ ಆಗುತ್ತಿರುವ ವಿಡಿಯೋವನ್ನು @priyarajputlive ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಹರಿದಾಡುತ್ತಿರುವ ಸುದ್ದಿಯಂತೆ ಯುವತಿಯೊಬ್ಬಳನ್ನು ಚುಡಾಯಿಸಿದ ಪುಂಡನಿಗೆ ಸ್ಥಳೀಯರು ನಡು ರಸ್ತೆಯಲ್ಲಿಯೇ ಸರಿಯಾಗಿ ಜಾಡಿಸಿದ್ದಾರೆ. ಕಳೆದ ಡಿ.1 ರಂದು ಹಂಚಿಕೊಂಡ ಈ ವಿಡಿಯೋ ಕಡಿಮೆ ಸಮಯದಲ್ಲೇ ಸಾವಿರಾರು ಸಂಖ್ಯೆಯ ವೀಕ್ಷಣೆ ಕಂಡಿದೆ. ಮಹಿಳೆಯರು, ಯುವತಿಯರು, ಹುಡುಗಿಯರನ್ನು ಚುಡಾಯಿಸುವಂತಹ ಪುಂಡರಿಗೆ ಇದೇ ರೀತಿಯ ಶಿಕ್ಷೆಯಾಗಬೇಕೆಂದು ನೆಟ್ಟಿಗರು ಕಾಮೆಂಟ್ ಗಳ ಮೂಲಕ ತಮ್ಮ ಅಭಿಪ್ರಾಯ ಹೊರಹಾಕುತ್ತಿದ್ದಾರೆ.