Viral News – ಸತ್ಯ ಎನ್ನುವುದು ಬೂದಿ ಮುಚ್ಚಿದ ಕೆಂಡದಂತೆ. ಗಾಳಿಗೆ ಬೂದಿ ಸರಿದಾಗ ಕೆಂಡ ಹೇಗೆ ಹೊರಬರುತ್ತದೋ, ಅದೇ ರೀತಿ ಸುಳ್ಳಿನ ಪರದೆ ಸರಿದಾಗ ಒಂದು ದಿನ ಸತ್ಯವೂ ಹೊರಬರುತ್ತದೆ ಎಂಬ ಮಾತು ಈಗ ಮತ್ತೊಮ್ಮೆ ಸಾಬೀತಾಗಿದೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಉಸ್ಮಾನಪುರದಲ್ಲಿ ನಡೆದ ಘಟನೆ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಸರ್ಕಾರಿ ಉದ್ಯೋಗದ ಆಸೆಗಾಗಿ ಹೆಂಡತಿಯೇ ತನ್ನ ಗಂಡನನ್ನು ಕೊಲೆ ಮಾಡಿದ್ದು, ಬಳಿಕ ಅದನ್ನು ಸಹಜ ಸಾವೆಂದು ಬಿಂಬಿಸಿದ್ದಾಳೆ. ಆದರೆ ಪೊಲೀಸ್ ತನಿಖೆಯಲ್ಲಿ ಈ ಘಟನೆಯ ರಹಸ್ಯ ಬಯಲಾಗಿದೆ.
Viral – ಘಟನೆಯ ಹಿನ್ನೆಲೆ
ಉಸ್ಮಾನಪುರದ ನಿವಾಸಿ ಖಲೀಲ್ ಹುಸೇನ್ (44) ಕಣಗಲ್ ಮಂಡಲದ ಚಾರ್ಲಗೌರರಂ ಸರ್ಕಾರಿ ಪ್ರೌಢಶಾಲೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಮಾನಸಿಕ ಸಮಸ್ಯೆಗಳಿದ್ದು, ಕುಡಿತದ ಚಟವೂ ಇತ್ತು. ಇದರಿಂದಾಗಿ ಅವರ ಪತ್ನಿ ಅಕ್ಸರ್ ಜಹಾನ್ ಮತ್ತು ಮೂವರು ಮಕ್ಕಳು ನಿರಂತರ ಕಿರುಕುಳ ಅನುಭವಿಸುತ್ತಿದ್ದರು. ಕಳೆದ ತಿಂಗಳು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅಕ್ಸರ್ ತನ್ನ ಗಂಡನನ್ನು ಕುನಾನ್ ಸ್ಟ್ಯಾಂಡ್‌ನಿಂದ ತೀವ್ರವಾಗಿ ಹೊಡೆದಿದ್ದರು. ಗಂಡನು ಕುಸಿದು ಬಿದ್ದ ನಂತರ, ಅವನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಖಲೀಲ್ ಮೃತಪಟ್ಟರು.

Viral – ಸಹಜ ಸಾವೋ ಅಥವಾ ಕೊಲೆಯೋ?
ಇನ್ನೂ ಖಲೀಲ್ ನ ಸಾವನ್ನು ಸಹಜ ಸಾವೆಂದು ಪರಿಗಣಿಸಲಾಗಿತ್ತು. ಆದರೆ, ಅವರ ತಾಯಿ ಮೊಹಮ್ಮದ್ ಬೇಗಂ ಅವರು ತಮ್ಮ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಂತರ, ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ತಿಂಗಳ 7ನೇ ತಾರೀಕಿನಂದು ಬಂದ ಮರಣೋತ್ತರ ವರದಿಯಲ್ಲಿ, ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಸಾವು ಸಂಭವಿಸಿದೆ ಎಂಬ ಅಂಶ ಬೆಳಕಿಗೆ ಬಂದಿತು. ಇದರ ನಂತರ ಪೊಲೀಸರು ಖಲೀಲ್ ನ ಪತ್ನಿ ಅಕ್ಸರ್ ಜಹಾನ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು.
Viral – ವಿಚಾರಣೆಯ ವೇಳೆ ಬಾಯ್ಬಿಟ್ಟ ಪತ್ನಿ
ವಿಚಾರಣೆಯ ಸಮಯದಲ್ಲಿ, ಅಕ್ಸರ್ ಜಹಾನ್ ತಮ್ಮ ಗಂಡನ ಕುಡಿತದ ಚಟ ಮತ್ತು ಕಿರುಕುಳದಿಂದ ಬೇಸತ್ತಿದ್ದರು ಎಂದು ಹೇಳಿದ್ದಾರೆ ಎನ್ನಲಾಗಿದೆ. ನನ್ನ ಗಂಡ ಕುಡಿತಕ್ಕೆ ದಾಸನಾಗಿದ್ದು, ನನಗೆ ಮತ್ತು ನಮ್ಮ ಮೂವರು ಮಕ್ಕಳಿಗೆ ನಿರಂತರ ಕಿರುಕುಳ ನೀಡುತ್ತಿದ್ದ. ಅವನನ್ನು ಕೊಂದರೆ, ಅವನ ಕಾಟ ತಪ್ಪುತ್ತದೆ ಮತ್ತು ಅವನ ಸರ್ಕಾರಿ ಉದ್ಯೋಗ ನನಗೆ ಅಥವಾ ಮಕ್ಕಳಿಗೆ ಸಿಗುತ್ತದೆ ಎಂದು ಭಾವಿಸಿದೆ. ಇದರಿಂದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ನಂಬಿದ್ದೆ,. ಆದ್ದರಿಂದ ಗಂಡನನ್ನು ಹೊಡೆದು ಸಾಯಿಸಿದೆ ಎಂದು ಸತ್ಯ ಬಾಯಿಬಿಟ್ಟಿದ್ದಾಳೆ. ಸದ್ಯ ಈ ಘಟನೆ ಸ್ತಳೀಯರನ್ನು ಬೆಚ್ಚಿ ಬೀಳಿಸಿದೆ.