ಮದುವೆ ಎಂದರೆ ಕೇವಲ ಎರಡು ದೇಹಗಳ ಮಿಲನವಲ್ಲ, ಅದು ಎರಡು ಮನಸ್ಸುಗಳ ಬೆಸುಗೆ. “ಏಳೇಳು ಜನ್ಮಕ್ಕೂ ನೀನೇ ನನ್ನ ಸಂಗಾತಿ” ಎಂದು ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಿ, ಸಪ್ತಪದಿ ತುಳಿದು ಬಂದ ಪತ್ನಿಯೇ, ಪರಪುರುಷನ ಮೋಹಕ್ಕೆ ಬಿದ್ದು ಹೋಟೆಲ್ ರೂಮ್ ಸೇರಿಕೊಂಡರೆ ಆ ಪತಿಯ ಮನಸ್ಥಿತಿ ಹೇಗಿರಬೇಡ ಹೇಳಿ? ಅಂಥದ್ದೇ ಒಂದು ಘಟನೆ ಪಂಜಾಬ್‌ನ ಅಮೃತಸರದಲ್ಲಿ ನಡೆದಿದ್ದು, ನೋಡುಗರ ಕರುಳು ಹಿಂಡುವಂತಿದೆ.

Viral – 15 ವರ್ಷದ ಸಂಸಾರ, ಕಣ್ಣೀರು ಹಾಕಿದ ಪತಿ
ರವಿ ಮತ್ತು ಹಿಮಾನಿ ದಂಪತಿಗಳು 2010ರ ಏಪ್ರಿಲ್ 25ರಂದು ವಿವಾಹವಾಗಿದ್ದರು. ಸುಂದರವಾದ ಸಂಸಾರ, ಮುದ್ದಾದ ಮಕ್ಕಳು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಪತ್ನಿ ಹಿಮಾನಿ, ತನ್ನ ಪ್ರಿಯಕರನೊಂದಿಗೆ ಹೋಟೆಲ್ ಒಂದರಲ್ಲಿ ಇರುವಾಗ ಪತಿ ರವಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. 15 ವರ್ಷಗಳ ದಾಂಪತ್ಯದಲ್ಲಿ ಪತ್ನಿಯ ಈ ವರ್ತನೆ ಕಂಡು ರವಿ ಹೋಟೆಲ್ ಹೊರಗೆ ಬಂದು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ದೃಶ್ಯ ಎಂಥವರ ಮನಸ್ಸನ್ನೂ ಕಲಕುವಂತಿದೆ.
Viral – ಸಿಕ್ಕಿ ಹಾಕಿಸಿದ್ದು ಆ ಒಂದು ‘GPS’ ಟ್ರ್ಯಾಕರ್!
ಅಂದು ಮಧ್ಯಾಹ್ನ ಸುಮಾರು 3.30ರ ಸಮಯ. ಪತ್ನಿ ಹಿಮಾನಿ ಮನೆಯಿಂದ ಹೊರಗೆ ಹೋಗಿದ್ದರು. ರವಿ ಎಷ್ಟೇ ಬಾರಿ ಫೋನ್ ಮಾಡಿದರೂ ಆಕೆ ಕರೆಯನ್ನು ಸ್ವೀಕರಿಸಿರಲಿಲ್ಲ. ಇದರಿಂದ ರವಿಯವರಿಗೆ ಅನುಮಾನ ಮೂಡಿದೆ. ತಕ್ಷಣವೇ ಚುರುಕಾದ ರವಿ, ಪತ್ನಿಯ ಸ್ಕೂಟರ್‌ಗೆ ರಹಸ್ಯವಾಗಿ ಅಳವಡಿಸಿದ್ದ ಜಿಪಿಎಸ್ (GPS) ಟ್ರ್ಯಾಕರ್ ಆನ್ ಮಾಡಿದ್ದಾರೆ.
ಲೊಕೇಶನ್ ನೋಡಿದಾಗ ಅದು ಹೋಟೆಲ್ ಒಂದನ್ನು ತೋರಿಸಿದೆ. ಕೂಡಲೇ ಅಲ್ಲಿಗೆ ಧಾವಿಸಿದ ರವಿ, ಹೋಟೆಲ್ ರೂಮ್‌ನಲ್ಲಿ ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ಇರುವುದನ್ನು ಕಣ್ಣಾರೆ ಕಂಡಿದ್ದಾರೆ. ಬದುಕು ಕಟ್ಟಿಕೊಳ್ಳಬೇಕಾದವಳು ಹೀಗೆ ದಾರಿ ತಪ್ಪಿದ್ದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. Read this also : ಮದುವೆಗೆ 2 ಗಂಟೆ ಮುಂಚೆ ಮಾಜಿ ಪ್ರೇಮಿಯನ್ನು ಭೇಟಿಯಾದ ವಧು! ವೈರಲ್ ವಿಡಿಯೋ ನೋಡಿ ನೆಟ್ಟಿಗರು ಗರಂ
Viral – ಹಳೇ ಚಾಳಿ ಬಿಡದ ಪತ್ನಿ: 2018ರಲ್ಲೇ ನಡೆದಿತ್ತು ರಾದ್ಧಾಂತ
ಇದು ಮೊದಲ ಬಾರಿಯೇನಲ್ಲ. ರವಿ ಅವರ ಪ್ರಕಾರ, 2018ರಲ್ಲೂ ಹಿಮಾನಿ ಇದೇ ರೀತಿ ಬೇರೊಬ್ಬ ವ್ಯಕ್ತಿಯೊಂದಿಗೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಿದ್ದರು. ಅಂದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಾಗೂ ಆಕೆಯ ಪೋಷಕರು ಕ್ಷಮೆ ಕೇಳಿದ ಕಾರಣ, ರವಿ ದೊಡ್ಡ ಮನಸ್ಸು ಮಾಡಿ ಆಕೆಯನ್ನು ಕ್ಷಮಿಸಿದ್ದರು. “ಮನುಷ್ಯ ತಪ್ಪು ಮಾಡೋದು ಸಹಜ, ತಿದ್ದಿಕೊಂಡು ಬಾಳೋಣ” ಎಂದು ಮತ್ತೊಂದು ಅವಕಾಶ ನೀಡಿದ್ದರು. ಆದರೆ ಹಳೇ ಚಾಳಿ ಬಿಡದ ಪತ್ನಿ ಮತ್ತೆ ಅದೇ ತಪ್ಪು ಮಾಡಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Viral – ಇನ್ನು ಸಹಿಸಲು ಸಾಧ್ಯವಿಲ್ಲ ಎಂದ ಪತಿ
“ನಾನು ಮಕ್ಕಳಿಗೋಸ್ಕರ ಎಲ್ಲವನ್ನೂ ಸಹಿಸಿಕೊಂಡೆ, ಆದರೆ ನಂಬಿಕೆ ಇಲ್ದ ಮೇಲೆ ಸಂಸಾರ ಮಾಡಲು ಸಾಧ್ಯವಿಲ್ಲ,” ಎಂದು ರವಿ ಕಣ್ಣೀರು ಹಾಕುತ್ತಾ ಹೇಳಿದ್ದಾರೆ. 7 ವರ್ಷಗಳ ಹಿಂದೆ ಹಿರಿಯರ ಸಮಕ್ಷಮದಲ್ಲಿ ನಡೆದ ರಾಜಿ ಸಂಧಾನ ಈಗ ವಿಫಲವಾಗಿದೆ. ಪತ್ನಿಯ ವರ್ತನೆಯಿಂದ ರೋಸಿ ಹೋಗಿರುವ ರವಿ, ಇನ್ನು ಮುಂದೆ ಆಕೆಯೊಂದಿಗೆ ಬಾಳಲು ಸಾಧ್ಯವೇ ಇಲ್ಲ ಎಂಬ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ.
