Viral Reel – ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗೋಕೆ ನಾನಾ ರೀತಿಯ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಈ ರೀಲ್ಸ್ ಗಳ ಪೈಕಿ ಕೆಲವೊಂದು ನೋಡಲು ಯೋಗ್ಯಕರವಾಗಿದ್ದರೇ, ಮತ್ತೆ ಕೆಲವು ವಿಡಿಯೋಗಳು ನೋಡುಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತದೆ. ಅದೇ ರೀತಿಯ ಇಲ್ಲೊಬ್ಬ ಮಹಿಳೆ ಮಾಡಿದ ವಿಡಿಯೋ ಒಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ತನ್ನ ಸ್ವಂತ ಮಗನೊಂದಿಗೆ ಬಾತ್ ರೂಂ ನಲ್ಲಿ ಅಶ್ಲೀಲವಾಗಿ (Viral Reel) ನೃತ್ಯ ಮಾಡಿ ರೀಲ್ಸ್ ಮಾಡಿದ್ದು, ನೆಟ್ಟಿಗರ ಆಕ್ರೋಷಕ್ಕೆ ಕಾರಣವಾಗಿದೆ.
ಸದ್ಯ ಸೋಷಿಯಲ್ ಮಿಡಿಯಾವನ್ನು ಬಳಸಿಕೊಂಡು ಲಕ್ಷಾಂತರ ದುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಈ ರೀತಿಯ ಹಣ ಸಂಪಾದನೆ ಮಾಡಬೇಕಾದರೇ ತಮ್ಮ ಸೋಷಿಯಲ್ ಮಿಡಿಯಾ ಖಾತೆಗಳಲ್ಲಿ ಹೆಚ್ಚು ಫಾಲೋವರ್ಸ್‌ಗಳಿರಬೇಕು ಜೊತೆಗೆ ತಾವು ಹಂಚಿಕೊಳ್ಳುವ ವಿಡಿಯೋಗಳು ಹೆಚ್ಚು ಜನರು ವೀಕ್ಷಣೆ ಮಾಡಬೇಕು. ಆಗ ಹಣ ಸಂಪಾದನೆ ಮಾಡಬಹುದಾಗಿದೆ. ಆದರೆ ಅನೇಕರು ಜನರಿಗೆ ಉಪಯುಕ್ತವಾಗುವಂತಹ ಹಾಗೂ ಮನರಂಜನೆ ನೀಡುವಂತಹ ವಿಡಿಯೋಗಳನ್ನು ಮಾಡುವ ಮೂಲಕ ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಆದರೆ ಕೆಲವರು ಮಾತ್ರ ಅಸಭ್ಯಕರವಾದ, ಜನರಿಗೆ ಕಿರಿಕಿರಿಯಾಗುವಂತಹ ವಿಡಿಯೋಗಳನ್ನು ಮಾಡಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗುತ್ತಾರೆ.
ಸೋಷಿಯಲ್ ಮಿಡಿಯಾದಲ್ಲಿ ಸಕ್ರೀಯರಾಗಿರುವ ಆರೋಹಿ ಪಾಠಕ್ ಎಂಬ ಮಹಿಳೆ ಇನ್ಸ್ಟಾಗ್ರಾಂನಲ್ಲಿ ತುಂಬಾನೆ ಆಕ್ಟೀವ್ ಆಗಿದ್ದು, ನಿರಂತರವಾಗಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಕೆ ಹಂಚಿಕೊಳ್ಳುವಂತಹ ವಿಡಿಯೋಗಳು ಮಿಲಿಯನ್ ಗಟ್ಟಲೇ ವೀಕ್ಷಣೆ ಕಾಣುತ್ತಿರುತ್ತವೆ. ಅದೇ ರೀತಿ ಆಕೆ ತನ್ನ ಮಗನೊಂದಿಗೆ ವಿಡಿಯೋ ಒಂದನ್ನು ಮಾಡಿದ್ದಾರೆ. ತನ್ನ ಮಗನೊಂದಿಗೆ ಅಶ್ಲೀಲವಾಗಿ ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋಗೆ ಆಕ್ರೋಷ ವ್ಯಕ್ತವಾಗುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಆರೋಹಿ ಪಾಠಕ್ ಎಂಬ ಮಹಿಳೆ ತನ್ನ pathakaarohiofficial ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನ.18 ರಂದು ಒಂದು ವಿಡಿಯೋ ಹಂಚಿಕೊಂಡಿರುತ್ತಾರೆ. ಈ ವಿಡಿಯೋದಲ್ಲಿ ಆಕೆ ತನ್ನ ಮಗನೊಂದಿಗೆ ಅಶ್ಲೀಲವಾಗಿ ನೃತ್ಯ ಮಾಡುತ್ತಾಳೆ. ಬಾತ್ ರೂಂನಲ್ಲಿ ಈ ನೃತ್ಯ ಮಾಡಿದ್ದು, ಅನೇಕರು ಆಕೆಯ ಈ ವರ್ತನೆಯ ವಿರುದ್ದ ಆಕ್ರೋಷ ಹೊರಹಾಕುತ್ತಿದ್ದಾರೆ. ಇನ್ನೂ ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಲಕ್ಷಾಂತರ ವೀಕ್ಷಣೆ ಕಂಡಿದೆ. ಜೊತೆಗೆ ಆಕೆಯ ಈ ವರ್ತನೆಗೆ ತೀವ್ರ ಆಕ್ರೋಷ ವ್ಯಕ್ತವಾಗುತ್ತಿದೆ.