Video – ಮಕ್ಕಳು ಮಾಡುವ ಯಾವುದೇ ಕೆಲಸ ನೋಡಿದರೂ ಚಂದ. ಆಟ, ತುಂಟಾಟ, ಅವರ ಮಾತುಗಳು ಎಲ್ಲವೂ ಮನಸ್ಸಿಗೆ ಸಂತೋಷ ನೀಡುತ್ತವೆ. ಹಾಗಾಗಿ ಚಿಕ್ಕ ಮಕ್ಕಳ ಮುಗ್ಧತೆಯನ್ನು ಸಾರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅಂತಹದ್ದೇ ಒಂದು ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಹಸಿವು ತಡೆಯಲಾಗದೆ ಶಾಲಾ ಬ್ಯಾಗ್ ಸಮೇತ ರಸ್ತೆಯಲ್ಲಿ ಕುಳಿತು ಟಿಫಿನ್ ಬಾಕ್ಸ್ ತೆರೆದು ನೂಡಲ್ಸ್ ತಿನ್ನುತ್ತಿರುವ ಪುಟ್ಟ ಬಾಲಕನ ವಿಡಿಯೋ ಇದೀಗ ವೈರಲ್ ಆಗಿದೆ.

Video – ವೈರಲ್ ಆದ ವಿಡಿಯೋದಲ್ಲಿ ಏನಿದೆ?
ಈ ಮುದ್ದಾದ ವಿಡಿಯೋವನ್ನು @MOHDIMR1994 ಎಂಬ X (ಹಿಂದಿನ ಟ್ವಿಟರ್) ಖಾತೆಯಲ್ಲಿ ಶೇರ್ ಮಾಡಲಾಗಿದೆ. ಶಾಲಾ ಸಮವಸ್ತ್ರ ಧರಿಸಿದ ಪುಟ್ಟ ಹುಡುಗನೊಬ್ಬ ಶಾಲೆಗೆ ಹೊರಟಿದ್ದಾನೆ. ಆದರೆ ದಾರಿ ಮಧ್ಯೆ ಅವನಿಗೆ ವಿಪರೀತ ಹಸಿವಾಗುತ್ತದೆ. ಹಸಿವು ಎಷ್ಟು ಹೆಚ್ಚಿದೆಯೆಂದರೆ, ಶಾಲೆಯನ್ನು ತಲುಪುವವರೆಗೂ ಕಾಯಲು ಅವನಿಂದ ಸಾಧ್ಯವಾಗುವುದಿಲ್ಲ. Read this also : ಮನೆಯೊಳಗೆ ನುಗ್ಗಿದ ದೈತ್ಯ ಹಾವು, ಮಾಪ್ ಹಿಡಿದು ಓಡಿಸಿದ ಪುಟಾಣಿ, ವಿಡಿಯೋ ವೈರಲ್…!
ಹೀಗಾಗಿ, ಅವನು ರಸ್ತೆಯ ಬದಿಯಲ್ಲಿರುವ ಚರಂಡಿಯ ಬಳಿ ಕುಳಿತು ತನ್ನ ಬ್ಯಾಗ್‌ನಿಂದ ಟಿಫಿನ್ ಬಾಕ್ಸ್‌ನ್ನು ಹೊರತೆಗೆದು ನೂಡಲ್ಸ್ ತಿನ್ನಲು ಆರಂಭಿಸುತ್ತಾನೆ. ಅವನ ಈ ಮುಗ್ಧ ಕೃತ್ಯವನ್ನು ಯಾರೋ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ, ಆ ಪುಟಾಣಿ ತನ್ನ ಪಾಡಿಗೆ ತಾನು ಊಟ ಮಾಡುವುದರಲ್ಲಿ ಮಗ್ನನಾಗಿದ್ದು, ಸುತ್ತಮುತ್ತಲಿನವರ ಮಾತನ್ನು ಲೆಕ್ಕಿಸುವುದಿಲ್ಲ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Video – ವಿಡಿಯೋಕ್ಕೆ ನೆಟ್ಟಿಗರ ಮೆಚ್ಚುಗೆ
ಕೆಲವರು ಅವನ ಹತ್ತಿರ ಬಂದು ಮಾತನಾಡುವ ಪ್ರಯತ್ನ ಮಾಡಿದರೂ ಅವನು ಏನನ್ನೂ ಮಾತನಾಡದೆ ತನ್ನ ಊಟ ಮುಗಿಸಲು ಮುಂದಾಗುತ್ತಾನೆ. ಊಟ ಮುಗಿದ ನಂತರ ಟಿಫಿನ್ ಬಾಕ್ಸ್ ಮುಚ್ಚಲು ಪ್ರಯುತ್ನಿಸುತ್ತಾನೆ. ಆಗ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಸಹಾಯ ಮಾಡುವುದನ್ನೂ ವಿಡಿಯೋದಲ್ಲಿ ಕಾಣಬಹುದು.

ಈ ವಿಡಿಯೋಗೆ ನೆಟ್ಟಿಗರು ಸಾಕಷ್ಟು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಹಸಿವು ಯಾವ ವಯಸ್ಸಿನಲ್ಲೂ ಹೇಗೆ ಇರುತ್ತದೆ ಎಂಬುದಕ್ಕೆ ಈ ವಿಡಿಯೋ ಉತ್ತಮ ಉದಾಹರಣೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಅಮ್ಮ ನೂಡಲ್ಸ್ ಮಾಡಿ ಕೊಟ್ಟಾಗ ಮಧ್ಯಾಹ್ನ ತನಕ ಕಾಯಲು ಸಾಧ್ಯವಾಗಲಿಲ್ಲ,” ಎಂದು ತಮಾಷೆ ಮಾಡಿದ್ದಾರೆ. ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದ್ದು, ಎಲ್ಲರ ಮನಸ್ಸನ್ನು ಗೆದ್ದಿದೆ.
