...
Tuesday, February 10, 2026
HomeNationalವೈದ್ಯೆಗೆ ಕಿರುಕುಳ, ಅಧಿಕಾರಿಯನ್ನು ಬಂಧಿಸಲು ಆಸ್ಪತ್ರೆಯ ವಾರ್ಡ್ ಗೆ ಜೀಪ್ ಸಮೇತ ನುಗ್ಗಿದ ಪೊಲೀಸರು…..!

ವೈದ್ಯೆಗೆ ಕಿರುಕುಳ, ಅಧಿಕಾರಿಯನ್ನು ಬಂಧಿಸಲು ಆಸ್ಪತ್ರೆಯ ವಾರ್ಡ್ ಗೆ ಜೀಪ್ ಸಮೇತ ನುಗ್ಗಿದ ಪೊಲೀಸರು…..!

ವೈದ್ಯೆಯೊಬ್ಬರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಕಿರುಕುಳ ನೀಡಿದ ಅಧಿಕಾರಿಯನ್ನು ಬಂಧಿಸಲು ಪೊಲೀಸ್ ಜೀಪ್ ಸಮೇತ ಆಸ್ಪತ್ರೆಗೆ ವಾರ್ಡ್‌ಗೆ ನುಗ್ಗಿರುವ ಘಟನೆಯೊಂದು ನಡೆದಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪೊಲೀಸ್ ಜೀಪ್ ಆಸ್ಪತ್ರೆಯ ತುರ್ತು ವಿಭಾಗಕ್ಕೆ ನುಗ್ಗುವುದನ್ನು ಕಾಣಬಹುದು ಜತೆಗೆ ಕೆಲವರು ಜೀಪ್ ಗೆ ದಾರಿ ಮಾಡಿಕೊಡಲು ರೋಗಿಗಳೊಂದಿಗೆ ಸ್ಟ್ರಚರ್‍ ಗಳನ್ನು ಸಹ ಪಕ್ಕಕ್ಕೆ ತಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ.

uttarakhand police jeep enters to hospital 0

ಉತ್ತರಾಖಂಡದ ರಿಷಿಕೇಶ್‌ದಲ್ಲಿರುವ ಏಮ್ಸ್‌ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೋವೊಂದು ವೈರಲ್ ಆಗುತ್ತಿದೆ. ವಾರ್ಡ್‌ನಲ್ಲಿ ರೋಗಿಗಳ ಮಲಗಿದ್ದರೂ, ರೋಗಿಗಳ ನಡುವೆಯೇ ಪೊಲೀಸ್ ಜೀಪ್‌ ನುಗ್ಗಿಸಿದ ಪೊಲೀಸರು ತುರ್ತು ಚಿಕಿತ್ಸಾ ವಿಭಾಗಕ್ಕೆ ನುಗ್ಗಿದ್ದಾರೆ. ಏಮ್ಸ್ ಆಸ್ಪತ್ರೆಯ ಮಹಿಳಾ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ. ಲೈಂಗಿಕ ಕಿರುಕುಳ ನೀಡಿದ ನಂತರ ಆಸ್ಪತ್ರೆಯಲ್ಲಿ ಜಗಳ ಉಂಟಾಗಿತ್ತು. ನಂತರ ದೂರು ಸ್ವೀಕರಿಸಿದ ಪೊಲೀಸರು ಆಸ್ಪತ್ರೆಗೆ ಬಂದಿದ್ದಾರೆ. ಆರೋಪಿಯನ್ನು ಹಿಡಿಯಲು ಪೊಲೀಸರು ಜೀಪ್ ಸಮೇತ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗವನ್ನು ನುಗ್ಗಿದ್ದಾರೆ. ಇನ್ನೂ ಆರೋಪಿಯಾದ ರಾಜಸ್ಥಾನ ಮೂಲದ ಸತೀಶ್ ಕುಮಾರ್‍ ಎಂಬಾತನನ್ನು ಅಮಾನತ್ತು ಮಾಡಲಾಗಿದೆ. ಜೊತೆಗೆ ಆತನನ್ನು ಬಂಧನ ಮಾಡಿದ್ದು, ಐಪಿಸಿ ಸೆಕ್ಷನ್ 354 & 506 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಡಿಯೋ ನೋಡಲು ಈ ಲಿಂಕ್ ಒಪೆನ್ ಮಾಡಿ https://x.com/prabhatmedia/status/1793279796685709427

ಮಾಹಿತಿಯ ಪ್ರಕಾರ ಮೇ.19 ರಂದು ಸಂಜೆ ರಿಷಿಕೇಶ ಏಮ್ಸ್ ಆಸ್ಪತ್ರೆಯ ಆಪರೇಷನ್ ಥಿಯೇಟರ್‍ ನಲ್ಲಿ ಆಪರೇಷನ್ ಒಂದು ನಡೆಯುತ್ತಿತ್ತು. ಇದೇ ಸಮಯದಲ್ಲಿ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ನಿಯೋಜಿತರಾಗಿದ್ದ ಮಹಿಳಾ ವೈದ್ಯರಿಗೆ ನರ್ಸಿಂಗ್ ಅಧಿಕಾರಿ ಸತೀಶ್ ಕುಮಾರ್‍ ಕಿರುಕುಳ ನೀಡಿದ್ದರಂತೆ. ಇದನ್ನು ವಿರೋಧಿ ಆಸ್ಪತ್ರೆಯ ವೈದ್ಯರು ಮುಷ್ಕರ ನಡೆಸಿದ್ದು, ಆರೋಪಿಯ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಸತೀಶ್ ಕುಮಾರ್‍ ನನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಈ ಘಟನೆಯ ಸಂಬಂಧ ಉತ್ತರಾಖಂಡ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಕುಸುಮ್ ಕಂಡ್ವಾಲ್ ರವರೂ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಹಾಗೂ ಈ ಕುರಿತು ಸಮಗ್ರ ತನಿಖೆ ನಡೆಸಲು ಸಮಿಯನ್ನು ರಚನೆ ಮಾಡುವಂತೆ ಸಹ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Seraphinite AcceleratorOptimized by Seraphinite Accelerator
Turns on site high speed to be attractive for people and search engines.