Thursday, November 21, 2024

Update Your Aadhaar : ಸೆ.14ರೊಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿ, ಬಳಿಕ ದುಬಾರಿ ದಂಡ ವಿಧಿಸಲಾಗುತ್ತದೆ…!

ಭಾರತದಲ್ಲಿ ಆಧಾರ್‍ ಕಾರ್ಡ್ ತುಂಬಾನೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಭಾರತೀಯ ಪ್ರಜೆ ಆಧಾರ್‍ ಕಾರ್ಡ್ ಹೊಂದಿರುವುದು ಅಗತ್ಯವಾಗಿದೆ ಎಂದು ಹೇಳಬಹುದಾಗಿದೆ. ಒಮ್ಮೆ ಆಧಾರ್‍ ಕಾರ್ಡ್ ಮಾಡಿಸಿಕೊಂಡರೇ ಸಾಕು ಜೀವನ ಪರ್ಯಂತ ಮಾಡಿಸಬೇಕಾಗಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಆದರೆ ಪ್ರತೀ 10 ವರ್ಷಕ್ಕೊಮ್ಮೆ ಆಧಾರ್‍ ಕಾರ್ಡ್ ಅಪ್ಡೇಟ್ ಮಾಡೋದು ನಿಯಮವಾಗಿದೆ. ಇದೀಗ ಸೆ.14ರೊಳಗೆ 10 ವರ್ಷ ಅಪ್ಡೇಟ್ ಆಗದಂತಹ ಆಧಾರ್‍ ಕಾರ್ಡ್‌ನ್ನು ಅಪ್ಡೇಟ್ (Update Your Aadhaar) ಮಾಡಿಕೊಳ್ಳಬೇಕಾಗಿದೆ. ಸೆ.14 ರ ಬಳಿಕ ಆಧಾರ್‍ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲು ದಂಡ ಪಾವತಿಸಬೇಕಾಗಿದೆ.

Update Your Aadhaar
Update Your Aadhaar

ಹೌದು ಪ್ರತಿ 10 ವರ್ಷಕ್ಕೊಮ್ಮೆ ತಮ್ಮ ಆಧಾರ್‍ ಕಾರ್ಡ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಸೆ.14ರವೆರೆಗೂ ಯಾವುದೇ ದಂಡ ಶುಲ್ಕವಿಲ್ಲದೇ ಉಚಿತವಾಗಿ ಆಧಾರ್‍ ಅಪ್ಡೇಟ್ (Update Your Aadhaar) ಮಾಡಿಸಿಕೊಳ್ಳಬಹುದು. ಸೆ.15ರ ಬಳಿಕ ತಾವು ತಮ್ಮ ಆಧಾರ್‍ ಅಪ್ಡೇಟ್ ಮಾಡಿಕೊಳ್ಳಬೇಕಾದರೇ (Update Your Aadhaar) ದಂಡ ಪಾವತಿಸಬೇಕಾಗುತ್ತದೆ. ಒಂದು ವೇಳೆ ನಿಮ್ಮ ಆಧಾರ್‍ ಅಪ್ಡೇಟ್ ಆಗದೇ ಇದ್ದರೇ ನಿಮ್ಮ ಆಧಾರ್‍ ಮಾನ್ಯವಾಗಿರುವುದಿಲ್ಲ. ಸರ್ಕಾರದ ಸೌಲಭ್ಯಗಳು, ಬ್ಯಾಂಕಿಂಗ್ ಕೆಲಸಗಳಿಗಾಗಿ ಆಧಾರ್‍ ಕಾರ್ಡ್ ತುಂಬಾನೆ ಅನಿರ್ವಾಯವಾಗಿದೆ. ಆದ್ದರಿಂದ ಜನರು ತಮ್ಮ ಆಧಾರ್‍ ಕಾರ್ಡ್ (Update Your Aadhaar) ಕೂಡಲೇ ಅಪ್ಡೇಟ್ ಮಾಡಿಸಿಕೊಳ್ಳಬೇಕಾಗಿದೆ.

Aadhar free update ends sep 14th 0

2011 ರಿಂದ 2015 ರ ಅವಧಿಯಲ್ಲಿ ಆಧಾರ್‍ ಕಾರ್ಡ್ ಮಾಡಿಸಿದ ಆಧಾರ್‍ ಕಾರ್ಡ್ ದಾರರು ತಮ್ಮ ಆಧಾರ್‍ ಅನ್ನು ಒಮ್ಮೆ ಸಹ ಅಪ್ಡೇಟ್ ಮಾಡದೇ ಇರುವವರೂ ಕೂಡಲೇ ಅಪ್ಡೇಟ್ (Update Your Aadhaar) ಮಾಡುವುದು ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಅಪ್ಡೇಟ್ ನಲ್ಲಿ ಪ್ರಮುಖವಾಗಿ ವಿಳಾಸ, ಫೋನ್ ನಂಬರ್, ಫೋಟೋ, ಇಮೇಲ್ ಐಡಿ ಸೇರಿದಂತೆ ಇತರ ಕೆಲ ಮಾಹಿತಿಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು. ವಿಳಾಸ ಸೇರಿದಂತೆ ಯಾವುದೇ ಮಾಹಿತಿಯಲ್ಲಿ ಬದಲಾವಣೆ ಇದ್ದರೆ ಸೂಕ್ತ ದಾಖಲೆ (Update Your Aadhaar) ಸಲ್ಲಿಸಿ ಅಪ್‌ಡೇಟ್ ಮಾಡಿಕೊಳ್ಳಬೇಕು. ಇನ್ನೂ ತಾವು ಆನ್ ಲೈನ್ ಅಥವಾ ಆಫ್ ಲೈನ್ ಮೂಲಕವೂ ಆಧಾರ್‍ ಅಪ್ಡೇಟ್ ಮಾಡಿಸಿಕೊಳ್ಳಬಹುದಾಗಿದೆ.

Update Your Aadhaar
Update Your Aadhaar

ಆನ್ ಲೈನ್ ಮೂಲಕ ಈ ರೀತಿಯಾಗಿ ನಿಮ್ಮ ಆಧಾರ್‍ ಅಪ್ಡೇಟ್ ಮಾಡಿ:

ಹಂತ 1: UIDAI ವೆಬ್‌ಸೈಟ್‌ ಗೆ ಭೇಟಿ ನೀಡಿ:

ಹಂತ 2: ಅಪ್ಡೇಟ್ ಪೋರ್ಟಲ್‌ ಗೆ ಪ್ರವೇಶಿಸಿ:

  • ಮೇನು ಬಾರಿನಲ್ಲಿ “My Aadhaar” ಆಪ್ಷನ್ ಕ್ಲಿಕ್ ಮಾಡಿ.
  • “Update Your Aadhaar” ವಿಭಾಗದಲ್ಲಿ, “Update Demographics Data & Check Status” ಆಯ್ಕೆಮಾಡಿ.

ಹಂತ 3: ನಿಮ್ಮ ಖಾತೆಗೆ ಲಾಗಿನ್ ಮಾಡಿ:

  • ಆಧಾರ್ ಸ್ವಯಂ-ಸೇವಾ ಅಪ್ಡೇಟ್ ಪೋರ್ಟಲ್‌ ತೆರೆದುಕೊಳ್ಳುತ್ತದೆ.
  • “Login” ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಆಧಾರ್ ಸಂಖ್ಯೆ ಮತ್ತು CAPTCHA ಕೋಡ್ ನಮೂದಿಸಿ, ನಂತರ “Send OTP” ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರಲಿದೆ. OTP ನಮೂದಿಸಿ ಲಾಗಿನ್ ಮಾಡಿ.

ಹಂತ 4: ಅಪ್ಡೇಟ್ ಆಯ್ಕೆಯನ್ನು ಆಯ್ಕೆಮಾಡಿ:

  • ಲಾಗಿನ್ ಆದ ನಂತರ, ನಿಮ್ಮ ವಿವರಗಳನ್ನು ಅಪ್ಡೇಟ್ ಮಾಡಲು ಹಲವಾರು ಆಯ್ಕೆಗಳು ಕಾಣಸಿಕೊಳ್ಳುತ್ತದೆ. ನೀವು ಯಾವ ವಿವರಗಳನ್ನು ಅಪ್ಡೇಟ್ ಮಾಡಬೇಕೆಂದು ಬಯಸುತ್ತೀರೋ (ಮನೆ ವಿಳಾಸ, ಹೆಸರು, ಜನ್ಮದಿನಾಂಕ ಮುಂತಾದುವು) ಅದನ್ನು ಆಯ್ಕೆಮಾಡಿ. ಬಳಿಕ ನಿಮ್ಮ ವಿವರಗಳನ್ನು ನಮೂದಿಸಿ

ಹಂತ 5: ‌ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ:

  • ದೃಢೀಕರಣಕ್ಕಾಗಿ ಅಗತ್ಯ ದಾಖಲೆಗಳನ್ನು (ಹೆಸರು, ವಿಳಾಸ ದೃಢೀಕರಣ) ಅಪ್‌ಲೋಡ್ ಮಾಡಲು ಮಾಡಬೇಕು.
  • ನೀವು ನಮೂದಿಸಿದ ಎಲ್ಲಾ ವಿವರಗಳನ್ನು ಪರಿಶೀಲಿಸಿ.
  • ಎಲ್ಲಾ ಮಾಹಿತಿ ಸರಿಯಾಗಿ ನಮೂದಿಸಿದರೆ, “Submit” ಮೇಲೆ ಕ್ಲಿಕ್ ಮಾಡಿ.
  • ಬಳಿಕ ಒಂದು ದೃಢೀಕರಣ ಸ್ಲಿಪ್ ರಚನೆಯಾಗುತ್ತದೆ. ಈ ಸ್ಲಿಪ್ ಅನ್ನು ಭವಿಷ್ಯ ಉಲ್ಲೇಖಕ್ಕಾಗಿ ಡೌನ್ಲೋಡ್ ಮಾಡಿ. ಇದರಲ್ಲಿ ಅಪ್ಡೇಟ್ ರಿಕ್ವೆಸ್ಟ್ ನಂಬರ್ (URN) ಇರುತ್ತದೆ, ಇದನ್ನು ನೀವು ನಿಮ್ಮ ಅಪ್ಡೇಟ್ ಸ್ಥಿತಿಯನ್ನು ತಿಳಿದುಕೊಳ್ಳಲು ಬಳಸಬಹುದು.
by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!