ಇಂದಿನ AI ಯುಗದಲ್ಲೂ ಸಹ ಅನೇಕ ದೇಶಗಳಲ್ಲಿ ವಿಚಿತ್ರ, ಅಮಾನುಷ, ಮನುಕುಲ ತಲೆತಗ್ಗಿಸುವಂತಹ ಪದ್ದತಿಗಳು ನಡೆದುಕೊಂಡು ಬರುತ್ತಿವೆ. ಕೆಲವೊಂದು ಪ್ರದೇಶದಲ್ಲಿ ಅಣ್ಣ ತಂಗಿಯನ್ನು, ಅಪ್ಪ ಮಗಳನ್ನು ಮದುವೆಯಾಗುವಂತಹ ವಿಚಿತ್ರ ಪದ್ದತಿಗಳು ಜಾರಿಯಲ್ಲಿದೆ. ಇಂತಹ ಪದ್ದತಿಗಳಿಗೆ ಮತ್ತೊಂದು ಉದಾಹರಣೆ ಎಂಬಂತೆ ದೇಶವೊಂದರಲ್ಲಿ ಪ್ರವಾಸಿಗರೊಂದಿಗೆ ಮದುವೆಯಾಗುವ ವಿಲಕ್ಷಣ ಟ್ರೆಂಡ್ (Viral News) ಒಂದು ಹುಟ್ಟಿಕೊಂಡಿದೆ. ಅಷ್ಟಕ್ಕೂ ಈ ಪದ್ದತಿ ಎಲ್ಲಿ ನಡೆಯುತ್ತಿದೆ ಎಂಬ ವಿಚಾರಕ್ಕೆ ಬಂದರೇ,

ಇಂಡೋನೇಷಿಯಾದ ಕೆಲವೊಂದು ಭಾಗಗಳಲ್ಲಿ ತಾತ್ಕಾಲಿಕ ಮದುವೆಗಳು ಇತ್ತೀಚಿಗೆ ಟ್ರೆಂಡ್ ಆಗುತ್ತಿದೆಯಂತೆ. ಹಣಕ್ಕಾಗಿ ಪ್ರವಾಸಿಗರೊಂದಿಗೆ ತಾತ್ಕಲಿಕವಾಗಿ ಮದುವೆಯಾಗುವಂತಹ ಉದ್ಯಮ ಇಂಡೋನೇಷಿಯಾದ ಪನ್ಕಾಕ್ ಎಂಬ ಪ್ರದೇಶದಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಈ ತಾತ್ಕಾಲಿಕ ಮದುವೆಗಳಿಗೆ ಸಂತೋಷದ ಮದುವೆಗಳು ಎಂದು ಕರೆಯಲಾಗುತ್ತದೆಯಂತೆ. ಈ ಕುರಿತು ಸೌತ್ ಚೀನಾ ಮಾರ್ನಿಂಗ್ ಎಂಬ ಸುದ್ದಿ ಸಂಸ್ಥೆ ವರದಿ ಮಾಡಿದೆ ಎನ್ನಲಾಗಿದೆ. ಈ ವರದಿಯ ಪ್ರಕಾರ ಈ ದೇಶದಲ್ಲಿ ಅತ್ಯಂತ ಕಡು ಬಡತನವಿರುವ ಕಾರಣದಿಂದ ಯುವತಿಯರು ತಾತ್ಕಾಲಿಕ ಮದುವೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಇನ್ನೂ ಇಂಡೋನೇಷಿಯಾ ಸುಂದರವಾದ ಹಾಗೂ ಆಕರ್ಷಣೀಯವಾದ ಪ್ರವಾಸಿ ತಾಣವಾಗಿದೆ. ಈ ದೇಶಕ್ಕೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇಂಡೋನೇಷಿಯಾದ ಪುಂಕಾಕ್ ಎಂಬ ಹಳ್ಳಿಯಲ್ಲಿ ಈ ರೀತಿಯ ಪದ್ದತಿಯಿದೆ. ಇಲ್ಲಿನ ಬಡ ಯುವತಿಯರು ಪ್ರವಾಸಿಗರನ್ನು ಹಣಕ್ಕಾಗಿ ವಾರದ ಮಟ್ಟಿಗೆ ಮದುವೆಯಾಗುತ್ತಾರಂತೆ. ಸ್ಥಳೀಯ ಹೆಣ್ಣು ಮಕ್ಕಳು ಹಣ ಸಂಪಾದನೆಗಾಗಿ ತಾತ್ಕಾಲಿಕ ಮದುವೆ ಮಾಡುವಂತಹ ಏಜೆನ್ಸಿಗಳನ್ನು ಸಹ ಆರಂಭಿಸಿದ್ದಾರಂತೆ.

ಈ ಭಾಗಕ್ಕೆ ಬರುವಂತಹ ಪ್ರವಾಸಿಗರು ಹಾಗೂ ಯುವತಿ ಇಬ್ಬರೂ ಒಪ್ಪಿಕೊಂಡರೇ ಮದುವೆ ಮಾಡುತ್ತಾರಂತೆ. ಈ ಮದುವೆಯಾಗಬೇಕಾದರೇ ಪ್ರವಾಸಿಗರು ಲಕ್ಷಗಟ್ಟಲೇ ವಧುದಕ್ಷಿಣೆ ಕೊಡಬೇಕಂತೆ. ಪ್ರವಾಸಿಗರು ತಮ್ಮ ಪ್ರವಾಸ ಮುಗಿಸಿ ವಾಪಸ್ ಹೋಗುವಾಗ ಈ ಮದುವೆ ಸಹ ರದ್ದಾಗುತ್ತದೆ. ನಂತರ ಆ ಯುವತಿ ಮತ್ತೆ ಬೇರೊಬ್ಬ ಪ್ರವಾಸಿಗನ ಜೊತೆಗೆ ಮದುವೆಯಾಗುತ್ತಾಳೆ ಎನ್ನಲಾಗಿದೆ.