Viral Video – ಸಾಮಾನ್ಯವಾಗಿ ಯಾರಾದರೂ ಹುಚ್ಚಾಟ ಮಾಡಿದರೆ ‘ಇವನು ಕೋತಿ’ ಅಂತ ಬೈತಾರೆ. ಕೋತಿಯೆಂದರೆ ಒಂದು ರೀತಿಯ ಕೆಟ್ಟ ಭಾವನೆ ಇದೆ. ಆದರೆ, ಈ ಕೋತಿಗಳು ಕೂಡ ಕೆಲವೊಮ್ಮೆ ಮನುಷ್ಯರೇ ದಂಗಾಗುವಂತೆ ವರ್ತಿಸುತ್ತವೆ. ಮನುಷ್ಯರಂತೆಯೇ ಅವುಗಳೂ ಪ್ರವರ್ತಿಸಿ ನಮ್ಮನ್ನು ಆಶ್ಚರ್ಯಗೊಳಿಸುತ್ತವೆ. ನಾವೂ ಮಂಗಗಳಿಂದಲೇ ಬಂದಿದ್ದೇವೆ ಅಂತಾರಲ್ಲ, ಅದು ಬೇರೆ ಕಥೆ ಬಿಡಿ. ಆದರೆ, ಮನುಷ್ಯರಂತೆ ವರ್ತಿಸುವ ಈ ಮಂಗಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತವೆ. ಈಗ ಅಂತದ್ದೇ ಒಂದು ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

Viral Video – ಆಸೆಯಿಂದ ಮೊಟ್ಟೆ ಸ್ವೀಕರಿಸಿದ ಕೋತಿ
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಒಂದು ಮಂಗ ಕಲ್ಲಿನ ಮೇಲೆ ಕೂತಿರುತ್ತದೆ. ಅಲ್ಲಿಗೆ ಬರುವ ಪ್ರವಾಸಿಗರು (Tourists) ಏನಾದರೂ ತಿನ್ನಲು ಕೊಡಬಹುದೇ ಅಂತ ಅದು ಕಾತರದಿಂದ ನೋಡುತ್ತಿರುತ್ತದೆ. ಆಗ ಒಬ್ಬ ಪ್ರವಾಸಿಗ ಅದರ ಬಳಿ ಬಂದು, ಒಂದು ಮೊಟ್ಟೆಯನ್ನು (Egg) ಕಲ್ಲಿಗೆ ಒಡೆದು ಅದನ್ನು ತಿನ್ನಲು ಕೋತಿಯ ಕೈಗೆ ಕೊಡುತ್ತಾನೆ. ಮೊಟ್ಟೆಯನ್ನು ನೋಡಿದ ಕೋತಿ ತುಂಬಾ ಆತುರದಿಂದ ಅದನ್ನು ಹಿಡಿದುಕೊಳ್ಳುತ್ತದೆ.
Viral Video – ಸವಾಸನೆ ನೋಡಿದಾಕ್ಷಣ ಮುಖ ಕಿವುಚಿದ ಮಂಗ!
ಮೊಟ್ಟೆಯ ಹಬ್ಬ ಮಾಡೋಣ ಅಂತ ಅದನ್ನು ತೆಗೆದುಕೊಂಡು, ಮೇಲಿರುವ ಸಿಪ್ಪೆಯನ್ನು ಬಹಳ ತಾಳ್ಮೆಯಿಂದ ಸುಲಿಯುತ್ತದೆ. ಆದರೆ, ಒಳಗಡೆ ಬಿಳಿ ಇರಬೇಕಾದ ಮೊಟ್ಟೆ ಕಪ್ಪಾಗಿ ಇರುವುದನ್ನು ನೋಡಿ ಕೋತಿಗೆ ಅನುಮಾನ ಬರುತ್ತದೆ. ತಕ್ಷಣವೇ ಅದನ್ನು ಮೂಗಿನ ಹತ್ತಿರ ಹಿಡಿದು ವಾಸನೆ ನೋಡುತ್ತದೆ. ಅಷ್ಟೇ! ಆ ವಾಸನೆ ಅದೆಷ್ಟರ ಮಟ್ಟಿಗೆ ಕೆಟ್ಟದಾಗಿತ್ತೆಂದರೆ, ಮರುಕ್ಷಣವೇ ಆ ಮೊಟ್ಟೆಯನ್ನು ದೂರ ಎಸೆದುಬಿಡುತ್ತದೆ.
ಆ ವಾಸನೆ ಅಷ್ಟು ಭಯಂಕರವಾಗಿತ್ತಂತೆ, ಮೊಟ್ಟೆಯನ್ನು ಎಸೆದ ನಂತರವೂ ಕೋತಿ ವಾಂತಿ ಬಂದಂತೆ (Vomiting) ಮುಖ ಮಾಡುತ್ತದೆ. ನಾಲಿಗೆ ಹೊರಹಾಕಿ, ‘ವಾಕ್… ವಾಕ್…’ ಎಂದು ಹೇಳಿದಂತೆ ವಿಡಿಯೋದಲ್ಲಿ ಕಾಣಿಸುತ್ತದೆ. ಆ ಕೆಟ್ಟ ವಾಸನೆಯಿಂದ ತುಂಬಾ ಹೊತ್ತು ತಾನು ಕಷ್ಟಪಟ್ಟೆ ಎಂದು ಅದರ ಮುಖಭಾವಗಳು ಹೇಳುತ್ತವೆ. Read this also : ಮನುಷ್ಯರಂತೆ ಆಚರಿಸಿದ ಮುದ್ದಿನ ಎಮ್ಮೆ ‘ಶೇರಾ’ನ ಹುಟ್ಟುಹಬ್ಬ, ಲಕ್ಷಗಟ್ಟಲೆ ಖರ್ಚು, ಡಿಜೆ ಪಾರ್ಟಿ ವೈರಲ್…!
Viral Video – ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ
ಕೋತಿಯ ಈ ತಮಾಷೆಯ ಎಕ್ಸ್‌ಪ್ರೆಷನ್‌ಗಳನ್ನು (Funny Expressions) ಯಾರೋ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದು, ಅದು ಈಗ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿ ಕಮೆಂಟ್ ಮಾಡುತ್ತಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
- ‘ಕೋತಿಯನ್ನು ಹೀಗೆ ತೊಂದರೆ ಕೊಡುವುದು ಸರಿ ಅಲ್ಲ‘ ಎಂದು ಕೆಲವರು ಹೇಳಿದರೆ,
- ‘ಕೋತಿಯ ಎಕ್ಸ್ಪ್ರೆಷನ್ಸ್ಗಳು ಸೂಪರ್ ಆಗಿವೆ‘ ಎಂದು ಇನ್ನೂ ಕೆಲವರು ನಗುತ್ತಾ ಪೋಸ್ಟ್‌ಗಳನ್ನು ಹಾಕಿದ್ದಾರೆ.
ಒಟ್ಟಿನಲ್ಲಿ, ಈ ಮುದ್ದು ಕೋತಿ ಮಾಡಿದ ಮುಖಭಾವಗಳು ಎಲ್ಲರನ್ನೂ ನಗಿಸಿವೆ. “ನನ್ನ ಮಗನೇ ನೀನು… ಇದೇನು ಕೊಳತ ಮೊಟ್ಟೆ ಕೊಟ್ಟಿದ್ದೀಯಾ… ಕಕ್ಕ ಬರುತ್ತಿದೆ!” ಎಂದು ಕೋತಿ ತನ್ನ ಭಾಷೆಯಲ್ಲಿ ಬೈದಂತಿದೆ!
