Viral Video – ಒಳಗೆ ಸೇರಿದರೇ ಗುಂಡು ಹುಡುಗಿ ಆಗುವಳು ಗಂಡು ಎಂಬ ಹಾಡನ್ನು ಕೇಳೆ ಇರುತ್ತೀರಾ, ಕುಡುಕರು ಮತ್ತಿನಲ್ಲಿ ಮಾಡುವಂತಹ ಅವಾಂತರಗಳು, ಎಡವಟ್ಟುಗಳ ಪಟ್ಟಿ ದೊಡ್ಡದಾಗಿಯೇ ಇರುತ್ತದೆ. ಕುಡಿದ ಅಮಲಿನಲ್ಲಿ ರಸ್ತೆಯಲ್ಲಿ ಗಲಾಟೆ ಮಾಡುವುದು, ರಂಪಾಟ ಮಾಡುವುದನ್ನು ನೋಡಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಕುಡಿದ ರಷ್ಯಾ ಮೂಲದ ಯುವತಿಯೊಬ್ಬಳು ಕಾರು ಚಾಲಕನ ತೊಡೆಯ ಮೇಲೆ ಕುಳಿತಿದ್ದಾಳೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

ಅಂದಹಾಗೆ ಈ ಘಟನೆ ಛತ್ತೀಸ್ ಗಢದ ರಾಯ್ ಪುರದ ಜನನಿಬಿಡ ರಸ್ತೆಯಲ್ಲಿ ನಡೆದಿದೆ ಎನ್ನಲಾಗಿದೆ. ರಾಯ್ ಪುರದ ವಿಐಪಿ ರಸ್ತೆಯಲ್ಲಿ ಕಳೆದ ಬುಧವಾರ ರಾತ್ರಿ ವೇಗವಾಗಿ ಚಲಿಸುತ್ತಿದ್ದ ಕಾರು ಸ್ಕೂಟರ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಕೆಲ ಸಮಯ ಗೊಂದಲದ ವಾತಾವರಣ ಉಂಟಾಗಿದೆ. ಇನ್ನೂ ರಷ್ಯನ್ ಯುವತಿಯೂ ಅವರೊಂದಿಗೆ ವಾಗ್ವಾದಕ್ಕೆ ಇಳಿದು ಜೋರು ಗಲಾಟೆ ಮಾಡಿದ್ದಾಳೆ. ಆಕೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ, ಆದರೆ ಠಾಣೆಗೆ ಹೋಗಲು ಆಕೆ ನಿರಾಕರಿಸಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯರ ಸಮ್ಮುಖದಲ್ಲಿ ಯುವತಿಯೂ ಅಳುತ್ತಿರುವುದು ಹಾಗೂ ಕಿರುಚುತ್ತಿರುವುದನ್ನು ಕಾಣಬಹುದು. ನನ್ನ ಪೋನ್ ಕಾಣೆಯಾಗಿದೆ ಎಂದು ಕಿರಾಚಾಡುತ್ತಿದ್ದಾಳೆ. ಇದೇ ಸಮಯದಲ್ಲಿ ಪೊಲೀಸರು ಆಕೆಯನ್ನು ಠಾಣೆಗೆ ಕರೆದುಕೊಂಡು ಹೋಗಲು ಯತ್ನಿಸುತ್ತಿದ್ದಾಗ ರಷ್ಯನ್ ಯುವತಿ ಹಿಂದೇಟು ಹಾಕುವುದನ್ನು, ಅದಕ್ಕೆ ಪ್ರತಿಯಾಗಿ ಪೊಲೀಸರು ಆಕೆಯ ಬಳಿ ಕೇಳಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.

ಇನ್ನೂ ಪ್ರತ್ಯಕ್ಷ ದರ್ಶಿಗಳು ಹೇಳುವ ಪ್ರಕಾರ ಯುವಕ ಹಾಗೂ ರಷ್ಯನ್ ಯುವತಿ ಇಬ್ಬರೂ ಕುಡಿದ ಅಮಲಿನಲ್ಲಿದ್ದರು. ರಷ್ಯನ್ ಯುವತಿಯ ಚಾಲಕನ ತೊಡೆಯ ಮೇಲೆ ಕುಳಿತಿದ್ದಳು. ಈ ಕಾರಣದಿಂದ ವಾಹನವನ್ನು ನಿಯಂತ್ರಣ ಮಾಡಲು ಚಾಲಕ ವಿಫಲನಾಗಿದ್ದಾನೆ. ಗಾಯಗೊಂಡ ಮೂವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಯ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಈ ರಷ್ಯನ್ ಯುವತಿ ಪ್ರವಾಸಿ ವಿಸಾದಲ್ಲಿ ಭಾರತಕ್ಕೆ ಬಂದಿದ್ದಳು. ಇದೀಗ ಚಾಲಕ ಹಾಗೂ ರಷ್ಯನ್ ಯುವತಿ ಇಬ್ಬರನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ. ಹೆಚ್ಚಿನ ತನಿಖೆಗಾಗಿ ಇಬ್ಬರನ್ನು ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಪೊಲೀಸರು ಮನವಿ ಮಾಡಿದ್ದಾರೆ ಎನ್ನಲಾಗಿದೆ.