Varamahalakshmi Festival – ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಅಂಚೆ ಕಚೇರಿ ಆವರಣದಲ್ಲಿ ಪರಿಸರ ವೇದಿಕೆ ವತಿಯಿಂದ ಹಾಗೂ ಮಹಿಳೆಯರಿಂದ ಗಿಡ ನೆಟ್ಟು ಅರ್ಥಪೂರ್ಣವಾಗಿ (Varamahalakshmi Festival) ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಲಾಯಿತು. ಗುಡಿಬಂಡೆಯಲ್ಲಿ ಪ್ರತಿ ವಿಶೇಷ ದಿನಗಳಂದು ಈ ರೀತಿಯ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಯ ಕುರಿತು ಅರಿವು ಮೂಡಿಸಲಾಗುತ್ತದೆ
ಈ ಕಾರ್ಯಕ್ರಮದಲ್ಲಿ (Varamahalakshmi Festival) ಮುಖ್ಯ ಅತಿಥಿಯಾಗಿ ಆಗಮಿಸಿದ ತಾಲೂಕು ವೈದ್ಯಾಧಿಕಾರಿಗಳಾದ ಹಾಗೂ ಖ್ಯಾತ ಪರಿಸರವಾದಿಗಳಾದ ಡಾಕ್ಟರ್ ನರಸಿಂಹಮೂರ್ತಿ ರವರು ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಮಾತನಾಡಿ, ನಾಡಿನೆ ಲ್ಲಡೆ ವರಮಹಾಲಕ್ಷ್ಮಿ ಹಬ್ಬ ಸಂಭ್ರಮ ಮನೆ ಮಾಡಿದೆ. (Varamahalakshmi Festival) ವರಮಹಾಲಕ್ಷ್ಮಿ ಹಬ್ಬವನ್ನು ಶ್ರಾವಣ ಶುಕ್ರವಾರದ ಶುಕ್ಲ ಪಕ್ಷದಲ್ಲಿ ಆಚರಿಸಲಾಗುತ್ತದೆ. ಈ ವ್ರತವನ್ನು ಅಥವಾ ಹಬ್ಬವನ್ನು ಆಚರಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿಯ ದೇವತೆ ಭಕ್ತರಿಗೆ ಅದೃಷ್ಟವನ್ನು ಅನುಗ್ರಹಿಸುತ್ತಾಳೆ ಅನ್ನೋ ನಂಬಿಕೆ ಇದೆ. (Varamahalakshmi Festival) ಭಕ್ತರು ಈ ದಿನದಂದು ಪೂಜೆಯನ್ನು ಮಾಡಿದರೆ ಅಷ್ಟಲಕ್ಷ್ಮಿಯರು ಸಂಪತ್ತು, ಭೂಮಿ, ಕಲಿಕೆ, ಪ್ರೀತಿ, ಕೀರ್ತಿ, ಶಾಂತಿ, ಆನಂದ ಮತ್ತು ಶಕ್ತಿಯ ಎಂಟು ದೇವತೆಗಳ ಆಶೀರ್ವಾದವನ್ನು ಪಡೆಯುತ್ತಾರೆ ಎಂದು ನಂಬುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ (Varamahalakshmi Festival) ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಡಾ. ಗುಂಪು ಮರದ ಆನಂದ್ ಮಾತನಾಡಿ, ನಾಡಿನಲ್ಲಿ ಈಗಾಗಲೇ ವರಮಹಾಲಕ್ಷ್ಮಿ ಹಬ್ಬದ ಕಳೆಗಟ್ಟಿದೆ. (Varamahalakshmi Festival) ವರಮಹಾಲಕ್ಷ್ಮಿ ಹಬ್ಬದಂದು ಲಕ್ಷ್ಮಿಗೆ ಅಲಂಕಾರ ಮಾಡಿ ಮನೆಗೆ ಐಶ್ವರ್ಯ, ಸಂಪತ್ತು, ನೀಡು ತಾಯಿಯೇ ಎಂದು ಪ್ರಾರ್ಥಿಸಲಾಗುವುದು ಶ್ರಾವಣ ಮಾಸದ ಶುಕ್ರವಾರದಂದು (Varamahalakshmi Festival) ಲಕ್ಷ್ಮಿ ವ್ರತವನ್ನು ಮಾಡುವುದರಿಂದ ಪೂಜಿಸಿದ ಫಲ ಸಿಗಲಿದೆ. ಜೊತೆಗೆ ಪ್ರತಿಯೊಬ್ಬರು ವಿಶೇಷ ದಿನಗಳಂದು ಸಸಿಗಳನ್ನು ನೆಡುವ ಕಾಯಕ ರೂಡಿಸಿಕೊಳ್ಳಬೇಕು. ಆ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ (Varamahalakshmi Festival) ಗುಡಿಬಂಡೆ ತಾಲೂಕು ಪರಿಸರ ವೇದಿಕೆ ಅಧ್ಯಕ್ಷ ಬಿ ಮಂಜುನಾಥ್, ಮಾಜಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ರಾಜಣ್ಣ, ಅಂಚೆ ಇಲಾಖೆಯ ಪವನ್ ಕುಮಾರ್, ಅಮೂಲ್ಯ, ಸುಬ್ರಮಣ್ಯಂ, ಶಿಕ್ಷಕರಾದ ಮಹಾಲಕ್ಷ್ಮಿ, ಪರಿಸರವಾದಿಗಳಾದ ಮಧು, ಶಿವ, ಇಂದ್ರಕುಮಾರ್ ಸಿಂಗ್ ಸೇರಿದಂತೆ ಹಲವರು ಇದ್ದರು.