ಪಾನಿಪುರಿ (Pani Puri) ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಅದ್ರಲ್ಲೂ ಹೆಣ್ಣುಮಕ್ಕಳು ಪಾನಿಪುರಿಗಾಗಿ ಎಷ್ಟೇ ದೂರ ಬೇಕಾದರೂ ಹೋಗ್ತಾರೆ. ಅಂತಹುದರಲ್ಲಿ, ತಮ್ಮ ಆರ್ಡರ್‌ನಲ್ಲಿ ಕೇವಲ ಎರಡು ಪಾನಿಪುರಿ ಕಮ್ಮಿಯಾದ್ದಕ್ಕೆ ಯುವತಿಯೊಬ್ಬಳು ರಸ್ತೆಯಲ್ಲೇ ಕುಳಿತು, ಟ್ರಾಫಿಕ್ ಜಾಮ್ ಮಾಡಿ ಆಕ್ರೋಶ ಹೊರಹಾಕಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Pani Puri – ಪಾನಿಪುರಿಗಾಗಿ ಪಟ್ಟು ಹಿಡಿದ ವಡೋದರಾ ಯುವತಿ
ಘಟನೆ ನಡೆದಿರೋದು ಗುಜರಾತ್‌ನ ವಡೋದರಾದಲ್ಲಿ. ಯುವತಿಯೊಬ್ಬಳು ಸುರಸಾಗರ್ ಪ್ರದೇಶದ ಪಾನಿಪುರಿ ಅಂಗಡಿಯೊಂದಕ್ಕೆ ಹೋಗಿ 20 ರೂಪಾಯಿಗಳಿಗೆ ಪಾನಿಪುರಿ ಕೇಳಿದ್ದಾಳೆ. ಆಗ ಅಂಗಡಿ ಮಾಲೀಕ ಕೇವಲ 4 ಪಾನಿಪುರಿ ಕೊಟ್ಟಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಆದ್ರೆ, 20 ರೂಪಾಯಿಗೆ 6 ಪಾನಿಪುರಿ ಸಿಗಬೇಕು ಅನ್ನೋದು ಆ ಯುವತಿಯ ವಾದ.
Pani Puri – ಪಾನಿಪುರಿಗಾಗಿ ಟ್ರಾಫಿಕ್ ತಡೆದ ಯುವತಿ
“ನನಗೆ ನನ್ನ ಪಾನಿಪುರಿ ಬೇಕೇಬೇಕು” ಎಂದು ಹಠ ಹಿಡಿದ ಯುವತಿ, ಪಾನಿಪುರಿ ಅಂಗಡಿಯ ಎದುರೇ ರಸ್ತೆಯಲ್ಲಿ ಕುಳಿತು ಪ್ರತಿಭಟನೆಗೆ ಮುಂದಾಗಿದ್ದಾಳೆ. ಇದರಿಂದಾಗಿ ಆ ರಸ್ತೆಯಲ್ಲಿ ಟ್ರಾಫಿಕ್ ಸಂಪೂರ್ಣವಾಗಿ ಜಾಮ್ ಆಗಿಬಿಟ್ಟಿದೆ. ಟ್ರಾಫಿಕ್ ಜಾಮ್ ನೋಡಿ ಸ್ಥಳಕ್ಕೆ ಬಂದ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಆದರೆ, ಯುವತಿ ಪೊಲೀಸರ ಮೇಲೂ ಹರಿಹಾಯ್ದಿದ್ದಾಳೆ. ಕೊನೆಗೆ ಪೊಲೀಸರು ಅವಳನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ. ಆದರೆ, ಆಕೆಗೆ ಉಳಿದ 2 ಪಾನಿಪುರಿ ಸಿಕ್ಕಿದೆಯೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. Read this also : ಆಸ್ಪತ್ರೆಯ ಟಾಯ್ಲೆಟ್ ಕಮೋಡ್ ಮೇಲೆ ಬುಸ್ ಬುಸ್ ಎಂದ ಬ್ಲ್ಯಾಕ್ ಕೋಬ್ರಾ, ವೈರಲ್ ಆದ ವಿಡಿಯೋ…!
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Pani Puri – ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ
ಯುವತಿ ಪ್ರತಿಭಟನೆ ಮಾಡ್ತಿರೋ ವಿಡಿಯೋವನ್ನು ಸ್ಥಳದಲ್ಲಿದ್ದ ಜನರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಿಂದಾಗಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ತಮಾಷೆಯ ಕಮೆಂಟ್‌ಗಳ ಮಹಾಪೂರವೇ ಹರಿದುಬಂದಿದೆ. “ಒಂದು ಪಾನಿಪುರಿಗೂ ಲೆಕ್ಕ ಇದೆ” ಎಂಬ ತಲೆಬರಹದೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ. ಈ ಘಟನೆ ವೈರಲ್ ಆಗುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ “ಪಾನಿಪುರಿ ಫೈಟ್” ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.

