ಪತಿಯ ಅಕ್ರಮ ಸಂಬಂಧದ ಅನುಮಾನ ಒಮ್ಮೆ ಮನಸ್ಸಿಗೆ ಹೊಕ್ಕರೆ ಸಾಕು, ಅದು ಯಾವ ಹಂತಕ್ಕೆ ಬೇಕಾದರೂ ತಲುಪಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಶಾಂತವಾಗಿದ್ದ ರಸ್ತೆಯಲ್ಲಿ ದಿಢೀರನೆ ಕಿರುಚಾಟ, ಕಾರಿನ ಗಾಜು ಒಡೆಯುವ ಶಬ್ದ, ಆಮೇಲೆ ಶುರುವಾಗಿದ್ದೇ (Viral Video) ಅಸಲಿ ಸಿನಿಮೀಯ ಶೈಲಿಯ ಜಗಳ. ತನ್ನ ಪತಿ ತನ್ನನ್ನು ವಂಚಿಸುತ್ತಿದ್ದಾನೆ ಎಂಬ ಆಕ್ರೋಶದಿಂದ ರೊಚ್ಚಿಗೆದ್ದ ಮಹಿಳೆಯೊಬ್ಬಳು, ಸಾರ್ವಜನಿಕರ ಮುಂದೆಯೇ ಪತಿಯ ಕಾಲರ್ ಹಿಡಿದು ಸರಿಯಾಗಿ ‘ಪಾಠ’ ಕಲಿಸಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

Viral Video – ನಡುರಸ್ತೆಯಲ್ಲೇ ನಡೆದ ಹೈಡ್ರಾಮಾ
ಉತ್ತರ ಪ್ರದೇಶದ ಸೀತಾಪುರದಲ್ಲಿ ಈ ಘಟನೆ ನಡೆದಿದ್ದು, ವೃತ್ತಿಯಲ್ಲಿ ಶಿಕ್ಷಕನಾಗಿರುವ ಪತಿ ಶಾಲೆಯಿಂದ ವಾಪಸ್ ಆಗುತ್ತಿದ್ದಾಗ ಈ ದಾಳಿ ನಡೆದಿದೆ. ಬುರ್ಖಾ ಧರಿಸಿದ್ದ ಮಹಿಳೆಯೊಬ್ಬಳು ದಿಢೀರ್ ಕಾರನ್ನು ತಡೆದು ಪತಿಯ ಮೇಲೆ ಕಪಾಳಮೋಕ್ಷ ಮಾಡಲು ಶುರುಮಾಡಿದಳು. ಈ ದೃಶ್ಯ ಕಂಡು ಸ್ಥಳೀಯರು ಒಂದು ಕ್ಷಣ ದಂಗಾಗಿ ಹೋದರು. ಜನನಿಬಿಡ ರಸ್ತೆಯಲ್ಲೇ ಈ ಜಗಳ ನಡೆದಿದ್ದರಿಂದ ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿದ್ದು, ಸದ್ಯ ಇದು ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. Read this also : ಮಂಗಳೂರು ಮನ್ಮಥನ ‘ಮಾಯಾಲೋಕ’: ಹೆಂಡತಿಯ ಹಣದಲ್ಲೇ ವಿದೇಶಕ್ಕೆ ಹಾರಿ ಪರಸ್ತ್ರೀ ಜೊತೆ ಲವ್ವಿಡವ್ವಿ!
ಏನಿದು ಘಟನೆ ಮತ್ತು ಅಸಲಿ ಕಾರಣವೇನು?
ನಮ್ಮ ಸಮಾಜದಲ್ಲಿ ಸಂಶಯ ಎಂಬುದು ಸಂಸಾರವನ್ನೇ ಸುಡುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯು ಸೀತಾಪುರದ ದಾತುನಿ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ. ಫೆಬ್ರವರಿ 17ರ ಮಂಗಳವಾರದಂದು ಆತ ಶಾಲೆ ಮುಗಿಸಿ ಕಾರಿನಲ್ಲಿ ಮನೆಗೆ ವಾಪಸ್ ಬರುತ್ತಿದ್ದಾಗ (Viral Video) ಸುಮ್ಲಿ ಶಾಲೆಯ ಬಳಿ ಈ ಘಟನೆ ಸಂಭವಿಸಿದೆ. ಬುರ್ಖಾ ಧರಿಸಿದ್ದ ಪತ್ನಿ ಕಾರಿನ ಕಿಟಕಿಗಳನ್ನು ಒಡೆದು ಪತಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾಳೆ. ಆರಂಭದಲ್ಲಿ ಆಕೆ ಯಾರು ಎಂಬುದು ಯಾರಿಗೂ ತಿಳಿಯಲಿಲ್ಲ, ಆದರೆ ಬುರ್ಖಾ ತೆಗೆದ ನಂತರವಷ್ಟೇ ಆಕೆ ಶಿಕ್ಷಕನ ಪತ್ನಿ ಎಂಬುದು ಜನರಿಗೆ ಗೊತ್ತಾಗಿದೆ.
ಜಗಳದಲ್ಲಿ ಕುಟುಂಬ ಸದಸ್ಯರ ಎಂಟ್ರಿ
ಈ ಜಗಳ ಕೇವಲ ಪತಿ-ಪತ್ನಿಯ ನಡುವೆ ಸೀಮಿತವಾಗಲಿಲ್ಲ. (Viral Video) ಘಟನಾ ಸ್ಥಳದಲ್ಲಿ ಶಿಕ್ಷಕನ ತಾಯಿ ಮತ್ತು ಮಗಳು ಕೂಡ ಇದ್ದರು ಎನ್ನಲಾಗಿದ್ದು, ಇವರ ಮಧ್ಯಪ್ರವೇಶದಿಂದ ಪರಿಸ್ಥಿತಿ ಮತ್ತಷ್ಟು ಗೊಂದಲಮಯವಾಯಿತು. ಪತಿಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿದೆ ಎಂಬ ಬಲವಾದ ಸಂಶಯವೇ ಪತ್ನಿಯ ಈ ಆಕ್ರೋಶಕ್ಕೆ ಮೂಲ ಕಾರಣ ಎನ್ನಲಾಗಿದೆ. ಜಗಳ ಬಿಡಿಸಲು ಬಂದ ಸ್ಥಳೀಯರು ಕೂಡ ಇವರ ರೌದ್ರಾವತಾರ ಕಂಡು ಹಿಂದೆ ಸರಿಯುವಂತಾಯಿತು.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಪ್ರಕರಣದ ಬಗ್ಗೆ ಪೊಲೀಸ್ ತನಿಖೆ
ಸ್ಥಳೀಯರು ಮಾಹಿತಿ (Viral Video) ನೀಡಿದ ತಕ್ಷಣ ಅಜಯ್ ನಗರ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸದ್ಯಕ್ಕೆ ಪೊಲೀಸರು ಇದನ್ನು ಕೌಟುಂಬಿಕ ಕಲಹ ಎಂದು ಪರಿಗಣಿಸಿದ್ದು, ತನಿಖೆಯನ್ನು ಆರಂಭಿಸಿದ್ದಾರೆ. ಇಷ್ಟೆಲ್ಲಾ ರಾದ್ಧಾಂತ ನಡೆದರೂ ಎರಡೂ ಕಡೆಯಿಂದ ಈವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ. ಆದರೂ ವೈರಲ್ ಆಗಿರುವ ವಿಡಿಯೊ ಆಧಾರದ ಮೇಲೆ ಪೊಲೀಸರು ಘಟನೆಯ ಸಂಪೂರ್ಣ ವಿವರಗಳನ್ನು ಕಲೆಹಾಕುತ್ತಿದ್ದಾರೆ.
