Uttar Pradesh – ಇತ್ತೀಚಿನ ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ನಡೆದಂತಹ ಅಪರಾಧ ಪ್ರಕರಣಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಅದರಲ್ಲೂ ಈ ಘಟನೆ ಕೇಳಿದರೆ ನಿಮಗೆ ಆಘಾತವಾಗಬಹುದು. ಉತ್ತರ ಪ್ರದೇಶದ ಮೀರತ್‌ನಲ್ಲಿ ಒಬ್ಬ ವ್ಯಕ್ತಿ ತನ್ನ 7 ತಿಂಗಳ ಗರ್ಭಿಣಿ ಪತ್ನಿಯನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ. ಆದರೆ ಈ ಕ್ರೌರ್ಯ ಅಲ್ಲಿಗೇ ನಿಂತಿಲ್ಲ. ಕೊಲೆ ಮಾಡಿದ ನಂತರ, ತಾನೇ ಪೊಲೀಸರಿಗೆ ಕರೆ ಮಾಡಿ, ಪತ್ನಿಯ ಶವದ ಪಕ್ಕದಲ್ಲಿ ಶಾಂತವಾಗಿ ಕಾಯುತ್ತಾ ಕುಳಿತಿದ್ದನು. ಈ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
Uttar Pradesh – ಪತ್ನಿ, ಸಪ್ನಾಳನ್ನು ಕೊಂದ ಗಂಡ, ರವಿಶಂಕರ್
ಈ ಪ್ರಕರಣದಲ್ಲಿ ಕೊಲೆಯಾದ ದುರಂತ ಮಹಿಳೆ ಸಪ್ನಾ ಅವರಿಗೆ ಕೇವಲ 20 ವರ್ಷ ವಯಸ್ಸು. ಅವರ ಗಂಡ ರವಿಶಂಕರ್ ಜೊತೆ ಮದುವೆಯಾಗಿ ಕೇವಲ ಒಂದು ವರ್ಷ ಕಳೆದಿದೆ. ಇಬ್ಬರೂ ಸಂತೋಷದಿಂದ ಹೊಸ ಜೀವನ ಪ್ರಾರಂಭಿಸಿದ್ದರು. ಮದುವೆಯಾದ ಕೆಲವೇ ತಿಂಗಳಲ್ಲಿ ಸಪ್ನಾ ಗರ್ಭಿಣಿಯಾಗಿದ್ದರು. ಅಷ್ಟರಲ್ಲಿ ಏನಾಯಿತೋ ಗೊತ್ತಿಲ್ಲ, ಗಂಡ-ಹೆಂಡತಿ ಮಧ್ಯೆ ಆಗಾಗ ಜಗಳ ಶುರುವಾಗಿತ್ತು. ಸಪ್ನಾ 7 ತಿಂಗಳ ಗರ್ಭಿಣಿಯಾಗಿದ್ದರೂ, ಗಂಡನ ಜೊತೆಗಿನ ಜಗಳಗಳು ಹೆಚ್ಚಾಗಿದ್ದವು ಎನ್ನಲಾಗಿದೆ.
Uttar Pradesh – ಹತ್ಯೆಗೆ ಕಾರಣವೇನು?
ಕೆಲ ದಿನಗಳ ಹಿಂದೆ ಮತ್ತೆ ಗಂಡನ ಜೊತೆ ದೊಡ್ಡ ಜಗಳವಾಗಿ ಸಪ್ನಾ ತನ್ನ ತಂಗಿ ಪಿಂಕಿ ಮನೆಗೆ ಹೋಗಿದ್ದರು. ಅಲ್ಲಿಂದ ರವಿಶಂಕರ್ ತನ್ನ ಹೆಂಡತಿಯನ್ನು ಮನೆಗೆ ಕರೆತರಲು ಹೋದಾಗ, ಮತ್ತದೇ ಜಗಳ ಶುರುವಾಗಿ ಇಬ್ಬರೂ ಸಪ್ನಾಳ ತಂಗಿ ಮನೆಯಲ್ಲಿದ್ದ ಮೊದಲ ಮಹಡಿಯ ರೂಂನಲ್ಲಿ ಮಾತಾಡಲು ಪ್ರಾರಂಭಿಸಿದ್ದರು. ಅಲ್ಲಿ ನಡೆದ ಜಗಳದ ಪರಿಣಾಮ ಎಷ್ಟು ದೊಡ್ಡದಾಯಿತೆಂದರೆ, ಕೊನೆಗೆ ರವಿಶಂಕರ್ ತನ್ನ ಹೆಂಡತಿಯ ಗಂಟಲು ಸೀಳಿ ಕೊಲೆ ಮಾಡಿದ್ದಾನೆ. ಆಕೆಯ ಕೂಗು ಕೇಳಿದರೂ ಮನೆಯವರು ಬಾಗಿಲು ಒಡೆದು ಒಳಗೆ ಹೋಗುವಷ್ಟರಲ್ಲಿ ದುರಂತ ಸಂಭವಿಸಿತ್ತು ಎಂದು ತಿಳಿದುಬಂದಿದೆ. Read this also : ಪತ್ನಿಯ ಕತ್ತು ಸೀಳಿ ಅತ್ತೆಗೆ ಕರೆ ಮಾಡಿದ ಅಳಿಯ: ಪ್ರೀತಿಯ ವಿವಾಹ ದುರಂತ ಅಂತ್ಯ….!
Uttar Pradesh – ಪೊಲೀಸರಿಗೆ ಕರೆ ಮಾಡಿದ ಆರೋಪಿ
ಸಪ್ನಾಳನ್ನು ಕೊಲೆ ಮಾಡಿದ ನಂತರ, ರವಿಶಂಕರ್ ತಾನೇ ಪೊಲೀಸರಿಗೆ ಕರೆ ಮಾಡಿ, ತಾವು ಬರುವವರೆಗೂ ಶವದ ಪಕ್ಕದಲ್ಲಿ ಕಾಯುತ್ತಿರುವುದಾಗಿ ತಿಳಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು, ಸಪ್ನಾಳ ಗಂಟಲು ಸೀಳಿ, ಹಲವು ಬಾರಿ ಇರಿಯಲಾಗಿದೆ ಎಂದು ಪತ್ತೆ ಮಾಡಿದ್ದಾರೆ. ಕೂಡಲೇ ರವಿಶಂಕರ್ನನ್ನು ಬಂಧಿಸಲಾಗಿದ್ದು, ಸಪ್ನಾಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ.