Viral – ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ ಮೈದುನನ ಮೇಲೆ ಆತನ ಅತ್ತಿಗೆ (ಅಣ್ಣನ ಹೆಂಡತಿ) ಭೀಕರ ಹಲ್ಲೆ ನಡೆಸಿದ ಅಘಾತಕಾರಿ ಘಟನೆಯು ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಬರ್ಹಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ತನ್ನ ಸಹೋದರಿಯನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಮಹಿಳೆ, ಮೈದುನನ ಖಾಸಗಿ ಅಂಗಕ್ಕೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾಳೆ.

Viral – ಗಾಯಾಳು ಯುವಕನಿಗೆ ದೆಹಲಿ ಏಮ್ಸ್‌ನಲ್ಲಿ ಚಿಕಿತ್ಸೆ
ಗಾಯಗೊಂಡ ಯುವಕನನ್ನು ಯೋಗೇಶ್ (24) ಎಂದು ಗುರುತಿಸಲಾಗಿದೆ. ಹಲ್ಲೆಯಿಂದಾಗಿ ಯೋಗೇಶ್‌ಗೆ ತೀವ್ರ ರಕ್ತಸ್ರಾವವಾಗಿತ್ತು. ತಕ್ಷಣ ಅವರನ್ನು ಆಗ್ರಾದ ಎಸ್‌ಎನ್ ಮೆಡಿಕಲ್ ಕಾಲೇಜಿಗೆ ಸಾಗಿಸಲಾಯಿತು. ಆದರೆ, ಗಾಯದ ತೀವ್ರತೆ ಹೆಚ್ಚಿದ್ದ ಕಾರಣ, ಹೆಚ್ಚು ಉತ್ತಮ ಚಿಕಿತ್ಸೆಗಾಗಿ ಯೋಗೇಶ್‌ರನ್ನು ದೆಹಲಿಯ ಏಮ್ಸ್ (AIIMS) ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Viral – ಘಟನೆ ಹಿನ್ನೆಲೆ
ಇಂಜಿನಿಯರ್ ಆಗಿರುವ ಯೋಗೇಶ್ ಹಲ್ದ್ವಾನಿಯ ಅಲ್ಟ್ರಾಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ದೀಪಾವಳಿ ರಜೆಗಾಗಿ ಮನೆಗೆ ಬಂದಿದ್ದರು. ಈ ವೇಳೆ, ಆತನ ಅತ್ತಿಗೆ ಅರ್ಚನಾ, ತನ್ನ ತಂಗಿಯನ್ನು ಮದುವೆಯಾಗುವಂತೆ ಯೋಗೇಶ್‌ಗೆ ಒತ್ತಾಯಿಸಿದ್ದಳು. ಆದರೆ, ಯೋಗೇಶ್ ಆ ಪ್ರಸ್ತಾಪವನ್ನು ಒಪ್ಪದೆ, ತನ್ನ ಮದುವೆ ಈಗಾಗಲೇ ಬೇರೊಬ್ಬರೊಂದಿಗೆ ನಿಶ್ಚಯವಾಗಿದೆ ಮತ್ತು ನವೆಂಬರ್‌ನಲ್ಲಿ ವಿವಾಹ ನಡೆಯಲಿದೆ ಎಂದು ತಿಳಿಸಿದ್ದ. ಯೋಗೇಶ್‌ನ ಈ ಮಾತು ಅರ್ಚನಾಗೆ ತೀವ್ರ ಕೋಪ ತರಿಸಿತ್ತು.
Viral – ದೀಪಾವಳಿ ನಂತರದ ದಾಳಿ
ಕೋಪಗೊಂಡ ಅರ್ಚನಾ, ದೀಪಾವಳಿ ಹಬ್ಬ ಮುಗಿದ ನಂತರ ಒಂದು ದಿನ ಯೋಗೇಶ್‌ರನ್ನು ತನ್ನ ಕೋಣೆಗೆ ಕರೆಸಿಕೊಂಡಳು. ಯೋಗೇಶ್ ಕೋಣೆಗೆ ಬಂದ ಕೂಡಲೇ, ಆಕೆ ಚಾಕುವಿನಿಂದ ಆತನ ಖಾಸಗಿ ಅಂಗದ ಮೇಲೆ ದಾಳಿ ನಡೆಸಿದ್ದಾಳೆ. ಯೋಗೇಶ್‌ನ ಚೀರಾಟ ಕೇಳಿ ಕುಟುಂಬ ಸದಸ್ಯರು ಓಡಿ ಬಂದಾಗ, ಯುವಕ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ದೃಶ್ಯ ಕಂಡಿದೆ. ತಕ್ಷಣ ಅವರು ಯೋಗೇಶ್‌ರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. Read this also : ಡೆಲ್ಲಿ ಯೂನಿವರ್ಸಿಟಿಯಲ್ಲಿ ಶಾಕಿಂಗ್ ಘಟನೆ: ಪ್ರೊಫೆಸರ್‌ಗೆ ವಿದ್ಯಾರ್ಥಿನಿಯಿಂದ ಕಪಾಳಮೋಕ್ಷ! ವಿಡಿಯೋ ವೈರಲ್

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Viral – ಪೋಲೀಸ್ ಮೊಕದ್ದಮೆ ದಾಖಲು ಮತ್ತು ತನಿಖೆ
ಘಟನೆ ನಡೆದ ನಂತರ ಅರ್ಚನಾಳ ಪತಿ ಆಕೆಯನ್ನು ಆಕೆಯ ತವರು ಮನೆಗೆ ಕಳುಹಿಸಿದ್ದಾರೆ. ಯೋಗೇಶ್ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ, ಬರ್ಹಾನ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಘಟನೆಯ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಅಕ್ಟೋಬರ್ 16 ರಂದು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
