ಪ್ರೀತಿಗೆ ವಯಸ್ಸಿನ ಹಂಗಿಲ್ಲ ಅಂತಾರೆ, ಆದರೆ ಈ ಕಾಲದ ಹುಡುಗರಿಗೆ ಪ್ರಾಣದ ಭಯವೂ ಇಲ್ಲದಂತಾಗಿದೆ. ಪ್ರೀತಿ ಅಂದಾಕ್ಷಣ ರೋಮ್ಯಾಂಟಿಕ್ ಹಾಡುಗಳು, ಉಡುಗೊರೆಗಳು ನೆನಪಾಗುವುದು ಸಹಜ. ಆದರೆ ಉತ್ತರ ಪ್ರದೇಶದ ಪ್ರತಾಪ್ಗಢದಲ್ಲಿ ನಡೆದ ಈ ಘಟನೆ ಮಾತ್ರ ಕೇಳಿದರೆ ಮೈ ನಡುಗುತ್ತದೆ. ಪ್ರಿಯತಮೆಯನ್ನು ಮದುವೆ (Viral Video) ಮಾಡಿಕೊಡಿ ಎಂದು ಹಠ ಹಿಡಿದ ಅಪ್ರಾಪ್ತ ಬಾಲಕನೊಬ್ಬ ನೇರವಾಗಿ ಹೈ-ವೋಲ್ಟೇಜ್ ವಿದ್ಯುತ್ ಕಂಬವನ್ನೇ ಏರಿ ಸಾವಿನ ಜೊತೆ ಸರಸವಾಡಿದ್ದಾನೆ.
Viral Video – ಏನಿದು ಘಟನೆ ಮತ್ತು ಇದರ ಹಿನ್ನೆಲೆ
ಉತ್ತರ ಪ್ರದೇಶದ ಪ್ರತಾಪ್ಗಢ ಜಿಲ್ಲೆಯ ಬೌವ್ಪುರ ಗ್ರಾಮದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಕೇವಲ 15 ವರ್ಷದ ಬಾಲಕ, ಅದೇ ಗ್ರಾಮದ 13 ವರ್ಷದ ಬಾಲಕಿಯನ್ನು ಪ್ರೀತಿಸುತ್ತಿದ್ದನಂತೆ. ಇವರಿಬ್ಬರ ಪ್ರೇಮ ಪುರಾಣ ಮನೆಯವರಿಗೆ ತಿಳಿಯುತ್ತಿದ್ದಂತೆ ದೊಡ್ಡ ರಂಪಾಟವೇ ನಡೆದಿದೆ. ಮೈನರ್ ಆಗಿರುವ ಕಾರಣ ಮನೆಯವರು ಇಬ್ಬರನ್ನೂ ಮಂದಲಿಸಿ, ಹುಡುಗಿಯನ್ನು ಮನೆಯಿಂದ ಹೊರಬರದಂತೆ ದಿಗ್ಬಂಧನ ಹಾಕಿದ್ದಾರೆ. ಇದರಿಂದ ಆಕ್ರೋಶಗೊಂಡ ಬಾಲಕ, ತನ್ನ ಪ್ರಿಯತಮೆಯ ಮನೆಯ ಮುಂದೆಯೇ ಇದ್ದ ಹೈ-ವೋಲ್ಟೇಜ್ ವಿದ್ಯುತ್ ಕಂಬವನ್ನು ಏರಿ ದೊಡ್ಡ ಹಂಗಾಮಾ ಸೃಷ್ಟಿಸಿದ್ದಾನೆ. Read this also : ಪ್ರೀತಿ ನಿರಾಕರಿಸಿದ್ದಕ್ಕೆ ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ವಿದ್ಯಾರ್ಥಿ! ಉತ್ತರ ಪ್ರದೇಶದ ಭೀಕರ ಘಟನೆ..!
ಸಾವಿನ ಜೊತೆ ಆಟವಾಡಿದ ರೋಮಿಯೋ
ವಿದ್ಯುತ್ ಕಂಬದ ತುತ್ತತುದಿಗೆ ಏರಿ ಹೈ-ವೋಲ್ಟೇಜ್ ವೈರ್ಗಳನ್ನು ಹಿಡಿದುಕೊಂಡು ಈತ ಆಟವಾಡುತ್ತಿದ್ದ ದೃಶ್ಯ ನೋಡುಗರ ಎದೆ ಝಲ್ಲೆನಿಸುವಂತಿತ್ತು. “ನನಗೆ ಅವಳನ್ನೇ ಮದುವೆ ಮಾಡಿಕೊಡಬೇಕು, ಇಲ್ಲದಿದ್ದರೆ ವೈರ್ ಮುಟ್ಟಿ ಪ್ರಾಣ ಬಿಡುತ್ತೇನೆ” ಎಂದು ಕೆಳಗಿದ್ದವರಿಗೆ ಬೆದರಿಕೆ ಹಾಕುತ್ತಿದ್ದನು. ಅದೃಷ್ಟವಶಾತ್ ಆ ಸಮಯದಲ್ಲಿ ಆ ಲೈನ್ನಲ್ಲಿ (Viral Video) ವಿದ್ಯುತ್ ಪೂರೈಕೆ ಇರಲಿಲ್ಲವೋ ಅಥವಾ ತಾಂತ್ರಿಕ ಕಾರಣವೋ ಗೊತ್ತಿಲ್ಲ, ಬಾಲಕನಿಗೆ ಯಾವುದೇ ಪ್ರಾಣಾಪಾಯ ಸಂಭವಿಸದೆ ಆತ ಬದುಕುಳಿದಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಪೊಲೀಸರ ಎಂಟ್ರಿ ಮತ್ತು ಹೈ ಡ್ರಾಮಾದ ಸುಖಾಂತ್ಯ
ಗಂಟೆಗಳ ಕಾಲ ನಡೆದ ಈ ಹೈ-ಡ್ರಾಮಾದಿಂದಾಗಿ ಗ್ರಾಮಸ್ಥರೆಲ್ಲರೂ ಕಂಬದ ಕೆಳಗೆ ಜಮಾಯಿಸಿದ್ದರು. ಕೊನೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಬಾಲಕನಿಗೆ ಮದುವೆ ಮಾಡಿಸಿಕೊಡುವುದಾಗಿ ಸುಳ್ಳು ಭರವಸೆ ನೀಡಿ ಮತ್ತು ಹಿರಿಯರು ಬುದ್ಧಿ ಹೇಳಿ ಆತನನ್ನು ಕೆಳಗೆ ಇಳಿಸಿದ್ದಾರೆ. ನಂತರ ಆತನನ್ನು ಠಾಣೆಗೆ ಕರೆದೊಯ್ದು ಸರಿಯಾದ (Viral Video) ದಾರಿಗೆ ತರಲು ಪೊಲೀಸರು ಕೌನ್ಸೆಲಿಂಗ್ ನೀಡಿದ್ದಾರೆ. 13 ಮತ್ತು 15 ವರ್ಷ ಎನ್ನುವುದು ಕೇವಲ ಶಾಲೆಯಲ್ಲಿ ಕಲಿಯುವ ವಯಸ್ಸಾಗಿದ್ದರೂ, ಇಂದಿನ ಯುವಜನತೆ ಇಂತಹ ಹುಚ್ಚಾಟಗಳಿಗೆ ಮುಂದಾಗುತ್ತಿರುವುದು ಆತಂಕ ಮೂಡಿಸಿದೆ.


