Saturday, August 30, 2025
HomeStateViral : ಹುಬ್ಬಳಿಯ ವಿಚಿತ್ರ ಲವ್ ಸ್ಟೋರಿ,18ರ ಯುವತಿಯ ಜೊತೆ ಪರಾರಿಯಾಗಿದ್ದ 50 ವರ್ಷದ ಅಂಕಲ್,...

Viral : ಹುಬ್ಬಳಿಯ ವಿಚಿತ್ರ ಲವ್ ಸ್ಟೋರಿ,18ರ ಯುವತಿಯ ಜೊತೆ ಪರಾರಿಯಾಗಿದ್ದ 50 ವರ್ಷದ ಅಂಕಲ್, ನಡೆದೇ ಹೋಯ್ತು ಇಬ್ಬರ ಮದುವೆ…!

Viral –  ಕೆಲವು ದಿನಗಳ ಹಿಂದೆಯಷ್ಟೆ ಹುಬ್ಬಳಿಯಲ್ಲಿ ವಿಚಿತ್ರ ಲವ್ ಸ್ಟೋರಿಯೊಂದು ಬೆಳಕಿಗೆ ಬಂದಿತ್ತು. 18 ವರ್ಷದ ಯುವತಿ ಹಾಗೂ 50 ವರ್ಷದ ಅಂಕಲ್ ಪರಾರಿಯಾಗಿದ್ದರು. ತಮ್ಮ ಹದಿಹರೆಯದ ಮಗಳನ್ನು ಹುಡುಕಿಕೊಡುವಂತೆ ಯುವತಿಯ ಪೋಷಕರು ಕಣ್ಣಿರಾಕಿದ್ದರು. ಆದರೆ ಇದೀಗ ಅಂಕಲ್ ಜೊತೆ ಈ ಯುವತಿ ಮದುವೆಯಾಗಿದ್ದಾಳೆ. ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕರೀಷ್ಮಾ ಹಾಗೂ ಪ್ರಕಾಶ್ ಮದುವೆಯಾಗಿದ್ದು, ಈ ಪೊಟೋವನ್ನು ಅಂಕಲ್ ಪ್ರಕಾಶ್ ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಾರೆ. ಈ ಪೊಟೋ ನೋಡಿತ್ತಿದ್ದಂತೆ ಶಾಕ್ ಆದ ಪೋಷಕರು ತಮ್ಮ ಮಗಳ ತಲೆಕೆಡಿಸಿ ಮದುವೆಯಾಗಿದ್ದಾನೆ ಆರೋಪ ಮಾಡಿದ್ದಾರೆ ಎಂದು ತಿಳಿದುಬಂದಿದೆ.

"Missing 18-year-old girl from Hubballi with 50-year-old man"

Viral – 18 ರ ಯುವತಿಯನ್ನು ಮದುವೆಯಾದ 50ರ ಅಂಕಲ್

ಹುಬ್ಬಳಿ ಮೂಲದ ಪ್ರಕಾಶ್ ಎಂಬ 50 ವರ್ಷದ ವ್ಯಕ್ತಿ ತನ್ನ ಮಗಳ ವಯಸ್ಸಿನ ಅಂದರೇ 18 ವರ್ಷ ವಯಸ್ಸಿನ ಕರೀಷ್ಮಾ ಎಂಬಾಕೆಯೊಂದಿಗೆ ಪರಾರಿಯಾಗಿದ್ದ. ಅಜ್ಜಿ ಮನೆಗೆ ಹೋಗಿದ್ದ ಕರೀಷ್ಮಾ ನಾಪತ್ತೆಯಾಗಿದ್ದಳು. ನಾಪತ್ತೆಯಾದ ಮಗಳನ್ನು ಹುಡುಕಿಕೊಡುವಂತೆ ಪಾಲಕರು ಕಣ್ಣೀರು ಹಾಕಿದ್ದರು. ಅಲ್ಲದೇ ಮಗಳ ಫೋಟೋ ಹಿಡಿದು ರಸ್ತೆ ರಸ್ತೆಗಳಲ್ಲಿ ಅಲೆದಾಡಿ ಹುಡುಕಿಕೊಡಿ ಎಂದು ಪೊಲೀಸರು, ಮಾಧ್ಯಮಗಳು ಸೇರಿದಂತೆ ಕಂಡ ಕಂಡವರ ಮುಂದೆ ಮನವಿ ಮಾಡುತ್ತಿದ್ದರು. ಈ ಮುದಿಯನಿಗೆ ಈಗಾಗಲೇ ಎರಡು ಮದುವೆಯಾಗಿತ್ತು. ಇಬ್ಬರೂ ಮಕ್ಕಳು ಸಹ ಇದ್ದರು. ಆದರೂ ಕರೀಷ್ಮಾಳ ಮನಸ್ಸು ಕೆಡಿಸಿ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ ಎಂಬುದು ಪೋಷಕರು ಆರೋಪವಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಪರಾರಿಯಾಗಿದ್ದ ಅವರಿಬ್ಬರೂ ಇದೀಗ ದೇವಾಲಯವೊಂದರಲ್ಲಿ ಮದುವೆಯಾಗಿದ್ದು, ಈ ಪೊಟೋವನ್ನು ಪ್ರಕಾಶ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಾನೆ.

Viral – ವಿಚಿತ್ರ ಪ್ರೇಮ್ ಕಹಾನಿ ಶುರುವಾಗಿದ್ದು ಹೀಗೆ

50ರ ಅಂಕಲ್ ಪ್ರಕಾಶ್ ಹಾಗೂ 18 ವರ್ಷದ ಕರೀಷ್ಮಾ ಮೊದಲಿನಿಂದಲೂ ಪ್ರೀತಿ-ಪ್ರೇಮ ಅಂತಾ ಇದ್ದರು. ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿರುವಂತಹ ಪ್ರಕಾಶ್ 2 ವರ್ಷಗಳ ಹಿಂದೆಯೇ ಕರೀಷ್ಮಾಳನ್ನು ಪ್ರೀತಿಸುತ್ತಿದ್ದ, ಆದರೆ ಆಗ ಕರೀಷ್ಮಾ ಅಪ್ರಾಪ್ತೆಯಾಗಿದ್ದಳು. ಇದು ತಿಳಿಯುತ್ತಿದ್ದಂತೆ ಯುವತಿಯ ಪೋಷಕರು ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ನಂತರ ಯುವತಿ ಹುಬ್ಬಳಿಯಲ್ಲಿಯೇ ಇದ್ದರೇ ಸಮಸ್ಯೆಯಾಗುತ್ತಿದೆ ಎಂದು ಹುಡುಗಿಯನ್ನು ಮನೆಯವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವಂತಹ ಅಜ್ಜಿಯ ಮನೆಯಲ್ಲಿ ಬಿಟ್ಟಿದ್ದರು. ಅಂದಿನಿಂದ ಆಕೆ ಅಲ್ಲಿಯೇ ವಾಸವಿದ್ದರು.

"Missing 18-year-old girl from Hubballi with 50-year-old man"

ಇದನ್ನೂ ಓದಿ:18 ವರ್ಷ ಹುಡುಗಿ ಜೊತೆಗೆ 50 ವರ್ಷದ ಅಂಕಲ್ ಲವ್ವಿ ಡವ್ವಿ, ಅಂಕಲ್ ಜೊತೆ ಪರಾರಿಯಾದ ಮಗಳಿಗಾಗಿ ಪೋಷಕರ ಕಣ್ಣೀರು…!

ಆದರೂ ಕಳೆದ ಜ.3 ರಂದು ಯುವತಿ ಅಜ್ಜಿ ಮನೆಯಿಂದ ನಾಪತ್ತೆಯಾಗಿದ್ದಳು. ನಂತರ ಯುವತಿ ಎಲ್ಲಿದ್ದಾಳೆ ಎಂಬ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ನಾಪತ್ತೆಯಾದ ಮಗಳನ್ನು ಹುಡುಕಿಕೊಡುವಂತೆ ಪಾಲಕರು ಕಣ್ಣೀರು ಹಾಕಿದ್ದರು. ಅಲ್ಲದೇ ಮಗಳ ಫೋಟೋ ಹಿಡಿದು ರಸ್ತೆ ರಸ್ತೆಗಳಲ್ಲಿ ಅಲೆದಾಡಿ ಹುಡುಕಿಕೊಡಿ ಎಂದು ಪೊಲೀಸರು, ಮಾಧ್ಯಮಗಳು ಸೇರಿದಂತೆ ಕಂಡ ಕಂಡವರ ಮುಂದೆ ಮನವಿ ಮಾಡುತ್ತಿದ್ದರು. ಆರೋಪಿ ಪ್ರಕಾಶ್ ತಮ್ಮ ಮಗಳನ್ನು ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಯುವತಿಯ ಪೋಷಕರು ಆರೋಪಿಸಿದ್ದರು. ಸದ್ಯ ಯುವತಿಗೆ 18 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರಕಾಶ್ ಮದುವೆ ಮಾಡಿಕೊಂಡಿದ್ದಾನೆ. ತಮ್ಮ ಮಗಳ ತಲೆಕೆಡಿಸಿ ಪ್ರಕಾಶ್ ಮದುವೆಯಾಗಿದ್ದಾನೆ ಎಂದು ಪೋಷಕರು ಆಕ್ರೋಷ ಹೊರಹಾಕಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular