Viral – ಮಕ್ಕಳ ತುಂಟತನ ಒಂದೊಂದು ಸಾರಿ ಹೇಗೆ ಕೆಲಸ ಮಾಡುತ್ತದೆ ಎಂದರೆ ಅದರಿಂದ ಪೊಲೀಸರೇ ಮನೆಗೆ ಬರುವ ಪರಿಸ್ಥಿತಿ ಬಂದಿದೆ. ಈ ಪುಟ್ಟ ಬಾಲಕಿ ತನ್ನ ತಾಯಿ ಹಬ್ಬದ ದಿನ ಬೈದಿದ್ದಾರೆಂದು ನೇರವಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ಅಮ್ಮನನ್ನು ‘ಕೆಟ್ಟವಳು’ ಎಂದು ಕರೆದು, “ಬೇಗ ಬನ್ನಿ, ಅವಳು ಮನೆಯಲ್ಲೇ ಇದ್ದಾಳೆ” ಎಂದು ಹೇಳಿ ಪೊಲೀಸರಿಗೆ ಕರೆ ಮಾಡಿದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Viral – ಮಕ್ಕಳಿಗೆ ಸಹಾಯವಾಣಿಯ ಪಾಠ, ಮಗಳಿಗೆ ವರದಾನ!
ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ತಮ್ಮ ರೆಡ್ಡಿಟ್ ಖಾತೆಯಲ್ಲಿ ಈ ಘಟನೆಯನ್ನು ಹಂಚಿಕೊಂಡಿದ್ದಾರೆ. ಅವರಿಗೆ ಇಬ್ಬರು ಅವಳಿ ಹೆಣ್ಣು ಮಕ್ಕಳಿದ್ದು, ಅವರಲ್ಲಿ ಒಬ್ಬಳು ತುಂಬಾನೇ ಶಾಂತ ಸ್ವಭಾವದವಳು, ಇನ್ನೊಬ್ಬಳು ತುಂಬಾ ತುಂಟ ಹಾಗೂ ಚುರುಕು ಸ್ವಭಾವದವಳು.
ರಕ್ಷಾ ಬಂಧನದ ದಿನ ಮನೆಯಲ್ಲಿ ಹಬ್ಬದ ಸಿದ್ಧತೆಗಳು ಭರದಿಂದ ಸಾಗಿದ್ದವು. ಈ ಗಡಿಬಿಡಿಯ ನಡುವೆ ತಾಯಿ ಯಾವುದೋ ಕೆಲಸದಲ್ಲಿ ನಿರತರಾಗಿದ್ದಾಗ, ಮಗಳು ಏನೋ ಕೇಳಿದ್ದಾಳೆ. ಕೆಲಸದ ಒತ್ತಡದಲ್ಲಿ ತಾಯಿ ಸ್ವಲ್ಪ ಕೋಪದಿಂದ ಗದರಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಗು ತಂದೆಯ ಬಳಿ ಹೋಗಿ, “ಅಪ್ಪಾ, ಅಮ್ಮ ನನಗೆ ಬೈದ್ರು, ನಿನ್ನ ಫೋನ್ ಕೊಡು” ಎಂದು ಕೇಳಿದೆ. ತಂದೆ ಕೂಡ ಫೋನ್ ಕೊಟ್ಟಿದ್ದಾರೆ. ಆ ಮಗು ಕೂಡಲೇ ಇನ್ನೊಂದು ಕೋಣೆಗೆ ಹೋಗಿ ತಂದೆ ಮಕ್ಕಳಿಗೆ ಏನಾದರೂ ಸಮಸ್ಯೆ ಆದರೆ ಕರೆ ಮಾಡಬೇಕೆಂದು ಹೇಳಿಕೊಟ್ಟಿದ್ದ ಚೈಲ್ಡ್ ಹೆಲ್ಪ್‌ಲೈನ್ ನಂಬರ್‌ಗೆ ಕರೆ ಮಾಡಿದೆ.
Viral – ‘ಅಮ್ಮ ನನಗೆ ಬೈದಿದ್ದಾರೆ, ನೀವು ಬೇಗ ಬನ್ನಿ’
ಕರೆ ಮಾಡಿದ ಮಗು ಪೊಲೀಸರೊಂದಿಗೆ ನೇರವಾಗಿ ಮಾತನಾಡಿದೆ. “ನನ್ನ ಅಮ್ಮ ಕೆಟ್ಟವಳು, ನನಗೆ ಬೈಯುತ್ತಾಳೆ” ಎಂದು ಹೇಳಿದೆ. ಪೊಲೀಸರು ಯಾಕೆ ಎಂದು ಕೇಳಿದಾಗ, “ನನಗೆ ಹೊಸದಾಗಿ ತಂದಿದ್ದ ಬಟ್ಟೆ ಇಷ್ಟವಾಗಲಿಲ್ಲ, ನಾನು ಅದನ್ನು ಹಾಕಲ್ಲ ಎಂದು ಹೇಳಿದ್ದಕ್ಕೆ ಬೈದರು. ಅಮ್ಮ ಈಗ ಮನೆಯಲ್ಲೇ ಇದ್ದಾಳೆ, ನೀವು ಬೇಗ ಬನ್ನಿ” ಎಂದು ನಿರ್ದೇಶನಗಳನ್ನೂ ಕೊಟ್ಟಿದೆ. Read this also : 70ರ ಅಜ್ಜಿಯ ಎದೆಗಾರಿಕೆ: ಬರಿಗೈಯಲ್ಲಿ ಹಾವು ಹಿಡಿದು ಅಚ್ಚರಿ ಮೂಡಿಸಿದ ಪುಣೆಯ ಅಜ್ಜಿ…!
ಈ ಪುಟ್ಟ ಕುವರಿ ತಾನೇ ಕರೆ ಮಾಡಿ, ಪೊಲೀಸರು ಮನೆಗೆ ಬರುತ್ತಿದ್ದಾರೆ ಎಂದು ಹೇಳಿದಾಗ ಮನೆಯವರು ನಕ್ಕಿದ್ದಾರಂತೆ. ಈ ಪೋಸ್ಟ್ ವೈರಲ್ ಆದ ನಂತರ ಅನೇಕರು ಆಕೆಯ ಧೈರ್ಯ, ಚುರುಕುತನ ಮತ್ತು ಬುದ್ಧಿವಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಬ್ಬದ ದಿನ ನಡೆದ ಈ ತಮಾಷೆಯ ಘಟನೆ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.