Tuesday, July 15, 2025
HomeStateBengaluru: ಪತಿಗೆ ಪರಸ್ತ್ರೀಯ ಮೇಲೆ ವ್ಯಾಮೋಹ, ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತ್ನಿ…!

Bengaluru: ಪತಿಗೆ ಪರಸ್ತ್ರೀಯ ಮೇಲೆ ವ್ಯಾಮೋಹ, ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತ್ನಿ…!

Bengaluru – ಅನೈತಿಕ ಸಂಬಂಧಗಳ ಕಾರಣದಿಂದ ಅನೇಕ ಕುಟುಂಬಗಳು ಬೀದಿಪಾಲಾಗುತ್ತವೆ, ಇದರಿಂದಾಗಿ ಅನೇಕ ಸಂಸಾರಗಳು ನಾಶವಾಗುತ್ತವೆ. ಬೆಂಗಳೂರಿನ (Bengaluru) ರಾಮಯ್ಯ ಲೇಔಟ್ ನಲ್ಲಿ ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತ್ನಿಯೊಬ್ಬರು ತನ್ನ ಮಗಳನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದಾಳೆ. ಮೃತ ದುರ್ದೈವಿಯನ್ನು ಶೃತಿ (33) ಎಂದು ಗುರ್ತಿಸಲಾಗಿದೆ.

Bengaluru woman commits suicide after killing daughter due to husband's affair

ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತ್ನಿ 5 ವರ್ಷದ ಮಗಳನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಬಾಗಲಕುಂಟೆ ಎಂಬಲ್ಲಿ ನಡೆದಿದೆ. ಮೃತ ಶೃತಿ (33) ಪಾವಘಡದ ಗುಂಡಾರನಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷೆಯಾಗಿದ್ದರು. ತನ್ನ ಮಗಳಾದ ರೋಶಿಣಿಯನ್ನು (5) ಫ್ಯಾನ್‌ ಗೆ ನೇಣು ಹಾಕಿ ಬಳಿಕ ಅದೇ ಫ್ಯಾನಿಗೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಗೋಪಾಲಕೃಷ್ಣನ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಶೃತಿ ಡೆತ್ ನೋಟ್ ಬರೆದಿದ್ದಾರೆ. ಮೃತಳ ಪುತ್ರ ಆಟವಾಡಲು ಹೊರಗೆ ಹೋಗಿದ್ದ, (Bengaluru) ಬಳಿಕ ಮಗ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

Bengaluru woman commits suicide after killing daughter due to husband's affair

ಇನ್ನೂ ಕಳೆದ 10 ವರ್ಷಗಳ ಹಿಂದೆ ಶ್ರುತಿ ಚಾರ್ಟರ್ಡ್ ಅಕೌಂಟೆಂಟ್ ಗೋಪಾಲಕೃಷ್ಣ ಎಂಬುವವರೊಂದಿಗೆ ಮದುವೆ ನಡೆದಿತ್ತು. ಈ ದಂಪತಿಗೆ ಒಂದು ಗಂಡು ಹಾಗೂ ಹೆಣ್ಣು ಮಗು ಇತ್ತು. ತನ್ನ ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಶ್ರುತಿ ತನ್ನ ಮಗಳಾದ ರೋಹಿಣಿಯನ್ನು ಕೊಂದು ಬಳಿಕ ತಾನೂ ನೇಣಿಗೆ ಶರಣಾಗಿದ್ದಾರೆ. ಇನ್ನೂ ಗಂಡು ಮಗ ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದ ಹಿನ್ನೆಲಯಲ್ಲಿ ಈ ಪುಟ್ಟ ಕಂದ ಬಚಾವ್ ಆಗಿದೆ ಎನ್ನಲಾಗಿದೆ. ಇನ್ನೂ ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ದಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತಳ  ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇನ್ನೂ ತಾಯಿ ಹಾಗೂ ಮಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular