ಇತ್ತೀಚಿನ ದಿನಗಳಲ್ಲಿ ಮದುವೆ ಅಂದ್ರೆ ಬರೀ ಶಾಸ್ತ್ರ, ಸಂಪ್ರದಾಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಅಲ್ಲಿ ಮಸ್ತ್ ಮಜಾ, ಡ್ಯಾನ್ಸ್, ಎಂಟರ್‌ಟೈನ್‌ಮೆಂಟ್ ಕೂಡ ಇರಲೇಬೇಕು ಎನ್ನುವಂತಾಗಿದೆ. ಅದರಲ್ಲೂ ತಮ್ಮ ಹೊಸ ಬಾಳಸಂಗಾತಿಯನ್ನು ಇಂಪ್ರೆಸ್ (Impress) ಮಾಡಲು ವಧು-ವರರು ಮಾಡುವ ಕಸರತ್ತುಗಳು ಒಂದೆರಡಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಂತಹದ್ದೇ ಒಂದು ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಹೌದು, ಮದುವೆ ಮಂಟಪದಲ್ಲಿ ವಧುವಿನ ಎದುರೇ ವರನೊಬ್ಬ ಯುವತಿಯರ ಗುಂಪಿನೊಂದಿಗೆ ಸೇರಿ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾನೆ. ಈ ದೃಶ್ಯ ನೆಟ್ಟಿಗರ ಗಮನ ಸೆಳೆದಿದ್ದು, ವಿಡಿಯೋ ವೈರಲ್ ಆಗಿದೆ.
Viral Video – ಏನಿದು ಘಟನೆ?
ವೈರಲ್ ಆಗಿರುವ ವಿಡಿಯೋದಲ್ಲಿ ವಧು ಮತ್ತು ವರ ವೇದಿಕೆಯ ಮೇಲೆ ಸುಂದರವಾಗಿ ಮುಲಂಕರಿಸಿಕೊಂಡು ಕುಳಿತಿರುತ್ತಾರೆ. ಅಷ್ಟರಲ್ಲೇ ಫುಲ್ ಸ್ವ್ಯಾಗ್ (Swag) ನಲ್ಲಿ ಎಂಟ್ರಿ ಕೊಡುವ ನಾಲ್ವರು ಯುವತಿಯರು ನೇರವಾಗಿ ವೇದಿಕೆ ಏರುತ್ತಾರೆ. ಅದರಲ್ಲಿ ಒಬ್ಬ ಯುವತಿ ವರನ ಬಳಿ ಬಂದು, “ಈ ವ್ಯಕ್ತಿ ನನಗಿಷ್ಟ” (I like him) ಎಂದು ಸನ್ನೆ ಮಾಡುತ್ತಾ, ವರನ ಕೈ ಹಿಡಿದು ವೇದಿಕೆಯಿಂದ ಕೆಳಗೆ ಕರೆದುಕೊಂಡು ಹೋಗುತ್ತಾಳೆ. ಇದನ್ನು ಕಂಡ ವಧು ಮತ್ತು ಸಂಬಂಧಿಕರು ಕ್ಷಣಕಾಲ ಗಲಿಬಿಲಿಗೊಳ್ಳುತ್ತಾರೆ.

Viral Video – ವರನ ಮಸ್ತ್ ಪರ್ಫಾಮೆನ್ಸ್!
ವೇದಿಕೆಯ ಕೆಳಗೆ ಬಂದ ತಕ್ಷಣ, ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಅವರ ಸೂಪರ್ ಹಿಟ್ ಸಿನಿಮಾ ‘ಬಾದ್ಶಾ’ದ “ವೋ ಲಡ್ಕಿ ಜೋ ಸಬ್ಸೆ ಅಲಗ್ ಹೈ” (Woh Ladki Jo Sabse Alag Hai) ಹಾಡು ಪ್ಲೇ ಆಗುತ್ತದೆ. ಕೂಡಲೇ ಆ ನಾಲ್ವರು ಯುವತಿಯರ ಜೊತೆ ಸೇರಿಕೊಳ್ಳುವ ವರ, ಫುಲ್ ಎನರ್ಜಿಯಿಂದ ಡ್ಯಾನ್ಸ್ ಮಾಡಲು ಶುರು ಮಾಡುತ್ತಾನೆ. Read this also : ಮನುಷ್ಯರಿಗೆ ಮಾತ್ರನಾ ಓಲಾ, ಉಬರ್? ಆಟೋದಲ್ಲಿ ‘ಕರು’ವಿನ ರಾಯಲ್ ಸವಾರಿ! ಬೆಂಗಳೂರಿನ ಈ ವಿಡಿಯೋ ನೋಡಿ ವಿದೇಶಿಗ ಫಿದಾ
Viral Video – ವಧುವಿನ ರಿಯಾಕ್ಷನ್ ಹೇಗಿತ್ತು?
ವರನ ಈ ಹಠಾತ್ ಪರ್ಫಾಮೆನ್ಸ್ ನೋಡಿ ಅಲ್ಲಿ ನೆರೆದಿದ್ದ ಸಂಬಂಧಿಕರು ಸ್ಟನ್ ಆಗಿ ಹೋಗುತ್ತಾರೆ. ಆರಂಭದಲ್ಲಿ ವರನ ಡ್ಯಾನ್ಸ್ ನೋಡಿ ವಧು ಕೂಡ ಆಶ್ಚರ್ಯಚಕಿತಳಾಗುತ್ತಾಳೆ. ಆದರೆ ತನ್ನ ಪತಿಯ ಉತ್ಸಾಹ ಮತ್ತು ಪ್ರೀತಿಯನ್ನು ಕಂಡು ಮರುಕ್ಷಣವೇ ಖುಷಿಯಿಂದ ಬೀಗುತ್ತಾಳೆ. ಅಷ್ಟೇ ಅಲ್ಲದೆ, ಚಪ್ಪಾಳೆ ತಟ್ಟುತ್ತಾ ವರನನ್ನು ಪ್ರೋತ್ಸಾಹಿಸಿ, ಅವನ ಡ್ಯಾನ್ಸ್‌ಗೆ ಫಿದಾ ಆಗುತ್ತಾಳೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಒಟ್ಟಿನಲ್ಲಿ ವಧುವನ್ನು ಇಂಪ್ರೆಸ್ ಮಾಡಲು ವರ ಮಾಡಿದ ಈ ಪ್ಲಾನ್ ಸಕ್ಸಸ್ ಆಗಿದೆ. ಸದ್ಯ ಈ ಕ್ಯೂಟ್ ವಿಡಿಯೋ ಇನ್ಸ್ಟಾಗ್ರಾಮ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು “ಸೂಪರ್ ಜೋಡಿ”, “ಕ್ಯೂಟ್ ಡ್ಯಾನ್ಸ್” ಎಂದು ಕಮೆಂಟ್ ಮಾಡುತ್ತಿದ್ದಾರೆ.
